Thursday, April 23, 2026
Homeಮನರಂಜನೆಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಮೂರು ಧಾರವಾಹಿಗಳ "ತ್ರಿವೇಣಿ ಸಂಗಮ"

ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಮೂರು ಧಾರವಾಹಿಗಳ “ತ್ರಿವೇಣಿ ಸಂಗಮ”

"Triveni Sangama" of three serials for the first time on television

ಕನ್ನಡಿಗರ ಮನಗೆದ್ದಿರುವ ಸ್ಟಾರ್ ಸುವರ್ಣ ವಾಹಿನಿಯು ಅನೇಕ ವಿನೂತನ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಾ ಬರುತ್ತಿದೆ. ಸಾಮಾನ್ಯವಾಗಿ ಎರಡು ಧಾರಾವಾಹಿಗಳು ಒಂದಾಗುವುದನ್ನು ‘ಮಹಾಸಂಗಮ’ ಎಂದು ಹೇಳಲಾಗುತ್ತದೆ. ಆದರೆ ಕಿರುತೆರೆಯಲ್ಲಿ ಮೂರೂ ಧಾರಾವಾಹಿಗಳನ್ನು ಸೇರಿಸಿ “ತ್ರಿವೇಣಿ ಸಂಗಮ” ಮಾಡುತ್ತಿರುವುದು ಇದೇ ಮೊದಲು.

‘ನೀ ಇರಲು ಜೊತೆಯಲ್ಲಿ’ ಧಾರಾವಾಹಿಯ ಕಥೆಯಲ್ಲಿ ಇದೀಗ 5 ವರ್ಷಗಳೇ ಕಳೆದಿದೆ, ಕಾಲಚಕ್ರ ಬದಲಾಗಿದೆ. ನಾಯಕ ಕೃಷ್ಣ ತನ್ನ ದುಡಿಮೆಯಿಂದ ಶ್ರೀಮಂತನಾಗಿದ್ದು, ರಚನಾಳ ನೆನಪಿನಲ್ಲಿ ಬದುಕುತ್ತಿದ್ದಾನೆ. ಕೃಷ್ಣನ ಈ ಪರಿಸ್ಥಿತಿ ನೋಡಿ ಮಗನಿಗೆ ಇನ್ನೊಂದು ಮದುವೆ ಮಾಡಬೇಕೆಂಬ ಹಂಬಲ ಹೆತ್ತವರದ್ದು. ಊರ್ಮಿಳಾ ರಚಿಸುವ ತಂತ್ರಗಾರಿಕೆಯಿಂದಾಗಿ ಕೃಷ್ಣ- ರಾಧಾರ ಮದುವೆ ನಿಶ್ಚಯವಾಗುತ್ತದೆ. ಇಷ್ಟವಿಲ್ಲದಿದ್ದರು ಹೆತ್ತವರಿಗಾಗಿ ಮದುವೆಯಾಗಲು ಸಿದ್ಧನಾಗುತ್ತಾನೆ ಕೃಷ್ಣ.

ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ ‘ಗೌರಿಶಂಕರ’ ಹಾಗು ‘ಶಾರದೆ’ ಧಾರಾವಾಹಿ ಕುಟುಂಬ. ಕಥೆಯಲ್ಲಿ ರೋಚಕ ತಿರುವುಗಳಿದ್ದು ಇವರ ಆಗಮನ ಹೇಗೆ ಆಗಲಿದೆ ಎಂಬುದನ್ನು ನೀವು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಗೌರಿ-ಶಂಕರರ ಸಾರಥ್ಯದಲ್ಲಿ, ಸಿದ್ದು- ಶಾರದಾ ಆತಿಥ್ಯದಲ್ಲಿ ಅದ್ದೂರಿಯಾಗಿ ನಡೀತಿದೆ ರಾಧಾ -ಕೃಷ್ಣ ಕಲ್ಯಾಣ. ಗೌರಿಶಂಕರ, ನೀ ಇರಲು ಜೊತೆಯಲ್ಲಿ ಹಾಗು ಶಾರದೆ “ತ್ರಿವೇಣಿ ಸಂಗಮ” ಶುರುವಾಗ್ತಿದೆ.

RELATED ARTICLES

Latest News