Saturday, July 27, 2024
Homeರಾಜಕೀಯಕಾಂಗ್ರೆಸ್‌‍ ಸರ್ಕಾರದ 1 ವರ್ಷದ ವೈಫಲ್ಯಗಳ ಚಾರ್ಜ್‌ಶೀಟ್‌ ಬಿಡುಗಡೆ ಮಾಡಿದ ಬಿಜೆಪಿ

ಕಾಂಗ್ರೆಸ್‌‍ ಸರ್ಕಾರದ 1 ವರ್ಷದ ವೈಫಲ್ಯಗಳ ಚಾರ್ಜ್‌ಶೀಟ್‌ ಬಿಡುಗಡೆ ಮಾಡಿದ ಬಿಜೆಪಿ

ಬೆಂಗಳೂರು,ಮೇ20- ರಾಜ್ಯದಲ್ಲಿ ಕುಸಿದು ಬರುವ ಕಾನೂನು ಸುವ್ಯವಸ್ಥೆ, ಕೊಲೆ, ಸುಲಿಗೆ, ಅತ್ಯಾಚಾರ, ಕಮೀಷನ್‌ ಆರೋಪ, ಐದು ಗ್ಯಾರಂಟಿ ಸೇರಿದಂತೆ ಆಡಳಿತಾರೂಢ ಕಾಂಗ್ರೆಸ್‌‍ ಸರ್ಕಾರ ಒಂದು ವರ್ಷದ ಅವಧಿಯಲ್ಲಿನ ವೈಫಲ್ಯಗಳ ವಿರುದ್ಧ ಪ್ರತಿಪಕ್ಷ ಬಿಜೆಪಿ ದೋಷಾರೋಪಪಟ್ಟಿ(ಚಾರ್ಜ್‌ಶೀಟ್‌) ಬಿಡುಗಡೆ ಮಾಡಿದೆ.

ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಪಕ್ಷದ ವಕ್ತಾರ ಅಶ್ವತ್ಥ ನಾರಾಯಣ ಸೇರಿದಂತೆ ಮತ್ತಿತರರು ಕಾಂಗ್ರೆಸ್‌‍ ಸರ್ಕಾರದ ಪಟ್ಟಿಯನ್ನು ಬಿಡುಗಡೆ ಮಾಡಿ ಇದೊಂದು ರೈತ ವಿರೋಧಿ, ಜನವಿರೋಧಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ನಂತರ ಮಾತನಾಡಿದ ವಿಜಯೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನರು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಅವೆಲ್ಲ ಹುಸಿಯಾಗಿವೆ. ಇನ್ನು ಮುಂದಾದರೂ ಬೆನ್ನು ತಟ್ಟಿಕೊಳ್ಳುವುದನ್ನು ಬಿಟ್ಟು ಅಭಿವೃದ್ಧಿ ಕಡೆ ಗಮನ ಕೊಡಿ, ಜನ ನಿಮಗೆ ಆಶೀರ್ವಾದ ಮಾಡಿದ್ದನ್ನು ಉಳಿಸಿಕೊಳ್ಳಿ, ಭರವಸೆ ಉಳಿಸಿಕೊಳ್ಳಿ ಎಂದರು.

ಕಳೆದ ಏಳೆಂಟು ತಿಂಗಳಿನಲ್ಲಿ ಅಪರಾಧ ಪ್ರಕರಣ ಹೆಚ್ಚಾಗಿದೆ, ಹುಬ್ಬಳ್ಳಿಯ ನೇಹಾ, ಅಂಜಲಿ, ಕೊಡಗಿನಲ್ಲಿ ವಿದ್ಯಾರ್ಥಿನಿ ಮೀನಾ ಕೊಲೆ, ಕಲಬುರಗಿಯಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆ ದಬ್ಬಾಳಿಕೆ ಹೆಚ್ಚಾಗಿದೆ, ಮೂರ್ನಾಲ್ಕು ತಿಂಗಳಿನಲ್ಲಿ 400ಕ್ಕೂ ಹೆಚ್ಚಿನ ಕೊಲೆಯಾಗಿದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ ಹರಾಜಾಗುತ್ತಿದೆ, ಲವ್‌ ಜಿಹಾದ್‌ ನಂತಹ ವೇಳೆ ಸರ್ಕಾರದ ಹೇಳಿಕೆ ಕೊಲೆಗಡುಕರಿಗೆ ಶಕ್ತಿ ನೀಡಿದಂತಾಗಿದೆ ಎಂದು ದೂರಿದರು.

