ಬೆಂಗಳೂರು,ಅ.19- ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷ ಬಿಜೆಪಿ ಟ್ವೀಟ್ ಮೂಲಕ ಟೀಕೆಗಳನ್ನು ಮುಂದುವರೆಸಿದೆ. ನಾವು ಮಜವಾದಿಯಲ್ಲ ಸಮಾಜವಾದಿ ಎಂದಾದರೂ ತೋರಿಸಿ ಎಂದು ಸವಾಲು ಹಾಕಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ವಿರೋಧ ಪಕ್ಷದಲ್ಲಿದ್ದಾಗ ಸುಳ್ಳು ಆರೋಪಗಳನ್ನು ಮಾಡಿ ನ್ಯಾಯಾಂಗ ತನಿಖೆ ಆಗಬೇಕೆಂದು ಆಗ್ರಹಿಸುತ್ತಿದ್ದ ಸಿದ್ದರಾಮಯ್ಯ ಅವರು ಇಂದು ನ್ಯಾಯಾಂಗ ತನಿಖೆಗೆ ಕೊಡಬೇಕಾದ ಪ್ರಕರಣಗಳ ಪಟ್ಟಿ ಎಂದು ಹಲವು ಪ್ರಕರಣಗಳನ್ನು ಉಲ್ಲೇಖಿಸಿದೆ.
ಸಿದ್ದರಾಮಯ್ಯ ಅವರು ಶುದ್ಧ ಹಸ್ತರು, ಸಾಚಾಗಳು ಎಂದು ಸಾಬೀತುಪಡಿಸಲೇಬೇಕಾದ ಸಮಯ ಬಂದಿದೆ. ಕೈಯಲ್ಲಿ ಅಧಿಕಾರವಿದೆ ನ್ಯಾಯಾಂಗ ತನಿಖೆ ಕೊಟ್ಟು ನಾವು ಮಜವಾದಿಯಲ್ಲ ಸಮಾಜವಾದಿ ಎಂದಾದರೂ ತೋರಿಸಿ ಸವಾಲೊಡ್ಡಿದೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬಿಜೆಪಿ ಸರ್ಕಾರದ ಹಿಂದಿನ ಹಗರಣಗಳ ತನಿಖೆಗೆ ಮುಂದಾಗಿದೆ. ಈಗಾಗಲೇ ಬಿಟ್ ಕಾಯಿನ್ ಹಗರಣವನ್ನು ಮರು ತನಿಖೆ ನಡೆಸಲಾಗುತ್ತಿದೆ.
ಆಸ್ಪತ್ರೆ ಮೇಲಿನ ದಾಳಿಯಲ್ಲಿ ಇಸ್ರೇಲ್ ಪಾತ್ರವಿಲ್ಲ : ಅಮೆರಿಕ ಸ್ಪಷ್ಟನೆ
ಬಿಜೆಪಿ ಸರ್ಕಾರದ ವೇಳೆ ಭಾರೀ ಚರ್ಚೆಗೆ ಕಾರಣವಾಗಿದ್ದ ಶೇ.40ರಷ್ಟು ಕಮೀಷನ್ ಪ್ರಕರಣದ ಕುರಿತು ನ್ಯಾಯಾಂಗ ತನಿಖೆಗೆ ಸರ್ಕಾರ ನಿರ್ಧರಿಸಿದೆ. ಅಲ್ಲದೇ 545 ಪಿಎಸ್‍ಐ ನೇಮಕಾತಿ ಹಗರಣದ ನ್ಯಾಯಾಂಗ ತನಿಖೆಗೆ ಸಹ ಕಾಂಗ್ರೆಸ್ ಸರ್ಕಾರ ಆದೇಶ ನೀಡಿದೆ.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಡೆದ ಶಿವಮೊಗ್ಗದ ಕಲ್ಲು ತೂರಾಟ ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ಪ್ರತಿಪಕ್ಷ ಬಿಜೆಪಿ ಒತ್ತಾಯಿಸುತ್ತಿದೆ. ಈಗ ಪ್ರತಿಪಕ್ಷ ಬಿಜೆಪಿ ಕಾಂಗ್ರೆಸ್ ಸರ್ಕಾರದ ವರ್ಗಾವಣೆ ದಂಧೆ ಮುಂತಾದ ವಿಚಾರ ಮುಂದಿಟ್ಟುಕೊಂಡು ನ್ಯಾಯಾಂಗ ತನಿಖೆಯ ಕುರಿತು ಬಿಜೆಪಿ ಟ್ವೀಟ್‍ನಲ್ಲಿ ಉಲ್ಲೇಖಿಸಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಸಚಿವರು ಕಾಣೆಯಾಗಿದ್ದಾರೆ ಎಂಬ ಅಭಿಯಾನವನ್ನು ನಡೆಸುತ್ತಿದೆ.
