ರಾಂಚಿ, ನ.29 (ಪಿಟಿಐ) ರಸ್ತೆ ಅಪಘಾತದಲ್ಲಿ ಗಾಯಗೊಂಡು ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬುಡಕಟ್ಟು ಜನಾಂಗದ ಮಹಾನ್ ನಾಯಕ ಬಿರ್ಸಾ ಮುಂಡಾ ಅವರ ಮರಿ ಮೊಮಗ ಮಂಗಲ್ ಮುಂಡಾ ಅವರು ಇಂದು ಹದಯರಕ್ತನಾಳದ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ.
45 ವರ್ಷದ ಮಂಗಲ್ ಮುಂಡಾ ಅವರು ರಾಜ್ಯದ ಅಪೆಕ್‌್ಸ ಹೆಲ್ತ್ ಫೆಸಿಲಿಟಿ – ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಇಂದು ಬೆಳಿಗ್ಗೆ 12.30 ಕ್ಕೆ ಕೊನೆಯುಸಿರೆಳೆದರು.ನ. 25 ರಂದು ಜಾರ್ಖಂಡ್‌ನ ಖುಂಟಿ ಜಿಲ್ಲೆಯಲ್ಲಿ ಪ್ರಯಾಣಿಕ ವಾಹನದ ಮೇಲ್ಛಾವಣಿಯಿಂದ ಬಿದ್ದ ಮುಂಡಾ ಅವರ ತಲೆಗೆ ತೀವ್ರ ಗಾಯವಾಗಿತ್ತು.
ಬಿರ್ಸಾ ಮುಂಡಾ ಅವರ ಸಂಬಂಧಿ ಮಂಗಲ್ ಮುಂಡಾ ಅವರು ಹದಯರಕ್ತನಾಳದ ವೈಫಲ್ಯದಿಂದ ಮಧ್ಯರಾತ್ರಿ 12.30 ರ ಸುಮಾರಿಗೆ ನಿಧನರಾದರು. ಅವರು ತೀವ್ರವಾಗಿ ಗಾಯಗೊಂಡ ನಂತರ ವೆಂಟಿಲೇಟರ್‌ನಲ್ಲಿದ್ದರು. ನಾವು ಅವರನ್ನು ಉಳಿಸಲು ನಮ ಅತ್ಯುತ್ತಮ ಪ್ರಯತ್ನ ಮಾಡಿದರೂ ವಿಫಲವಾಗಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ಹಿರೇನ್ ಬಿರುವಾ ಪಿಟಿಐಗೆ ತಿಳಿಸಿದರು.
ಮುಂಡಾ ಅವರ ಚಿಕಿತ್ಸೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ, ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಕಚೇರಿ ರಿಮ್ಸ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿತ್ತು.
ಸೋರೆನ್ ಅವರು ತಮ ಪತ್ನಿ ಮತ್ತು ಶಾಸಕಿ ಕಲ್ಪನಾ ಸೊರೆನ್ ಅವರೊಂದಿಗೆ ಬುಧವಾರ ರಿಮ್ಸೌಗೆ ಭೇಟಿ ನೀಡಿ ಮಂಗಲ್ ಮುಂಡಾ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದರು.
ರಿಮ್ಸೌನ ವೈದ್ಯರ ಪ್ರಕಾರ, ಮಂಗಲ್ ಮುಂಡಾ ಅವರ ಮೆದುಳಿಗೆ ಗಂಭೀರ ಗಾಯವಾಗಿತ್ತು ಮತ್ತು ಮೆದುಳಿನ ಎರಡೂ ಬದಿಗಳಲ್ಲಿ ರಕ್ತ ಹೆಪ್ಪುಗಟ್ಟಿತ್ತು. ರಿಮ್ಸೌನ ನರಶಸ್ತ್ರಚಿಕಿತ್ಸಾ ವಿಭಾಗದ ಎಚ್‌ಒಡಿ ಡಾ.ಆನಂದ ಪ್ರಕಾಶ್ ನೇತತ್ವದಲ್ಲಿ ಮಂಗಳವಾರ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.
ಇಂದಿನ ಜಾರ್ಖಂಡ್‌ನಲ್ಲಿ 1875 ರಲ್ಲಿ ಜನಿಸಿದ ಬಿರ್ಸಾ ಮುಂಡಾ ಬ್ರಿಟಿಷ್ ಆಳ್ವಿಕೆಗೆ ಸವಾಲು ಹಾಕಿದ್ದರು ಮತ್ತು ಸಾವ್ರಾಜ್ಯದ ವಿರುದ್ಧ ಬುಡಕಟ್ಟು ಜನಾಂಗದವರನ್ನು ಸಜ್ಜುಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದರು. ಅವರು 25 ನೇ ವಯಸ್ಸಿನಲ್ಲಿ ಬ್ರಿಟಿಷ್ ವಶದಲ್ಲಿ ನಿಧನರಾದರು.