ಸ್ಪಷ್ಟ ಬಹುಮತದ ಕಾಂಗ್ರೆಸ್‌‍ ಸರ್ಕಾರದ ಮೇಲೆ ಜನತೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು ಆದರೆ ನುಡಿದಂತೆ ನಡೆದ ಸರ್ಕಾರ ಎಂದು ಹೊಗಳುಭಟರ ಮೂಲಕ ಬೆನ್ನು ತಟ್ಟಿಸಿಕೊಳ್ಳುತ್ತಿರುವುದೇ ಇವರ ಸಾಧನೆ, ಒಂದು ವರ್ಷದ ಸಾಧನೆ ಶೂನ್ಯ, ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ, ಯಾವುದೇ ಹೊಸ ಯೋಜನೆಗಳಿಗೆ ಚಾಲನೆ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

652 ಕ್ಕೂ ಹೆಚ್ಚಿನ ರೈತರ ಆತಹತ್ಯೆ ಮಾಡಿಕೊಂಡರೂ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಂಡಿಲ್ಲ, ರಾಜ್ಯ ಸರ್ಕಾರ ರೈತರ ಬಗ್ಗೆ ಅಸಡ್ಡೆ ತೋರಿದೆ, ರಾಜ್ಯ ಸರ್ಕಾರದಿಂದ ರೈತರಿಗೆ ಯಾವ ರೀತಿ ಪರಿಹಾರ ಒದಗಿದೆ ಎಂದು ಪ್ರಶ್ನಿಸಿದರು.

ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ, ಕಾಂಗ್ರೆಸ್‌‍ಗೆ ಖಜಾನೆ ಫುಲ್‌ ಕ್ಲಿಯರ್‌. ಸರ್ಕಾರಕ್ಕೆ ವರ್ಷ, ಸಮಸ್ಯೆಗಳು ನೂರೊಂದು. ವರ್ಷಕ್ಕೆ ಲೂಟಿ ಎಷ್ಟು ಎಂದು ಜನ ಲೆಕ್ಕ ಹಾಕುತ್ತಿದ್ದಾರೆ, ನೇಹಾ,ಮೀನ, ಅಂಜಲಿ ಆಯ್ತು ಮುಂದೆ ಯಾರು ಎನ್ನುವ ಸ್ಥಿತಿ ಇದೆ, ಕಾಲೇಜಿಗೆ ಹೋದರೆ ಗ್ಯಾರಂಟಿ ಇಲ್ಲ, ಮನೆಯಿಂದ ಹಿರ ಬಂದರೆ ಗ್ಯಾರಂಟಿ ಇಲ್ಲ, ನಿಶರಚಿತಾರ್ತವಾದರೂ ಗ್ಯಾರಂಟಿ ಇಲ್ಲ, ಕೊಲೆ ಭಾಗ್ಯ ನೀಡಿದೆ ಎಂದು ಟೀಕಿಸಿದರು.

ಮಹಿಳೆಯರ ಬದುಕುವ ಅವಕಾಶ ಸರ್ಕಾರ ಕಿತ್ತುಕೊಂಎಯ ಯಾವ ಗ್ಯಾರಂಟಿ ಕೊಟ್ಟು ಏನು ಭಾಗ್ಯ. ಅಂಜಲಿ ಕೊಲೆಗೆ ಪೊಲೀಸ್‌‍ ಲೋಪವಿದೆ ಎಂದು ಪರಮೇಶ್ವರ್‌ ಒಪ್ಪಿಕೊಂಡಿದ್ದಾರೆ, ನಿಮಗೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇದೆಯಾ? ಗೃಹ ಇಲಾಖೆಯನ್ನು ಮೋದಿ ನಿರ್ವಹಿಸುತ್ತಿದ್ದಾರಾ? ವರ್ಷದಲ್ಲಿ ನೀವು ಮಾಡಿದ್ದೇನು? ಎಂದು ಪ್ರಶ್ನಿಸಿದರು.

