Saturday, July 27, 2024
Homeರಾಷ್ಟ್ರೀಯದಕ್ಷಿಣ ಭಾರತ ರಾಜ್ಯಗಳಲ್ಲಿ ಬಿಜೆಪಿಗೆ ಮತ್ತೆ ನಿರಾಸೆ

ದಕ್ಷಿಣ ಭಾರತ ರಾಜ್ಯಗಳಲ್ಲಿ ಬಿಜೆಪಿಗೆ ಮತ್ತೆ ನಿರಾಸೆ

ಬೆಂಗಳೂರು. ಜೂ. 4 -ದಕ್ಷಿಣ ಭಾರತ ರಾಜ್ಯಗಳಲ್ಲಿ ಮೋದಿ ದಂಡಯಾತ್ರೆ ನಿರೀಕ್ಷಿತ ಫಲ ಕೊಟ್ಟಿಲ್ಲ. ಕರ್ನಾಟಕ ಹೊರತುಪಡಿಸಿದರೆ ತಮಿಳುನಾಡು, ಆಂದ್ರ, ಕೇರಳ ರಾಜ್ಯಗಳಲ್ಲಿ ಈ ಭಾರೀಯೂ ಕೂಡ ಜನ ಬಿಜೆಪಿಯ ಕೈ ಹಿಡಿದಿಲ್ಲ. ಕಳೆದ ಭಾರೀ ಕರ್ನಾಟಕದ 28 ಸ್ಥಾನಗಳ ಪೈಕಿ 25 ಸ್ಥಾನಗಳಲ್ಲಿ ಭರ್ಜರಿಯಾಗಿ ಬಿಜೆಪಿ ಗೆಲ್ಲುವ ಮೂಲಕ ಭಾರೀ ಕೊಡುಗೆಯನ್ನು ನೀಡಿದ್ದರು.

ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ, ಕೇರಳ ಸೇರಿ ದಕ್ಷಿಣ ಭಾರತದ 131 ಸ್ಥಾನಗಳ ಪೈಕಿ ಬಿಜೆಪಿ 31 ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಈ ಭಾರೀ ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂಬ ಉದ್ದೇಶದಿಂದ ಮೋದಿ ಭರ್ಜರಿ ದಂಡಯಾತ್ರೆ ನಡೆಸಿದ್ದರು. ಕೇರಳ, ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ಭಾರೀ ಯಾತ್ರೆಗಳನ್ನು ಮಾಡಿದ್ದರು. ಆದರೂ ಈ ಭಾಗದ ಜನ ಬಿಜೆಪಿ ನಿರೀಕ್ಷಿತ ಸ್ಥಾನಗಳನ್ನು ನೀಡಿಲ್ಲ.

ತಮಿಳುನಾಡಿನಲ್ಲಿ ಡಿಎಂಕೆ ಕಾಂಗ್ರೆಸ್‌‍ ಮೈತ್ರಿಕೂಡ ಭರ್ಜರಿ ಗೆಲುವು ಸಾಧಿಸಿದೆ. 39 ಸ್ಥಾನಗಳ ಪೈಕಿ ಡಿಎಂಕೆ 21, ಕಾಂಗ್ರೆಸ್‌‍ 8, ಸಿಪಿಐ 2, ಸಿಪಿಎಂ 2, ಪಿಎಮ್‌ಕೆ 1, ವಿಸಿಕೆ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆರಂಭಿಕವಾಗಿಯೇ ಹಿನ್ನಡೆ ಅನುಭವಿಸಿದ್ದರು. ತೆಲಂಗಾಣದಲ್ಲಿ ಕಳೆದ ಭಾರಿ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಈ ಭಾರಿ ತನ್ನ ಬಲವನ್ನು ವೃದ್ಧಿಸಿಕೊಂಡಿದೆ.

