Thursday, May 2, 2024
Homeಅಂತಾರಾಷ್ಟ್ರೀಯಕೆನಡಾದಲ್ಲಿ ಭಾರತೀಯನ ಮನೆ ಮೇಲೆ ಗುಂಡಿನ ದಾಳಿ

ಕೆನಡಾದಲ್ಲಿ ಭಾರತೀಯನ ಮನೆ ಮೇಲೆ ಗುಂಡಿನ ದಾಳಿ

ಒಟ್ಟಾವಾ,ಡಿ.29- ಕೆನಡಾದ ಸರ್ರೆಯಲ್ಲಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರ ನಿವಾಸದ ಮೇಲೆ ಗುಂಡಿನ ದಾಳಿ ನಡೆದಿದೆ. ಈ ದಾಳಿಯ ಬಗ್ಗೆ ರಾಯಲ್ ಕೆನಡಿಯನ್ ಮೊಂಟೆಡ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸರ್ರೆಯಲ್ಲಿರುವ ಲಕ್ಷ್ಮೀ ನಾರಾಯಣ ಮಂದಿರದ ಅಧ್ಯಕ್ಷ ಸತೀಶ್ ಕುಮಾರ್ ಅವರ ಪುತ್ರನ ನಿವಾಸದಲ್ಲಿ ಈ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯ ಸಮಯದಲ್ಲಿ ಯಾರೂ ಗಾಯಗೊಂಡಿಲ್ಲ, ಆದರೆ ಮನೆಯ ಗೊಡೆಯ ಮೇಲೆ ಗುಂಡು ಬಿದ್ದಿರುವ ಗುರುತುಗಳು ಪತ್ತೆಯಾಗಿವೆ.

ಸರ್ರೆ ಆರ್‍ಸಿಎಂಪಿ ಸಾಮಾನ್ಯ ತನಿಖಾ ಘಟಕವು ತನಿಖೆಯನ್ನು ನಡೆಸುತ್ತಿದೆ. ಈ ಘಟನೆಯ ಉದ್ದೇಶವನ್ನು ನಿರ್ಧರಿಸಲು ಅಧಿಕಾರಿಗಳು ಇನ್ನೂ ಕೆಲಸ ಮಾಡುತ್ತಿದ್ದಾರೆ. ಯಾರಾದರೂ ಘಟನೆಯ ಡ್ಯಾಶ್ ಕ್ಯಾಮ್ ಫೂಟೇಜ್ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಸರ್ರೆ ಆರ್‍ಸಿಎಂಪಿಯನ್ನು ಸಂಪರ್ಕಿಸಲು ಕೇಳಲಾಗಿದೆ ಎಂದು ಸರ್ರೆ ಪೊಲೀಸ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಭ್ರಷ್ಟಾಚಾರ ತನಿಖೆಗೆ ಸಿಬಿಐಗೆ ಸಾಮಾನ್ಯ ಅನುಮತಿ ನೀಡಿದ ಮಿಜೋರಾಂ

ಸರ್ರೆಯ ಲಕ್ಷ್ಮೀ ನಾರಾಯಣ ಮಂದಿರಕ್ಕೆ ಬಂದ ಇತ್ತೀಚಿನ ಬೆದರಿಕೆಗಳಿಗೂ ದಾಳಿಗೂ ಯಾವುದೇ ಸಂಬಂಧವನ್ನು ಸರ್ರೆ ಪೊಲೀಸರು ದೃಢಪಡಿಸಿಲ್ಲ. ನವೆಂಬರ್‍ನಲ್ಲಿ, ಭಾರತ ಮೂಲದ ಕೆನಡಾದ ಸಂಸತ್ತಿನ ಸದಸ್ಯ ಚಂದ್ರ ಆರ್ಯ ಅವರು ಸರ್ರೆಯಲ್ಲಿರುವ ಖಲಿಸ್ತಾನಿ ಪರ ಬೆಂಬಲಿಗರು ಅಲ್ಲಿನ ಹಿಂದೂ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ತೊಂದರೆಯನ್ನು ಸೃಷ್ಟಿಸಲು ಬಯಸುತ್ತಾರೆ ಎಂದು ಹೇಳುವ ವೀಡಿಯೊವನ್ನು ಹಂಚಿಕೊಂಡಿದ್ದರು.

ಸರ್ರೆಯಲ್ಲಿರುವ ಸಿಖ್ ಗುರುದ್ವಾರದ ಹೊರಗೆ ಖಲಿಸ್ತಾನ್ ಬೆಂಬಲಿಗರು ಸಿಖ್ ಕುಟುಂಬವನ್ನು ಮೌಖಿಕವಾಗಿ ನಿಂದಿಸಿದ್ದಾರೆ. ಈಗ ಅದೇ ಖಲಿಸ್ತಾನ್ ಗುಂಪು ಸರ್ರೆಯ ಹಿಂದೂ ಲಕ್ಷ್ಮಿ ನಾರಾಯಣ ಮಂದಿರದಲ್ಲಿ ತೊಂದರೆ ಸೃಷ್ಟಿಸಲು ಬಯಸಿದೆ ಎಂದು ನಂಬಲಾಗಿದೆ.

ಕಳೆದ ವರ್ಷಗಳಲ್ಲಿ ಹಿಂದೂ ದೇವಾಲಯಗಳು ದಾಳಿಗೆ ಗುರಿಯಾಗಿವೆ ಎಂದು ಒತ್ತಿ ಹೇಳಿದ ಆರ್ಯ, ಕಳೆದ ಎರಡು ವರ್ಷಗಳಲ್ಲಿ ಹಿಂದೂ ದೇವಾಲಯಗಳ ಮೇಲೆ ಹಲವು ಬಾರಿ ದಾಳಿ ನಡೆಸಲಾಗಿದೆ. ಹಿಂದೂ-ಕೆನಡಿಯನ್ನರ ವಿರುದ್ಧ ದ್ವೇಷದ ಅಪರಾಧಗಳು ನಡೆಯುತ್ತಿವೆ ಎಂದು ಹೇಳಿದರು.

RELATED ARTICLES

Latest News