ದೇಶದ ಗಡಿಯಲ್ಲಿ ಪಾಕ್‌ ಜಿಂದಾಬಾದ್‌ ಎನ್ನುತ್ತಿದ್ದರು ಆದರೆ ಈಗ ವಿಧಾಮಸೌಧದಲ್ಲಿಯೂ ಘೋಷಣೆ ಹಾಕಲು ಅನುಮತಿಸಿದ್ದಾರೆ. ಅಲ್ಲಾ ಹೋ ಅಕ್ಬರ್‌ ಎನ್ನದಿದ್ದಕ್ಕೆ ಹಲ್ಲೆ, ಹನುಮಾನ್‌ ಚಾಲಿಸ್‌‍ ಹಾಕಿದ್ದಕ್ಕೆ ಹಲ್ಲೆಯಾಗಿದೆ, ಈ ಸರ್ಕಾರ ಬಂದು ವರ್ಷವಾಯಿತು, ಮಗು ಕೂಡ ಹುಟ್ಟಿದ ವರ್ಷದಲ್ಲಿ ಅಂಬೆಗಾಲಿಡಲಿದೆ. ಆದರೆ ಈ ಸರ್ಕಾರ ಅಂಬೆಗಾಲನ್ನೂ ಇಡುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಬರ ಬಂದಿದೆ, ಸಿದ್ದರಾಮಯ್ಯ ಮತ್ತು ಬರಕ್ಕೆ ಏನೋ ಸಂಬಧ ಇದೆ. ಆದರೆ ಈ ಬಾರಿ ಮಕ್ಕಳು ಪಾಸಾಗಲೂ ಬರ, ಮಾರ್ಕ್‌ಸ್‌‍ಗೂ ಬರ ಬಂದಿದೆ, 25 ಪರ್ಸೆಂಟ್‌ ಬಂದರೆ ಪಾಸ್‌‍, ಮುಂದಿನ ವರ್ಷ 100 ಅಂಕ ಕೃಪಾಂಕ ಕೊಡಿ, ಓದನ್ನೂ ಫ್ರೀ ಮಾಡಿ, ಓದದೆ ಪಾಸು ಮಾಡಿ ಎಂದು ಲೇವಡಿ ಮಾಡಿದ್ದಾರೆ.

ಪೊಲೀಸ್‌‍ ಠಾಣೆಗಳಲ್ಲಿ ರಿಯಲ್‌ ಎಸ್ಟೇಟ್‌ ದಂಧೆ ನಡೆಯುತ್ತಿದೆ, ಈ ಸರ್ಕಾರ ಬಂದ ನಂತರ ಮುಕ್ತ ಕೊಲೆ ಗ್ಯಾರಂಟಿ, ಸುಲಿಗೆ ಗ್ಯಾರಂಟಿ, ಹೆಣ್ಣುಮಕ್ಕಳಿಗೆ ಬದುಕುವ ಗ್ಯಾರಂಟಿ ಇಲ್ಲ. ಹಾಗಾಗಿ ಈ ಸರ್ಕಾರವನ್ನು ರಾಜ್ಯಪಾಲರು ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಬೆಂಗಳೂರನ್ನು ಕೊಲೆಗಡುಕರ ಸ್ವರ್ಗವನ್ನಾಗಿ ಮಾಡಿದ್ದೀರಿ, ಯಾವ ಮುಖ ಇಟ್ಟುಕೊಂಡು ಸಾಧನೆ ಬಗ್ಗೆ ಮಾತನಾಡುತ್ತೀರ? ನೀವೇ ಸ್ವತಃ ರಾಜೀನಾಮೆ ಕೊಟ್ಟು ಹೋಗಬೇಕಿತ್ತು, ಭಂಡತನದಿಂದ ಉಳಿದುಕೊಂಡಿದ್ದೀರಿ ಎಂದು ವ್ಯಂಗ್ಯವಾಡಿದರು.

RELATED ARTICLES

Latest News