Thursday, November 30, 2023
Homeಬೆಂಗಳೂರುಮೆಟ್ರೋದಲ್ಲಿ ಸ್ಟಂಟ್ ಮಾಡಿದ ವಿದ್ಯಾರ್ಥಿಗೆ ಬಿತ್ತು ದಂಡ

ಮೆಟ್ರೋದಲ್ಲಿ ಸ್ಟಂಟ್ ಮಾಡಿದ ವಿದ್ಯಾರ್ಥಿಗೆ ಬಿತ್ತು ದಂಡ

ಬೆಂಗಳೂರು,ಅ.19-ಮೆಟ್ರೋ ರೈಲಿನೊಳಗೆ ಸ್ಟಂಟ್ ಮಾಡಿದ ವಿದ್ಯಾರ್ಥಿಗೆ ಬಿಎಂಆರ್‌ಸಿಎಲ್‌ ರೂ.500 ದಂಡ ವಿಧಿಸಿ ಎಚ್ಚರಿಕೆ ನೀಡಿದೆ. ಕಳೆದ ಮಂಗಳವಾರ ರಾತ್ರಿ 11ರ ಸುಮಾರಿಗೆ ಕಳೆದ ಮೂವರು ವಿದ್ಯಾರ್ಥಿಗಳು ಮೂವರೂ ದಾಸರಹಳ್ಳಿಯಲ್ಲಿ ಮೆಟ್ರೋ ರೈಲು ಹತ್ತಿ ಯಲಚೇನಹಳ್ಳಿಗೆ ಹೋಗುತ್ತಿದ್ದರು ಇನ್ನೇನು ಕೊನೆ ನಿಲ್ದಾಣ ಬರುತ್ತಿದಂತೆ ಒಬ್ಬ ಚಲಿಸುತ್ತಿದ್ದ ರೈಲಿನೊಳಗೆ ಹ್ಯಾಂಡಲ್‍ಬಾರ್‍ಗಳನ್ನು ಹಿಡಿದಿರುವುದು ಸ್ಟಂಟ್ ಮಾಡಿದ್ದಾನೆ.

ಡಾಬರ್ ಉತ್ಪನ್ನಗಳ ವಿರುದ್ಧ ಅಮೆರಿಕ, ಕೆನಡಾದಲ್ಲಿ ಕೇಸ್

ವಿದ್ಯಾರ್ಥಿಗಳ ಕಸರತ್ತನ್ನು ವಿಡಿಯೋ ಮಾಡಿದ ಮೆಟ್ರೋ ಸಿಬ್ಬಂದಿ ಅದನ್ನು ಯಲಚೇನಹಳ್ಳಿ ಭದ್ರತಾ ಸಿಬ್ಬಂದಿಗೆ ತೋರಿಸಿದ್ದಾರೆ. ಅದೇ ನಿಲ್ದಾಣದಲ್ಲಿ ಸಿಬ್ಬಂದಿ ವಿದ್ಯಾರ್ಥಿಗಳನ್ನು ತಡೆದು ರೂ.500 ದಂಡ ವಿಧಿಸಿದ್ದಾರೆ. ಅಲ್ಲದೆ, ಮೆಟ್ರೋದಲ್ಲಿ ಈ ರೀತಿಯ ವರ್ತನೆ ತೋರದಂತೆ ಎಚ್ಚರಿಕೆ ಕೂಡಕಳುಹಿಸಿದ್ದಾರೆ.

ಮೆಟ್ರೋ ರೈಲಿನ ಪರಿಕರಕ್ಕೆ ಯಾವುದೇ ಹಾನಿಯಾಗಿಲ್ಲ ,ಹೀಗಾಗಿ ಆತನಿಗೆ ರೂ.500 ದಂಡ ವಿಧಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಕಾರ್ಯಾಚರಣೆ ಹಾಗೂ ನಿರ್ವಹಣೆ ವಿಭಾಗದ ಮುಖ್ಯಸ್ಥ ಶಂಕರ್ ತಿಳಿಸಿದ್ದಾರೆ.

RELATED ARTICLES

Latest News