ಈ ಭಾರಿಯ ಚುನಾವಣೆಯಲ್ಲಿ 8 ಕ್ಷೇತ್ರಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್‌‍ ಪಕ್ಷ ಇತ್ತೀಚೆಗೆ ಅಷ್ಟೇ ಅಧಿಕಾರಕ್ಕೆ ಬಂಧಿದ್ದರೂ, ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವಲ್ಲಿ ವಿಲವಾಗಿದೆ.17 ಕ್ಷೇತ್ರಗಳ ಪೈಕಿ 8ರಲ್ಲಿ ಬಿಜೆಪಿ, 8ರಲ್ಲಿ ಕಾಂಗ್ರೆಸ್‌‍, ಎಐಎಂಎಂ ಪಕ್ಷ ಒಂದರಲ್ಲಿ ಜಯ ಸಾಧಿಸಿದೆ.

ಕೇರಳದಲ್ಲಿ ಖಾತೆ ತೆರೆಯುವಲ್ಲಿ ಬಿಜೆಪಿ ಸಲವಾದಂತಿದೆ. ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ಧಾರೆ. 20 ಕ್ಷೇತ್ರಗಳ ಪೈಕಿ 13ರಲ್ಲಿ ಕಾಂಗ್ರೆಸ್‌‍ ಐಯುಎಂಎಲ್‌‍ 2 ಬಿಜೆಪಿ 2 ಸಿಪಿಐಎಂ 1 ಕೆಇಎಸ್‌‍ 1 ಆರ್‌ಎಸ್‌‍ಪಿ ಪಕ್ಷದ ಅಭ್ಯರ್ಥಿಗಳು ಒಂದು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಆಂಧ್ರ ಪ್ರದೇಶದಲ್ಲಿ 25 ಸ್ಥಾನಗಳ ಪೈಕಿ ಟಿಡಿಪಿ 16 ವೈಎಸ್‌‍ಆರ್‌ಸಿಪಿ 4 ಬಿಜೆಪಿ 3 ಜೆಎನ್‌ಪಿ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಽಸಿದೆ. ಆಡಳಿತಾರೂಢ ಜನಮೋಹನ್‌ ರೆಡ್ಡಿಗೆ ತೀವ್ರ ಮುಖಭಂಗವಾಗಿದೆ.

ಟಿಡಿಪಿಯ ನಾಯಕ ಚಂದ್ರಬಾಬು ನಾಯ್ಡು ಮೋದಿ ಅವರೊಂದಿಗೆ ಮಾಡಿದ ತಂತ್ರ ಲಿಸಿದೆ. ಇಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ 4 ಕ್ಷೇತ್ರಗಳಲ್ಲಿ ಗೆಲುವು ಸಾಽಸಿದ್ದರೂ, ಎನ್‌ಡಿಎ 25ರಲ್ಲಿ 22 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಕಳೆದ ಭಾರಿ ಕರ್ನಾಟಕದಲ್ಲಿ 25 ಸ್ಥಾನಗಳಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿದ್ದ ಬಿಜೆಪಿ. ಈ ಭಾರೀ 8-9 ಸ್ಥಾನಗಳನ್ನು ಕಳೆದುಕೊಂಡು ಅವುಗಳನ್ನು ಆಂಧ್ರ, ತೆಲಂಗಾಣದಲ್ಲಿ ಪಡೆಯುವ ನಿರೀಕ್ಷೆ ಇತ್ತು. ದಕ್ಷಿಣ ರಾಜ್ಯಗಳಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಬೇಕೆಂದು ಮೋದಿ ಭಾರೀ ಸಂಚಲನ ಉಂಟು ಮಾಡಿದ್ದಾರಾದರೂ ನಿರೀಕ್ಷಿತ ಲ ಸಿಕ್ಕಿಲ್ಲವೆಂದು ವ್ಯಾಖ್ಯಾನಿಸಲಾಗಿದೆ.

RELATED ARTICLES

Latest News