Thursday, December 5, 2024
Homeರಾಷ್ಟ್ರೀಯ | National"ಬಟೋಗೆ ತೋ ಕಟೋಗೆ" ಘೋಷಣೆ ಅಸಂವಿಧಾನಿಕ, ನಕಾರಾತ್ಮಕ : ಅಖಿಲೇಶ್‌ ಯಾದವ್‌

“ಬಟೋಗೆ ತೋ ಕಟೋಗೆ” ಘೋಷಣೆ ಅಸಂವಿಧಾನಿಕ, ನಕಾರಾತ್ಮಕ : ಅಖಿಲೇಶ್‌ ಯಾದವ್‌

BJP, its allies distancing themselves from Yogi's 'Batoge toh katoge' slogan: Akhilesh Yadav

ಲಕ್ನೋ, ನ 20 (ಪಿಟಿಐ) : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಬಟೋಗೆ ತೋ ಕಟೋಗೆ ಘೋಷಣೆಯಿಂದ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ದೂರವಾಗಲು ಪ್ರಾರಂಭಿಸಿವೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೇಳಿದ್ದಾರೆ.

ಯಾದವ್‌ ಅವರು ಹಿಂದೂಗಳು ಒಗ್ಗಟ್ಟಿನಿಂದ ಇರಲು ಸ್ಪಷ್ಟವಾಗಿ ಕರೆ ನೀಡುವ ಮೂಲಕ ಆದಿತ್ಯನಾಥ್‌ ನೀಡಿದ ಘೋಷಣೆಯನ್ನು ಅಸಂವಿಧಾನಿಕ ಮತ್ತು ದೇಶದ ಇತಿಹಾಸದಲ್ಲಿ ಅತ್ಯಂತ ನಕಾರಾತ್ಮಕ ಎಂದು ಬಣ್ಣಿಸಿದ್ದಾರೆ.

ಇಲ್ಲಿನ ಬಕ್ಷಿ ಕಾ ತಲಾಬ್‌ ಪ್ರದೇಶದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಘೋಷಣೆಯು ಬ್ರಿಟಿಷರ ಒಡೆದು ಆಳುವ ನೀತಿಯಂತಿದೆ. ಬ್ರಿಟಿಷರು ತೊರೆದರು ಆದರೆ ಅವರ ಆಲೋಚನೆಯೊಂದಿಗೆ ಜನರು ತಮ್ಮ ಆಲೋಚನೆಗಳನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಆರೋಪಿಸಿದರು.

ಯಾವುದೇ ಹೆಸರುಗಳನ್ನು ತೆಗೆದುಕೊಳ್ಳದೆ, ಒಬ್ಬರ ಆಲೋಚನೆಗಳು ಮತ್ತು ಮಾತುಗಳಿಂದ ಒಬ್ಬರು ಯೋಗಿ ಯಾಗುತ್ತಾರೆಯೇ ಹೊರತು ಬಟ್ಟೆಯಿಂದಲ್ಲ ಎಂದು ಅವರು ಪರೋಕ್ಷವಾಗಿ ಯೋಗಿ ಆದಿತ್ಯನಾಥ್‌ ಅವರ ವಿರುದ್ಧ ಹರಿಹಾಯ್ದರು.

ಉಪಚುನಾವಣೆಯಲ್ಲಿ ಹೀನಾಯವಾಗಿ ಸೋಲನುಭವಿಸಲಿದೆ ಎಂಬುದು ಬಿಜೆಪಿಗೆ ಗೊತ್ತಿದ್ದು, ಜನರು ಮತದಾನ ಮಾಡಲು ಹೋಗದಂತೆ ಆಡಳಿತವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು. ಜಿಲ್ಲಾಧಿಕಾರಿಗಳನ್ನು ಬಿಜೆಪಿಯ ಜಿಲ್ಲಾಧ್ಯಕ್ಷರಂತೆ ಕೆಲಸ ಮಾಡುವಂತೆ ಸರಕಾರ ಮಾಡುತ್ತಿದೆ.

ಅಧಿಕಾರ ದುರುಪಯೋಗ ಪಡಿಸಿಕೊಂಡು ಮತ ಚಲಾಯಿಸುವುದನ್ನು ತಡೆಯಲು ಬಿಜೆಪಿ ಮುಂದಾಗಿದೆ.ಇದು ಜನರ ಮತದಾನದ ಹಕ್ಕಿನ ಮೇಲಿನ ದಾಳಿಯಾಗಿದೆ.ಸಂವಿಧಾನಿಕ ಸಂಸ್ಥೆಗಳಿಗೆ ಬಣ್ಣ ಬಳಿಯಲು ಬಿಜೆಪಿ ಮುಂದಾಗಿದೆ. ಒಂದು ಕಲ್ಪನೆ ಮತ್ತು ಒಂದೇ ಬಣ್ಣದೊಂದಿಗೆ ನಾವೆಲ್ಲರೂ ಒಗ್ಗೂಡಬೇಕು ಮತ್ತು ಸಂವಿಧಾನವನ್ನು ಉಳಿಸಬೇಕು ಎಂದು ಪ್ರತಿಜ್ಞೆ ಮಾಡಬೇಕಾಗಿದೆ ಎಂದು ಅವರು ಹೇಳಿದರು.

RELATED ARTICLES

Latest News