ರಾಹುಲ್ ಅಣತಿಯಂತೆ ಹಮಾಸ್‍ಗೆ ಕಾಂಗ್ರೆಸ್ ಬೆಂಬಲಿಸಿದೆ ; ಹಿಮಂತ್ ಬಿಸ್ವಾ
ಬುಧವಾರ, ಡಿಯರ್ ಕರ್ನಾಟಕ ಕಾಂಗ್ರೆಸ್ ಸದಾ ಸಾಮಾಜಿಕ ಜಾಲತಾಣಗಳಲ್ಲೇ ಕಾಲಹರಣ ಮಾಡುವ ಸತ್ಯ ಸಂಶೋಧನಾ ಮಂತ್ರಿಗಳಾದ ಪ್ರಿಯಾಂಕ್ ಖರ್ಗೆ ಅವರು ಕಾಣೆಯಾಗಿದ್ದಾರೆ ಎಂದು ಪೋಸ್ಟರ್ ಹಾಕಿತ್ತು. ಕಾಂಗ್ರೆಸ್‍ನ ದುರಾಡಳಿತಕ್ಕೆ ಬೇಸತ್ತ ಗ್ರಾಮವಾಸಿಗರು ಗ್ರಾಮೀಣಾಭಿವೃದ್ಧಿ ಸಚಿವರ ಶೋಧನೆಯಲ್ಲಿ ತೊಡಗಿದ್ದು, ಇವರು ಸೇರಿಕೊಂಡಿರುವ ಜಾಗದ ಖಚಿತ ಮಾಹಿತಿಗಾಗಿ ಕಾದು ಕೂತಿದ್ದಾರೆ. ದಯವಿಟ್ಟು ಹುಡುಕಿ ಕೊಡಿ! ಎಂದು ಮನವಿ ಮಾಡುವ ಮೂಲಕ ವ್ಯಂಗ್ಯ ಮಾಡಿತ್ತು.
ಬಿಜೆಪಿ ಟ್ವೀಟ್ ಹೀಗಿದೆ
- ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ವಿರುದ್ಧ ನ್ಯಾಯಾಂಗ ತನಿಖೆ ಆಗಬೇಕು..!
- ಶ್ಯಾಡೋ ಸಿಎಂ ವರ್ಗಾವಣೆ ದಂಧೆ ವಿರುದ್ಧ ನ್ಯಾಯಾಂಗ ತನಿಖೆ ಆಗಬೇಕು!
- ಹಣ ಸಂಗ್ರಹಿಸಿ ಸಿಕ್ಕಿಬಿದ್ದಿರುವ #ATMSarkaraದ ಮೇಲೆ ನ್ಯಾಯಾಂಗ ತನಿಖೆ ಆಗಬೇಕು..!
- ಕಾಸಿಗಾಗಿ ಫೋಸ್ಟಿಂಗ್ ಮಾಡಿರುವ ಕಾಂಗ್ರೆಸ್ ಮೇಲೆ ನ್ಯಾಯಾಂಗ ತನಿಖೆ ಆಗಬೇಕು..!
- ಚುನಾವಣೆ ವೇಳೆ ಕುಕ್ಕರ್, ಇಸ್ತ್ರಿ ಪಟ್ಟಿಗೆ ಹಂಚಿರುವ ಸಿದ್ದರಾಮಯ್ಯ ಅವರ ಮೇಲೆ ನ್ಯಾಯಾಂಗ ತನಿಖೆ ಆಗಬೇಕು..!