ಶಾರ್ಟ್ ಸರ್ಕ್ಯೂಟ್ ನಿಂದ ತಂದೆ ಸಾವು , ಪುತ್ರನಿಗೆ ಗಂಭೀರ ಗಾಯ

ಶಿವಮೊಗ್ಗ,ಜ.8- ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸ್ಟೆಬಿಲೈಜರ್ ಸ್ಪೋಟಗೊಂಡು ತಂದೆ ಸಾವನ್ನಪ್ಪಿ ಪುತ್ರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಕುವೆಂಪು ರಸ್ತೆಯಲ್ಲಿ ನಡೆದಿದೆ. ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದಲ್ಲಿರುವ ಪ್ರತಿಷ್ಠಿತ ಭೂಪಾಳಂ ಕುಟುಂಬದ ಮನೆಯಲ್ಲಿ ಘಟನೆ ನಡೆದಿದ್ದು ,ಎಸ್.ಶರತ್ (39) ಮೃತಪಟ್ಟಿದ್ದು ,ಪುತ್ರ ಸಂಚಿತ್(12) ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಅತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 26/11 ದಾಳಿ ಸಂದರ್ಭದಲ್ಲಿ ಬಚಾವಾಗಿದ್ದ ಗೌತಮ್ ಅದಾನಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸ್ಟೆಬಲೈಜರ್ ಸ್ಪೋಟವಾಗಿದ್ದು, ಕೂಡಲೇ ಮನೆಯಲ್ಲೇ […]

ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಪ್ರದೀಪ್ ಮನೆಗೆ ಕಾಂಗ್ರೆಸ್ ನಾಯಕರ ಭೇಟಿ

ಬೆಂಗಳೂರು,ಜ.3- ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಪ್ರದೀಪ್ ಅವರ ಮನೆಗೆ ಕಾಂಗ್ರೆಸ್ ನಾಯಕರು ಭೇಟಿ ನೀಡಿ ಸಾಂತ್ವಾನ ಹೇಳಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಇಂದು ಬೆಳಗ್ಗೆ ಬೆಂಗಳೂರಿನಲ್ಲಿರುವ ಅವರ ಮನೆಗೆ ಭೇಟಿ ನೀಡಿದರು. ಪ್ರದೀಪ್ ಅವರ ತಂದೆ, ತಾಯಿ, ಸಹೋದರ ಮತ್ತು ಪತ್ನಿ ನಮೀತಾರನ್ನು ಭೇಟಿ ಮಾಡ ಸಾಂತ್ವಾನ ಹೇಳಿದರು.ಪ್ರದೀಪ್ ಸಾವಿಗೂ ಮುನ್ನಾ ಬರೆದಿರುವ ಮರಣಪತ್ರವನ್ನು […]

ಉದ್ಯಮಿ ಆತ್ಮಹತ್ಯೆ ಪ್ರಕರಣ, ತೀವ್ರಗೊಂಡ ತನಿಖೆ

ಬೆಂಗಳೂರು,ಜ.2- ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಆರು ಮಂದಿಯ ವಿರುದ್ಧ ಡೆತ್‍ನೋಟ್ ಬರೆದಿಟ್ಟು ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ತನಿಖೆಯನ್ನು ಕಗ್ಗಲಿಪುರ ಠಾಣೆ ಪೊಲೀಸರು ತೀವ್ರಗೊಳಿಸಿದ್ದಾರೆ. ಉದ್ಯಮಿ ಪ್ರದೀಪ್ ಕೊನೆಯ ಬಾರಿ ಯಾರಿಗೆ ಕರೆ ಮಾಡಿದ್ದರು, ಯಾರ್ಯಾರ ಜೊತೆ ವ್ಯವಹಾರವಿಟ್ಟು ಕೊಂಡಿದ್ದರು, ಇವರಿಗೆ ಯಾರ್ಯಾರ ಸಂಬಂಧವಿದೆ ಎಂಬಿತ್ಯಾದಿ ವಿವರಗಳನ್ನು ಪಡೆದುಕೊಳ್ಳಲು ಅವರ ಮೊಬೈಲ್‍ನ ಕಾಲ್ ರೆಕಾರ್ಡ್ ಹಾಗೂ ಸಿಡಿಆರ್ ಪಡೆದು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪ್ರದೀಪ್ ಅವರು ಆತ್ಮಹತ್ಯೆಗೆ ಬಳಸಿರುವ ಪಿಸ್ತೂಲು ಯಾರಿಗೆ ಸೇರಿದ್ದು, ಅದಕ್ಕೆ ಲೈಸೆನ್ಸ್ […]

