ನವದೆಹಲಿ,ಡಿ.29- ಮುಂಬರುವ 2024ರ ಲೋಕಸಭಾ ಚುನಾವಣೆಗೆ ಮೊದಲು ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಇರುವ ಅನೇಕ ಕೇಂದ್ರ ಸಚಿವರ ರಾಜ್ಯಸಭಾ ಅಧಿಕಾರಾವಧಿಯು ಕೊನೆಗೊಳ್ಳಲಿದೆ. ಇದರಲ್ಲಿ ಮೋದಿ ಸರ್ಕಾರದ ಹಿರಿಯ ಸಚಿವರಾದ ಡಾ.ಮನ್ಸುಖ್ ಮಾಂಡವಿಯಾ, ಧರ್ಮೇಂದ್ರ ಪ್ರಧಾನ್, ಭೂಪೇಂದ್ರ ಯಾದವ್, ಜ್ಯೋತಿರಾದಿತ್ಯ ಸಿಂಯಾ, ಪುರುಷೋತ್ತಮ್ ರೂಪಾಲಾ, ರಾಜೀವ್ ಚಂದ್ರಶೇಖರ್, ನಾರಾಯಣ ರಾಣೆ ಮತ್ತು ಅಶ್ವಿನಿ ವೈಷ್ಣವ್ ಅವರ ಹೆಸರುಗಳು ಸೇರಿವೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸುಶೀಲ್ ಕುಮಾರ್ ಮೋದಿ, ಪ್ರಕಾಶ್ ಜಾವಡೇಕರ್, ಸರೋಜ್ ಪಾಂಡೆ, ಅನಿಲ್ ಬಲುನಿ, ಸುಧಾಂಶು ತ್ರಿವೇದಿ, ಅನಿಲ್ ಜೈನ್, ಕಾಂತ ಕರ್ದಮ, ಸಕಲದೀಪ್ ರಾಜ್‍ಭರ್, ಜೆವಿಎಲ್ ನರಸಿಂಹ ರಾವ್ ಸೇರಿದಂತೆ ಹಲವು ಪ್ರಮುಖರು ಸೇರಿದ್ದಾರೆ.
ಹೊಸ ವರ್ಷದ ಆರಂಭದಲ್ಲಿ, ಲೋಕಸಭಾ ಚುನಾವಣೆಗೆ ಮುನ್ನ, ಬಿಜೆಪಿಯ 32 ರಾಜ್ಯಸಭಾ ಸಂಸದರ ಅಧಿಕಾರಾವಧಿ ಕೊನೆಗೊಳ್ಳಲಿದ್ದು, ಈ ಹೆಚ್ಚಿನ ಸದಸ್ಯರ ಅಧಿಕಾರಾವಧಿಯು ಏಪ್ರಿಲ್ 2, 2024 ರಂದು ಕೊನೆಗೊಳ್ಳಲಿದೆ. ಇಂತಹ ಪರಿಸ್ಥಿತಿಯಲ್ಲಿ ಮೋದಿ ಸರ್ಕಾರದ ಈ ಸಚಿವರು ಏಪ್ರಿಲ್ 2, 2024 ರ ನಂತರ ರಾಜೀನಾಮೆ ನೀಡುತ್ತಾರಾ ಅಥವಾ ಅವರ ಸಚಿವ ಸ್ಥಾನಗಳು ಹಾಗೆಯೇ ಉಳಿಯುತ್ತವೆಯೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಜೊತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಪರಿಸರ ಸಚಿವ ಭೂಪೇಂದ್ರ ಯಾದವ್, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಡಾ.ಮನ್ಸುಖ್ ಮಾಂಡವಿಯಾ, ರೈಲ್ವೆ ಮತ್ತು ಟೆಲಿಕಾಂ ಅಶ್ವಿನಿ ವೈಷ್ಣವ್ ಮತ್ತು ಸಂವಹನ ಸಚಿವಾಲಯದ ಉಸ್ತುವಾರಿ ಹೊಂದಿರುವ ಪುರುಷೋತ್ತಮ್ ರೂಪಾಲಾ ಅವರು ಲೋಕಸಭೆ ಚುನಾವಣೆಯಲ್ಲಿ ಸ್ರ್ಪಧಿಸಬಹುದು ಎಂದು ಹೇಳಲಾಗುತ್ತಿರುವ ಪ್ರಮುಖ ಹೆಸರುಗಳು.
