ಮುಂಬೈ, ಏ.21: ಹೆಚ್ಚಿನ ಲಾಭದ ಭರವಸೆ ನೀಡಿ ಮುಂಬೈ ಮೂಲದ ಉದ್ಯಮಿಯೊಬ್ಬರಿಗೆ 3.25 ಕೋಟಿ ವಂಚನೆ ಮಾಡಿದ ಜೊತೆಗೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ ಆರೋಪದಲ್ಲಿ ಅಂತರರಾಜ್ಯ ಗ್ಯಾಂಗ್‌ನ ಒಂಬತ್ತು ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳಲ್ಲಿ ಇಬ್ಬರು ಮಹಿಳೆಯರು ಸೇರಿದ್ದು, ಅವರು ಮುಂಬೈ, ಒಡಿಶಾ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳ ನಿವಾಸಿಗಳಾಗಿದ್ದಾರೆ ಎಂದು ವಿಲೆ ಪಾರ್ಲೆ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ
ಖಾಸಗಿ ಸಂಸ್ಥೆ ನಡೆಸುತ್ತಿರುವ ದೂರುದಾರರು 2025ರ ಜುಲೈನಲ್ಲಿ ನಾಲ್ವರು ಆರೋಪಿಗಳ ಸಂಪರ್ಕಕ್ಕೆ ಬಂದಿದ್ದು, ಅವರು ತಮ್ಮನ್ನು ಬ್ರೋಕರ್‌ಗಳೆಂದು ಪರಿಚಯಿಸಿಕೊಂಡಿದ್ದರು. ಆರ್ಕ್‌ಶಿಪ್ ಗ್ರೂಪ್ ಎಂಬ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ಅವರು ನಂಬಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅವರ ಮಾತಿಗೆ ಮರುಳಾದ ಉದ್ಯಮಿ ಆನ್‌ಲೈನ್ ಮೂಲಕ 1 ಕೋಟಿ ವರ್ಗಾಯಿಸಿದರು. ಆದರೆ ನಂತರ ಆ ಹಣ ಮಾನವ ಧರ್ಮಯೋಗ ಎಂಬ ಎನ್‌ಜಿಒ ಖಾತೆಗೆ ವರ್ಗಾಯಿಸಿರುವುದು ತಿಳಿದುಬಂದಿತು.
ಈ ಬಗ್ಗೆ ಪ್ರಶ್ನಿಸಿದಾಗ, ಆರೋಪಿಗಳು ವಿಲೆ ಪಾರ್ಲೆಯ ವೆಸ್ಟರ್ನ್ ಎಕ್‌್ಸಪ್ರೆಸ್ ಹೆದ್ದಾರಿ ಸಮೀಪದ ಒಂದು ಹೋಟೆಲ್‌ಗೆ ಸಭೆಗೆ ಕರೆಯಿದರು. ಉದ್ಯಮಿ ಮತ್ತು ಅವರ ಕಂಪನಿಯ ಜನರಲ್ ಮ್ಯಾನೇಜರ್ ಅಲ್ಲಿ ಹೋದಾಗ, ಗ್ಯಾಂಗ್ ಸದಸ್ಯರು ಇಬ್ಬರ ಮೇಲೂ ಹಲ್ಲೆ ನಡೆಸಿ ಬಂದೂಕು ತೋರಿಸಿ ಬೆದರಿಕೆ ಹಾಕಿದರು ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಗ್ಯಾಂಗ್ 3 ಕೋಟಿ ಪರಿಹಾರ ಹಣವನ್ನು ಬೇಡಿಕೆ ಇಟ್ಟು, ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿತು. ಜೀವಭಯದಿಂದ ಉದ್ಯಮಿ ಆರೋಪಿಗಳು ನೀಡಿದ ಬ್ಯಾಂಕ್ ಖಾತೆಗಳಿಗೆ ಸುಮಾರು 2.25 ಕೋಟಿ ಆನ್‌ಲೈನ್ ಮೂಲಕ ವರ್ಗಾಯಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಹಣ ಪಡೆದ ನಂತರ ಆರೋಪಿಗಳು ಅವರನ್ನು ಬಿಡುಗಡೆ ಮಾಡಿದರು, ಆದರೆ ಪೊಲೀಸರಿಗೆ ದೂರು ನೀಡಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಆದರೆ ಕುಟುಂಬ ಮತ್ತು ಸ್ನೇಹಿತರ ಸಲಹೆಯ ಮೇರೆಗೆ ಉದ್ಯಮಿ ನಂತರ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದರು.ದೂರು ಪರಿಶೀಲಿಸಿದ ಬಳಿಕ, ವಂಚನೆ, ನಂಬಿಕೆ ಭಂಗ, ವಸೂಲಿ, ಗಂಭೀರ ಹಾನಿ ಮಾಡುವುದು ಮತ್ತು ಜೀವ ಬೆದರಿಕೆ ಸೇರಿದಂತೆ ಹಲವು ಆರೋಪಗಳಡಿ ಒಂಬತ್ತು ಮಂದಿಯ ವಿರುದ್ಧ ಎಫ್‌ಐರ್ಆ ದಾಖಲಿಸಲಾಗಿದೆ.
ಈ ಪ್ರಕರಣವನ್ನು ಮುಂದಿನ ತನಿಖೆಗಾಗಿ ಮುಂಬೈ ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ದೊಡ್ಡ ಅಂತರರಾಜ್ಯ ಜಾಲದ ಭಾಗವಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
