Saturday, April 27, 2024
Homeರಾಷ್ಟ್ರೀಯಮತಾಂತರಗೊಂಡು ಮುಸ್ಲಿಂ ಯುವತಿಯನ್ನು ಮದುವೆಯಾದ ಕಂದಾಯ ಅಧಿಕಾರಿ

ಮತಾಂತರಗೊಂಡು ಮುಸ್ಲಿಂ ಯುವತಿಯನ್ನು ಮದುವೆಯಾದ ಕಂದಾಯ ಅಧಿಕಾರಿ

ನವದೆಹಲಿ,ಡಿ.29- ತನ್ನ ಪತಿ ಆಶಿಶ್ ಗುಪ್ತಾ ಇಸ್ಲಾಂಗೆ ಮತಾಂತರಗೊಂಡು ಮೊಹಮ್ಮದ್ ಯೂಸುಫ್ ಎಂದು ಹೆಸರು ಬದಲಿಸಿಕೊಂಡು ಮುಸ್ಲಿಂ ಮಹಿಳೆಯನ್ನು ವಿವಾಹವಾಗಿದ್ದಾನೆ ಎಂದು ಆರೋಪಿಸಿ ಕಂದಾಯ ಅಧಿಕಾರಿಯೊಬ್ಬರ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಳೆದ ಸೆಪ್ಟೆಂಬರ್ 2 ರಂದು ಆಶಿಶ್ ಗುಪ್ತಾ ಮೌದಾಹಾದಲ್ಲಿ ನಾಯಬ್ ತಹಸೀಲ್ದಾರ್ ಆಗಿದ್ದಾಗ ಪಟ್ಟಣದ ಕಚರಿಯಾ ಬಾಬಾ ಮಸೀದಿಯಲ್ಲಿ ದಿನಗಟ್ಟಲೆ ನಮಾಜ್‍ನಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಇದನ್ನು ಗಮನಿಸಿದವರು ಪ್ರಶ್ನಿಸಿದಾಗ ಆತ ತನ್ನನ್ನು ಕಾನ್ಪುರದ ಮಹಮದ್ ಯೂಸಫ್ ಎಂದು ಹೇಳಿಕೊಂಡಿದ್ದ. ಆದಾಗ್ಯೂ, ಹೆಚ್ಚಿನ ತನಿಖೆಯಿಂದ ಯೂಸುಫ್ ಬೇರೆ ಯಾರೂ ಅಲ್ಲ, ನಾಯಬ್ ತಹಸೀಲ್ದಾರ್ ಆಶಿಶ್ ಗುಪ್ತಾ ಎಂದು ತಿಳಿದುಬಂದಿದೆ.

ಇದೀಗ ಆತನ ಪತ್ನಿ ಆರತಿ ಯಜ್ಞಸೈನಿ ಅವರು ತನ್ನ ಪತಿ ಬಲವಂತದ ಧಾರ್ಮಿಕ ಮತಾಂತರಗೊಂಡಿದ್ದು ರುಕ್ಷಾರ್ ಎಂಬ ಮಹಿಳೆಯೊಂದಿಗೆ ಅನೈತಿಕ ವಿವಾಹ ಮಾಡಿಕೊಂಡಿದ್ದಾರೆ ಎಂದು ಪ್ರಕರಣವನ್ನು ದಾಖಲಿಸಿದ್ದಾರೆ.

ದೂರಿನ ಪ್ರಕಾರ ರುಖ್ಸಾರ್ ಅವರ ತಂದೆ, ಮುನ್ನಾ ಎಂದು ಗುರುತಿಸಲಾಗಿದೆ, ಮಸೀದಿಯ ಧರ್ಮಗುರು ಮತ್ತು ಹಲವಾರು ಇತರರೊಂದಿಗೆ ಡಿಸೆಂಬರ್ 24 ರಂದು ಗುಪ್ತಾ ಅವರಿಗೆ ಬಲವಂತದ ಮತಾಂತರ ಮಾಡಿಸಿ ನಂತರ ತಮ್ಮ ಮಗಳೊಂದಿಗೆ ವಿವಾಹ ಮಾಡಿಸಿದ್ದಾರೆ ಎಂದು ಆರೋಪಿಸಾಗಿದೆ.

ಸ್ಯಾಂಡಲ್‍ವುಡ್‍ಗೆ ಜ್ಯೂನಿಯರ್ ಎನ್‍ಟಿಆರ್ ಎಂಟ್ರಿ

ಗುಪ್ತಾ ಅವರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗಿದೆಯೇ ಅಥವಾ ರುಕ್ಷಾರ್ ಜೊತೆಗಿನ ಸಂಬಂಧವನ್ನು ನ್ಯಾಯಸಮ್ಮತಗೊಳಿಸಲು ತನ್ನ ಸ್ವಂತ ಇಚ್ಛೆಯ ಮೇರೆಗೆ ಅದನ್ನು ಮಾಡಿದ್ದಾನೆಯೇ ಎಂಬುದು ಸ್ಪಷ್ಟವಾಗಿಲ್ಲ. ಎಲ್ಲಾ ಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News