ಉದ್ಯಮಿ ಅನುಮಾನಾಸ್ಪದ ಸಾವು : ಮೊಬೈಲ್ ಕರೆಗಳ ಪರಿಶೀಲನೆ

ಬೆಂಗಳೂರು, ನ.18- ಉದ್ಯಮಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಟ್ಟೇನಹಳ್ಳಿ ಠಾಣೆ ಪೊಲೀಸರು ವಿವಿಧ ದೃಷ್ಟಿಕೋನಗಳಲ್ಲಿ ತನಿಖೆ ನಡೆಸುತ್ತಿದ್ದು, ಮೊಬೈಲ್ ನಲ್ಲಿರುವ ಕರೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಟ್ರಾನ್ಸ್‍ಫೋರ್ಟ್ ಉದ್ಯಮಿಯಾಗಿದ್ದ ಬಾಲಸುಬ್ರಮಣಿಯನ್ ಅವರ ಮೃತದೇಹವನ್ನು ಕೆಂಪೇಗೌಡ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದ್ದು, ಇದರ ವರದಿ ಬಂದ ನಂತರವಷ್ಟೇ ಸಾವು ಹೇಗಾಗಿದೆ ಎಂಬುದು ಗೊತ್ತಾಗಲಿದೆ. ಬಾಲಸುಬ್ರಮಣಿಯನ್ ಅವರ ಮೊಬೈಲ್‍ನ ಸಿಡಿಆರ್ ಪರಿಶೀಲನೆ ನಡೆಸಿರುವ ಪೊಲೀಸರಿಗೆ ಹಲವು ಮಾಹಿತಿಗಳು ಲಭ್ಯವಾಗಿವೆ. ಒಂದೇ ನಂಬರ್‍ನಿಂದ ನಿರಂತರವಾಗಿ ಬಾಲಸುಬ್ರಮಣಿಯನ್ […]

ಉದ್ಯಮಿ ಪುತ್ರನಿಗೆ ರಿವಾಲ್ವರ್ ತೋರಿಸಿ 4 ಕೋಟಿ ಹಣಕ್ಕೆ ಬ್ಲಾಕ್‍ಮೇಲ್ : ಲೇಡಿ ಗ್ಯಾಂಗ್ ಸೆರೆ

ಬೆಂಗಳೂರು,ಆ.24-ಸರ್ಕಾರಿ ಟೆಂಡರ್ ಕೊಡಿಸುವುದಾಗಿ ಉದ್ಯಮಿ ಪುತ್ರನನ್ನು ಕರೆಸಿಕೊಂಡು ರಿವಾಲ್ವರ್ ತೋರಿಸಿ ಬೆದರಿಸಿ 4 ಕೋಟಿ ಹಣಕ್ಕೆ ಬ್ಲಾಕ್‍ಮೇಲ್ ಮಾಡಿ ಹಣ ಕೊಡದಿದ್ದರೆ ರೇಪ್‍ಕೇಸ್ ಹಾಕುತ್ತೇನೆಂದು ಬೆದರಿಸಿ 25 ಲಕ್ಷ ಹಣ ಪಡೆದುಕೊಂಡಿದ್ದ ಮಹಿಳೆ ಸೇರಿ ಇಬ್ಬರನ್ನು ಬ್ಯಾಟ ರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರು ರಸ್ತೆಯ ಜನತಾ ಕಾಲೋನಿ ಟೋಲ್‍ಗೇಟ್ ಒಂದನೇ ಕ್ರಾಸ್ ನಿವಾಸಿ, ಪ್ರಮುಖ ಆರೋಪಿ ಪುಷ್ಪಾ ಅಲಿಯಾಸ್ ಪುಷ್ಪಲತ (30) ಮತ್ತು ಮೈಸೂರು ರಸ್ತೆಯ ಶಾರದಾ ಶಾಲೆ ಸಮೀಪದ ನಿವಾಸಿ ರಾಕೇಶ್ (27) ಬಂಧಿತ […]

ಕಾಂಗ್ರೆಸ್ ಶಾಸಕರಿಂದ ನಗದು ವಶ ಪ್ರಕರಣ : ಅಸ್ಸಾಂ ಉದ್ಯಮಿಗೆ ಸಮನ್ಸ್

ಗುವಾಹಟಿ, ಆ.8 – ಜಾರ್ಖಂಡ್ ಕಾಂಗ್ರೇಸ್ ಶಾಸಕರಿಂದ ನಗದು ವಶಪಡಿಸಿಕೊಂಡ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರು ಅಸ್ಸಾಂ ಮೂಲದ ಉದ್ಯಮಿ ಅಶೋಕ್ ಕುಮಾರ್ ಧನುಕಾ ಅವರಿಗೆ ಸಮನ್ಸ ನೀಡಿದ್ದಾರೆ. ಪಶ್ಚಿಮ ಬಂಗಾಳದ ಅಪರಾಧ ತನಿಖಾ ಇಲಾಖೆ (ಸಿಐಡಿ) ಗುವಾಹಟಿಯಲ್ಲಿರುವ ಧನುಕಾ ಅವರ ನಿವಾಸದ ಗೇಟ್‍ಗೆ ನೋಟಿಸ್ ಅಂಟಿಸಿ ಕೋಲ್ಕತ್ತಾದಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ತಿಳಿಸಿದ್ದಾರೆ. ದೂರವಾಣಿ ಮೂಲಕ ಪದೇ ಪದೇ ಪ್ರಯತ್ನಿಸಿದರೂ ಧನುಕಾ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಆದ ಕಾರಣ ನೋಟೀಸ್ ನೀಡಿ ವಿಚಾರಣೆಗೆ […]