Thursday, May 2, 2024
Homeರಾಷ್ಟ್ರೀಯದೇಣಿಗೆ ಸಂಗ್ರಹಕ್ಕೆ ಬಾರ್ ಕೋಡ್ ಮೊರೆ ಹೋದ ಕಾಂಗ್ರೆಸ್

ದೇಣಿಗೆ ಸಂಗ್ರಹಕ್ಕೆ ಬಾರ್ ಕೋಡ್ ಮೊರೆ ಹೋದ ಕಾಂಗ್ರೆಸ್

ನಾಗ್ಪುರ,ಡಿ.29- ಕುರ್ಚಿಗಳ ಹಿಂದೆ ಬಾರ್ ಕೋಡ್ ಹಾಕುವ ಮೂಲಕ ಚುನಾವಣಾ ದೇಣಿಗೆ ಸಂಗ್ರಹಕ್ಕೆ ಕಾಂಗ್ರೆಸ್ ಮುಂದಾಗಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ರ್ಯಾಲಿಯಲ್ಲಿ ಕ್ರೌಡ್ ಫಂಡಿಂಗ್‍ಗಾಗಿ ಕಾಂಗ್ರೆಸ್ ಬಾರ್ ಕೋಡ್‍ಗಳನ್ನು ಕುರ್ಚಿಗಳ ಹಿಂದೆ ಹಾಕಿತ್ತು.

ಈ ತಿಂಗಳ ಆರಂಭದಲ್ಲಿ ಪ್ರಾರಂಭಿಸಲಾದ ಕಾಂಗ್ರೆಸ್ ಕ್ರೌಡ್‍ಫಂಡಿಂಗ್ ಅಭಿಯಾನದ ಭಾಗವಾಗಿ ದೇಶಕ್ಕಾಗಿ ದೇಣಿಗೆ ಎಂಬ ಬರಹವಿದ್ದ ಬಾರ್‍ಕೋಡ್‍ಗಳನು ಮೈದಾನದ ಎಲ್ಲಾ ಕುರ್ಚಿಗಳ ಹಿಂದೆ ಅಂಟಿಸಲಾಗಿತ್ತು. ಮತ್ತು ಹೈನ್ ತೈಯಾರ್ ಹಮ ರ್ಯಾಲಿಯಲ್ಲಿ ಭಾಗವಹಿಸಿದವರಿಗೆ ದೇಣಿಗೆ ನೀಡುವಂತೆ ಒತ್ತಾಯಿಸಲಾಗಿದೆ. ಕುರ್ಚಿಗಳ ಹಿಂದಿರುವ ಕರಪತ್ರದಲ್ಲಿ ಬಾರ್ ಕೋಡ್‍ನೊಂದಿಗೆ ರಾಹುಲ್ ಗಾಂಧಿ ಅವರ ಚಿತ್ರವಿದೆ.

ಕರಪತ್ರದಲ್ಲಿ ಉತ್ತಮ ಭಾರತ ರಚನೆಗಾಗಿ 138 ವರ್ಷಗಳ ಈ ಹೋರಾಟದಲ್ಲಿ ಕಾಂಗ್ರೆಸ್‍ಗೆ ನಿಮ್ಮ ಅಗತ್ಯವಿದೆ. ಭಾರತಕ್ಕೆ ನಿಮ್ಮ ಅಗತ್ಯವಿದೆ. ದೇಣಿಗೆ ನೀಡಲು ಈಗಲೇ ಸ್ಕ್ಯಾನ್ ಮಾಡಿ ಎಂದು ಬರೆಯಲಾಗಿದೆ. ಎಲ್ಲಾ ದಾನಿಗಳ ಪೈಕಿ ಐದು ಅದೃಷ್ಟ ದಾನಿಗಳಿಗೆ ರಾಹುಲ್ ಗಾಂಧಿ ಅವರಿಂದ ದೇಣಿಗೆ ಮೆಚ್ಚುಗೆ ಪ್ರಮಾಣಪತ್ರವನ್ನು ನೀಡಲಾಗುವುದು ಎಂದು ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಅನ್ಯಾಯಕ್ಕೆ ಹೆಸರಾದವರಿಂದ ನ್ಯಾಯ ಯಾತ್ರೆ : ಇರಾನಿ ವ್ಯಂಗ್ಯ

ಹೈ ತೈಯಾರ್ ಹಮ ರ್ಯಾಲಿಯಲ್ಲಿ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಮಹಾರಾಷ್ಟ್ರ ಮತ್ತು ದೇಶದಾದ್ಯಂತ ಹಳೆಯ ಪಕ್ಷವು ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದು ಸಿದ್ಧಾಂತಗಳ ಹೋರಾಟ. ನಾವು ಒಟ್ಟಾಗಿ ಮಹಾರಾಷ್ಟ್ರ ಮತ್ತು ದೇಶದಲ್ಲಿ ಚುನಾವಣೆಗಳನ್ನು ಗೆಲ್ಲಲಿದ್ದೇವೆ ಎಂದು ಗಾಂಧಿ ಹೇಳಿದರು.

ಕಾಂಗ್ರೆಸ್ ನಾಯಕರು ತಮ್ಮ ಭಾಷಣದಲ್ಲಿ, ದೇಶದಲ್ಲಿ ಎರಡು ವಿರುದ್ಧ ಸಿದ್ಧಾಂತಗಳ ನಡುವೆ ಸಂಘರ್ಷ ನಡೆಯುತ್ತಿದೆ ಎಂದು ಉಲ್ಲೇಖಿಸಿದ್ದಾರೆ. ದೇಶದಲ್ಲಿ ಸಿದ್ಧಾಂತಗಳ ಹೋರಾಟ ನಡೆಯುತ್ತಿದೆ, ಇದು ರಾಜಕೀಯ ಹೋರಾಟ, ಅಧಿಕಾರಕ್ಕಾಗಿ ಹೋರಾಟ ಎಂದು ಜನರು ಭಾವಿಸುತ್ತಾರೆ, ಆದರೆ ಈ ಹೋರಾಟದ ಅಡಿಪಾಯವು ಸಿದ್ಧಾಂತ, ಎರಡು ವಿರುದ್ಧವಾದ ಸಿದ್ಧಾಂತಗಳು. (ದೇಶ ಮೈ ವಿಚಾರಧಾರ ಕಿ ಲಡಾಯಿ ಚಲ್ ರಹೀ ಹೈ, ಲೋಗೋ ಕೋ ಲಗ್ತಾ ಹೈ ರಾಜನೀತಿಕ್ ಲಡಾಯಿ ಹೈ, ಸತ್ತಾ ಕಿ ಲಡಾಯಿ ಹೈ, ವೋ ಹೈ, ಮಗರ್ ಇಸ್ಸ್ ಲಡೈ ಕಿ ನೀವ್ ಜೋ ಹೈ ವೋ ವಿಚಾರಧಾರಾ ಹೈ, ದೋ ವಿಚಾರಧಾರಾ ಹೈ, ಎಂದು ರಾಹುಲ್ ಗಾಂಧಿ ಹೇಳಿದರು.

RELATED ARTICLES

Latest News