ದೇಣಿಗೆ ಸಂಗ್ರಹಕ್ಕೆ ಬಾರ್ ಕೋಡ್ ಮೊರೆ ಹೋದ ಕಾಂಗ್ರೆಸ್
ಜೊತೆಗೆ ಬಿಜೆಪಿ ಮೂಲಗಳನ್ನು ನಂಬುವುದಾದರೆ, ಮನ್ಸುಖ್ ಮಾಂಡವಿಯಾ ಗುಜರಾತ್‍ನಿಂದ, ಜ್ಯೋತಿರಾದಿತ್ಯ ಸಿಂಧಿಯಾ ಮಧ್ಯಪ್ರದೇಶದಿಂದ, ಭೂಪೇಂದ್ರ ಯಾದವ್ ಮತ್ತು ರಾಜಸ್ಥಾನದಿಂದ ಅಶ್ವಿನಿ ವೈಷ್ಣವ್ ಲೋಕಸಭೆ ಚುನಾವಣೆಗೆ ಸ್ರ್ಪಧಿಸಬಹುದು. ಇನ್ನು, ಧರ್ಮೇಂದ್ರ ಪ್ರಧಾನ್ ಒಡಿಶಾದಿಂದ ಲೋಕಸಭೆ ಚುನಾವಣೆಗೆ ಸ್ರ್ಪಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೊಸ ವರ್ಷದಲ್ಲಿ ರಾಜ್ಯಸಭೆಯ 69 ಸ್ಥಾನಗಳು ಖಾಲಿಯಾಗುತ್ತಿದ್ದು, ಈ ಪೈಕಿ 56 ಸ್ಥಾನಗಳು ಲೋಕಸಭೆ ಚುನಾವಣೆಗೆ ಮುನ್ನ ಅಂದರೆ ಏಪ್ರಿಲ-ಮೇ ವೇಳೆಗೆ ಖಾಲಿಯಾಗಲಿವೆ. ಇವರಲ್ಲಿ ಕಾಂಗ್ರೆಸ್, ಆರ್‍ಜೆಡಿ, ಜೆಡಿಯು, ಶಿವಸೇನೆ ಸೇರಿದಂತೆ ಹಲವು ಪಕ್ಷಗಳ ಸಂಸದರೂ ಇದ್ದಾರೆ. ಇದೇ ವೇಳೆ ಬಿಜೆಪಿಯ ಎಂಟು ಸಚಿವರ ಅವಧಿಯೂ ಇದೇ ಅವಧಿಯಲ್ಲಿ ಕೊನೆಗೊಳ್ಳಲಿದೆ. ಆದರೆ, ಈ ಸಚಿವರ ಅಧಿಕಾರಾವಧಿ ಮುಗಿದ ಬಳಿಕ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಹಲವು ರಾಜ್ಯಸಭಾ ಸಂಸದರು ಹಾಗೂ ಸಚಿವರೂ ಲೋಕಸಭೆ ಚುನಾವಣೆಗೆ ಸ್ರ್ಪಧಿಸುತ್ತಿರುವ ಸಾಧ್ಯತೆ ಇದೆ.
ಮೋದಿ ಸಂಪುಟದ ಎಂಟು ಸಚಿವರು ತಮ್ಮ ಸಂಸದರ ಅವಧಿ ಮುಗಿದ ನಂತರವೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ನಿಯಮಗಳು ಹೇಳುತ್ತವೆ, ಏಕೆಂದರೆ ಸಂವಿಧಾನದ ಅಡಿಯಲ್ಲಿ ಯಾವುದೇ ವ್ಯಕ್ತಿ ಸಂಸತ್ತಿನ ಸದಸ್ಯನಾಗದೆ ಆರು ತಿಂಗಳ ಕಾಲ ಮಂತ್ರಿಯಾಗಿ ಉಳಿಯಬಹುದು. ಸಂವಿಧಾನದ ನಿಯಮಗಳ ಪ್ರಕಾರ, ಯಾವುದೇ ವ್ಯಕ್ತಿ ಸಂಸತ್ತಿನ ಅಥವಾ ಶಾಸಕಾಂಗದ ಸದಸ್ಯರಾಗದೆಯೂ ಸಹ ಗರಿಷ್ಠ ಆರು ತಿಂಗಳವರೆಗೆ ಸಚಿವ ಸ್ಥಾನವನ್ನು ಹೊಂದಬಹುದು. ಆರು ತಿಂಗಳೊಳಗೆ ಸಂಸತ್ತಿನ ಅಥವಾ ಶಾಸಕಾಂಗದ ಸದಸ್ಯನಾಗದಿದ್ದರೆ ಅವರು ರಾಜೀನಾಮೆ ನೀಡಬೇಕಾಗುತ್ತದೆ. ಈ ದೃಷ್ಟಿಯಿಂದ ನೋಡಿದರೆ ಮೋದಿ ಸರ್ಕಾರದ ಈ ಮಂತ್ರಿಗಳು ಸಚಿವ ಸ್ಥಾನ ಕಳೆದುಕೊಳ್ಳುವ ಅಪಾಯವಿಲ್ಲ.
ಭ್ರಷ್ಟಾಚಾರ ತನಿಖೆಗೆ ಸಿಬಿಐಗೆ ಸಾಮಾನ್ಯ ಅನುಮತಿ ನೀಡಿದ ಮಿಜೋರಾಂ
ಸದ್ಯ ಹೊಸ ವರ್ಷದಲ್ಲಿ ರಾಜ್ಯಸಭೆಯ 69 ಸ್ಥಾನಗಳು ಖಾಲಿಯಾಗುತ್ತಿದ್ದು, ಈ ಪೈಕಿ 56 ಸ್ಥಾನಗಳು ಲೋಕಸಭೆ ಚುನಾವಣೆಗೆ ಮುನ್ನ ಅಂದರೆ ಏಪ್ರಿಲï-ಮೇ ವೇಳೆಗೆ ಖಾಲಿಯಾಗಲಿವೆ. ಈ ಬಗ್ಗೆ ಆಯಾ ಪಕ್ಷಗಳು ಏನು ಮಾಡುತ್ತವೆ ಎನ್ನುವುದನ್ನು ಕಾದು ನೋಡಬೇಕಿದೆ.