Friday, May 17, 2024
Homeರಾಜಕೀಯನನ್ನ ಹೇಳಿಕೆಗೂ, ಹೈಕೋರ್ಟ್ ಆದೇಶಕ್ಕೂ ಸಂಬಂಧವಿಲ್ಲ : ಹೆಚ್‌ಡಿಕೆ

ನನ್ನ ಹೇಳಿಕೆಗೂ, ಹೈಕೋರ್ಟ್ ಆದೇಶಕ್ಕೂ ಸಂಬಂಧವಿಲ್ಲ : ಹೆಚ್‌ಡಿಕೆ

ಬೆಂಗಳೂರು,ಅ.19- ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಆದೇಶಕ್ಕೂ ನಾನು ಈ ಹಿಂದೆ ನೀಡಿದ್ದ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಸಿಬಿಐನವರು ನೀಡಿದ ಮಾಹಿತಿ ಆಧಾರದ ಮೇಲೆ ನ್ಯಾಯಾಲಯ ತೀರ್ಪು ಕೊಟ್ಟಿದೆ. ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಸಿಬಿಐಗೂ ನ್ಯಾಯಾಲಯ ಗಡುವು ನೀಡಿದ್ದು, ಮುಂದೇನಾಗಲಿದೆ ಎಂಬುದನ್ನು ಕಾದು ನೋಡೋಣ ಎಂದರು.

ರಾಮನಗರದಿಂದ ಗಂಟುಮೂಟೆ ಕಟ್ಟಿ ಹಾಸನಕ್ಕೆ ಕಳುಹಿಸುವುದಾಗಿ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ ಹೇಳುತ್ತಿದ್ದಾರೆ ಎಂದು ನಮ್ಮ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಡಿ.ಕೆ ಸಹೋದರರ ಬಗ್ಗೆ ನೀವು ಮೃಧು ಧೋರಣೆ ತಳೆದಿದ್ದೀರಿ ಎಂದು ಪಕ್ಷದ ಸಭೆಯಲ್ಲಿ ಕಾರ್ಯಕರ್ತರು ಆಗ್ರಹಿಸಿದಾಗ, ನಾನು ಮಾತನಾಡಿ ಸಂತೋಷವಾಗಿ ಹಾಸನಕ್ಕೆ ಹೋಗಬಹುದು. ಆದರೆ ಅವರು ಎಲ್ಲಿಗೆ ಹೋಗಬಹುದೆಂದು ಕೇಳಿದ್ದೆ ಎಂದು ತಮ್ಮ ಹೇಳಿಕೆ ಬಗ್ಗೆ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

ಆಸ್ಪತ್ರೆ ಮೇಲಿನ ದಾಳಿಯಲ್ಲಿ ಇಸ್ರೇಲ್ ಪಾತ್ರವಿಲ್ಲ : ಅಮೆರಿಕ ಸ್ಪಷ್ಟನೆ

ನನ್ನನ್ನೇ ಟಾರ್ಗೆಟ್: ಆಪರೇಷನ್ ಕಮಲದ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾನೇ ಎರಡು ಬಾರಿ ಆಪರೇಷನ್ ಮಾಡಿಸಿಕೊಂಡಿದ್ದೇನೆ. ಅದರ ಅನುಭವ ನನಗಿದೆ. ಆದರೆ ಪದೇ ಪದೇ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ಆಪರೇಷನ್ ಕಮಲದ ವಿಚಾರದ ಬಗ್ಗೆ ಮಾತನಾಡುವುದಿಲ್ಲ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡೋಣ. ದೇಶದಲ್ಲಿ ದರೋಡೆ ಮಾಡಿದವರಿಗೆ ಸಹಾನುಭೂತಿ ವ್ಯಕ್ತವಾಗುತ್ತದೆ. ಏನೂ ಮಾಡದೆ ಇರುವವರು ಸಮಸ್ಯೆ ಅನುಭವಿಸುವಂತಾಗಿದೆ. ಈ ಅನುಕಂಪವನ್ನು ಯಾರು ಬೇಕಾದರೂ ಬಳಸಿಕೊಳ್ಳಬಹುದಾದ ವಾತಾವರಣವಿದೆ. ಅದಕ್ಕೆ ನಾನೇಕೆ ಬಲಿಯಾಗಬೇಕು ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ರಾಹುಲ್ ಅಣತಿಯಂತೆ ಹಮಾಸ್‍ಗೆ ಕಾಂಗ್ರೆಸ್ ಬೆಂಬಲಿಸಿದೆ ; ಹಿಮಂತ್ ಬಿಸ್ವಾ

ಆಕ್ರೋಶ: ಹಿಂದೂ ಸಂಸ್ಕøತಿಯಲ್ಲಿ ಅರಿಶಿಣ-ಕುಂಕುಮ ಹಾಕಬಾರದು ಎಂಬ ನಿಯಮವಿದೆಯೇ ಸರ್ಕಾರದ ಹಿನ್ನಲೆ ಏನೆಂಬುದು ಆದೇಶ ಗಮನಿಸಿದರೆ ಗೊತ್ತಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ವಿಧಾನಸೌಧದಲ್ಲಿ ಅರಿಶಿಣ-ಕುಂಕುಮ ಬಳಕೆಗೆ ನಿರ್ಬಂಧ ವಿಧಿಸಿರುವ ವಿಚಾರಣದಿಂದ ಸ್ಪಷ್ಟವಾಗಲಿದೆ. ಈ ಸರ್ಕಾರದಿಂದ ನಾಡಿಗೆ ಯಾವುದೇ ಶುಭ ದಿನ ಕಾಣುವುದಿಲ್ಲ ಎಂಬುದು ಈ ನಿರ್ಧಾರದಿಂದ ಗೊತ್ತಾಗಲಿದೆ ಎಂದು ಆರೋಪಿಸಿದರು.

RELATED ARTICLES

Latest News