Thursday, May 2, 2024
Homeರಾಜ್ಯಸ್ಯಾಂಡಲ್‍ವುಡ್‍ಗೆ ಜ್ಯೂನಿಯರ್ ಎನ್‍ಟಿಆರ್ ಎಂಟ್ರಿ

ಸ್ಯಾಂಡಲ್‍ವುಡ್‍ಗೆ ಜ್ಯೂನಿಯರ್ ಎನ್‍ಟಿಆರ್ ಎಂಟ್ರಿ

ಬೆಂಗಳೂರು, ಡಿ.28- ಪವರ್‌ ಸ್ಟಾರ್ ಪುನೀತ್‍ರಾಜ್‍ಕುಮಾರ್ ಅವರ ಚಕ್ರವ್ಯೂಹ ಚಿತ್ರದ ಗೆಳೆಯ ಗೆಳೆಯ ಹಾಡಿಗೆ ಧ್ವನಿ ನೀಡುವ ಮೂಲಕ ಕನ್ನಡಿಗರ ಗಮನ ಸೆಳೆದಿದ್ದ ಟಾಲಿವುಡ್ ಸ್ಟಾರ್ ಜ್ಯೂನಿಯರ್ ಎನ್‍ಟಿಆರ್ ಎಂಟ್ರಿ ಕೊಡಲಿದ್ದಾರೆ.

ಜ್ಯೂನಿಯರ್ ಎನ್‍ಟಿಆರ್ ನಟಿಸುತ್ತಿರುವ ಬಹು ನಿರೀಕ್ಷಿತ ದೇವರು ಚಿತ್ರವು ಟಾಲಿವುಡ್‍ನೊಂದಿಗೆ ಕನ್ನಡದಲ್ಲೂ ಡಬ್ ಆಗಿ ತೆರೆಗೆ ಬರುತ್ತಿದ್ದು, ಈ ಚಿತ್ರದ ತಮ್ಮ ಪಾತ್ರಕ್ಕೆ ಸ್ವತಃ ಎನ್‍ಟಿಆರ್ ಅವರೇ ಧ್ವನಿ ನೀಡಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ಹೊಸ ವರ್ಷದ ಪಾರ್ಟಿಗಳಿಗೆ ಡ್ರಗ್ಸ್ ಸಪ್ಲೈ, ಮೂವರು ಡ್ರಗ್‌ಪೆಡ್ಲರ್‌ಗಳ ಬಂಧನ

ಆರ್ ಆರ್ ಆರ್ ಚಿತ್ರದ ಕನ್ನಡ ಅವತರಣಿಕೆಗೂ ಎನ್‍ಟಿಆರ್ ಅವರೇ ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದರು. ದೇವರು ಚಿತ್ರವನ್ನು ಖ್ಯಾತ ನಿರ್ದೇಶಕ ಕೊರಟಾಲ ಶಿವ ಅವರು ನಿರ್ದೇಶಿಸುತ್ತಿದ್ದು, ಶ್ರೀದೇವಿ ಪುತ್ರಿ ಜಾನ್ಹವಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‍ನ ಖ್ಯಾತ ನಟ ಸೈಫ್‍ಅಲಿಖಾನ್ ಖಳನಾಯಕನಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ ಪ್ರಕಾಶ್ ರೈ, ಶ್ರೀಕಾಂತ್ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಯುವಸುಧಾ ಆಟ್ರ್ಸ್ ಮತ್ತು ಎನ್‍ಟಿಆರ್ ಆಟ್ರ್ಸ್‍ನಡಿ ಮಿಕ್ಕಿಲಿನೇನಿ ಸುಧಾಕರ್ ಮತ್ತು ಹರಿಕೃಷ್ಣ ನಿರ್ಮಿಸುತ್ತಿರುವ ಈ ಚಿತ್ರವನ್ನು ಖ್ಯಾತ ನಟ ನಂದಮೂರಿ ಕಲ್ಯಾಣರಾಮ್ ನಿರ್ಮಿಸುತ್ತಿದ್ದಾರೆ.

ಜ್ಯೂನಿಯರ್ ಎನ್‍ಟಿಆರ್ ಹುಟ್ಟು ಹಬ್ಬಕ್ಕೆ ರಿಲೀಸ್ ಆಗಿದ್ದ ಪೋಸ್ಟರ್ ನಲ್ಲಿ ಜ್ಯೂನಿರ್ಯ ಎನ್.ಟಿ.ಆರ್ ಕಪ್ಪು ಬಣ್ಣದ ಲುಂಗಿ ಮತ್ತು ಶರ್ಟ್ ತೊಟ್ಟು, ಸಮುದ್ರದ ಬಂಡೆಗಳ ಮೇಲೆ ಕೊಡಲಿ ಹಿಡಿದು ನಿಂತು ತೀಕ್ಷ್ಣವಾಗಿ ನೋಡುತ್ತಿದ್ದಾರೆ. ಕಳೆಗೆ ಹೆಣಗಳ ರಾಶಿ ಇದೆ. ಪಕ್ಕದಲ್ಲಿ ಮುರಿದು ಬಿದ್ದ ದೋಣಿಯೊಂದನ್ನೂ ಕಾಣಬಹುದು.

ಯುವನಿಧಿ ಯೋಜನೆಗೆ ಯಾರು ಅರ್ಹರು..? ನೋಂದಣಿ ಹೇಗೆ..?

ಈ ಪೋಸ್ಟರ್‍ ಈಗಾಗಲೇ ಜ್ಯೂನಿಯರ್ ಎನ್.ಟಿ.ಆರ್ ಅವರ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ತೀವ್ರ ಕುತೂಹಲ ಮೂಡಿಸಿದ್ದು, ಅವರ ಮಾಸ್ ಲುಕ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಈ ಸಿನಿಮಾವು ಕನ್ನಡಕ್ಕೂ ಡಬ್ ಆಗುತ್ತಿರುವುದು ಇಲ್ಲಿರುವ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕ್ರೇಜ್ ಹುಟ್ಟುಹಾಕಿದೆ.

RELATED ARTICLES

Latest News