Friday, February 23, 2024
Homeರಾಷ್ಟ್ರೀಯಅನ್ಯಾಯಕ್ಕೆ ಹೆಸರಾದವರಿಂದ ನ್ಯಾಯ ಯಾತ್ರೆ : ಇರಾನಿ ವ್ಯಂಗ್ಯ

ಅನ್ಯಾಯಕ್ಕೆ ಹೆಸರಾದವರಿಂದ ನ್ಯಾಯ ಯಾತ್ರೆ : ಇರಾನಿ ವ್ಯಂಗ್ಯ

ಅಮೇಥಿ,ಡಿ.29- ಅನ್ಯಾಯಕ್ಕೆ ಹೆಸರಾದವರು ನ್ಯಾಯ ಕೊಡಿಸುವಂತೆ ನಟಿಸುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮತಿ ಇರಾನಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ ನ್ಯಾಯ ಯಾತ್ರೆಯನ್ನು ಟೀಕಿಸಿದ್ದಾರೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಇರಾನಿ ಅವರು ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಗಾಂಧಿ ಅವರ ಉದ್ದೇಶಿತ ಯಾತ್ರೆಯ ಕುರಿತಾದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.

ಅನ್ಯಾಯಕ್ಕೆ ಹೆಸರಾದವರು ನ್ಯಾಯಕ್ಕಾಗಿ ಧೋಂಗ್ ಮಾಡುತ್ತಿದ್ದಾರೆ ಎಂದು ಅವರು ರಾಹುಲ್‍ಗಾಂಧಿ ಕಾಲೆಳೆದಿದ್ದಾರೆ. ಇರಾನಿ ತಮ್ಮ ಲೋಕಸಭಾ ಕ್ಷೇತ್ರ ಅಮೇಥಿಗೆ ಎರಡು ದಿನಗಳ ಭೇಟಿಯಲ್ಲಿದ್ದಾರೆ. ಗೌರಿಗಂಜ್‍ನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಸಾಮಾಜಿಕ ಸಬಲೀಕರಣ ಶಿಬಿರದಲ್ಲಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಪ್ರತಿ ವರ್ಷ 10 ಕೋಟಿ ಬಡ ಕುಟುಂಬಗಳಿಗೆ 5 ಲಕ್ಷದವರೆಗೆ ಆರ್ಥಿಕ ನೆರವು ನೀಡುತ್ತದೆ.

ಸ್ಯಾಂಡಲ್‍ವುಡ್‍ಗೆ ಜ್ಯೂನಿಯರ್ ಎನ್‍ಟಿಆರ್ ಎಂಟ್ರಿ

ಈ ಯೋಜನೆಯು ಬಡವರ ವೈದ್ಯಕೀಯ ಚಿಕಿತ್ಸೆಯನ್ನು ನೋಡಿಕೊಳ್ಳುವುದರಿಂದ ಅವರಿಗೆ ಪರಿಹಾರವನ್ನು ಒದಗಿಸಿದೆ ಎಂದು ಅವರು ಹೇಳಿದರು. ಇರಾನಿ ಅವರು ಅಮೇಥಿಯ ಮುಖ್ಯ ವೈದ್ಯಕೀಯ ಅಧಿಕಾರಿಯೊಂದಿಗೆ ಮಾತನಾಡಿದ್ದು, ಮುಂದಿನ ವಾರದಿಂದ ಅಮೇಥಿ ಪ್ರದೇಶದ ಎಲ್ಲಾ ನ್ಯಾಯ ಪಂಚಾಯತ್‍ಗಳಲ್ಲಿ ಅಂಗವಿಕಲರಿಗಾಗಿ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

RELATED ARTICLES

Latest News