Monday, March 4, 2024
Homeರಾಷ್ಟ್ರೀಯಛತ್ತೀಸ್‍ಗಢದಲ್ಲಿ ಬಿಜೆಪಿ ನಾಯಕನ ಭೀಕರ ಹತ್ಯೆ

ಛತ್ತೀಸ್‍ಗಢದಲ್ಲಿ ಬಿಜೆಪಿ ನಾಯಕನ ಭೀಕರ ಹತ್ಯೆ

ಕಂಕೇರ್,ಜ.8- ಛತ್ತೀಸ್‍ಗಢದ ಕಂಕೇರ್ ಜಿಲ್ಲೆಯಲ್ಲಿ ಬಿಜೆಪಿ ಮುಖಂಡರೊಬ್ಬರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಅಪರಿಚಿತರ ಗುಂಡಿನ ದಾಳಿಗೆ ಬಲಿಯಾದ ಬಿಜೆಪಿ ಮುಖಂಡರನ್ನು ಅಸೀಮ್ ರಾಯ್ ಎಂದು ಗುರುತಿಸಲಾಗಿದೆ. ಪಖಂಜೂರ್ ಪಟ್ಟಣದ ಪುರಾಣ ಬಜಾರ್ ಪ್ರದೇಶದಲ್ಲಿ ರಾತ್ರಿ 8.30 ರ ಸುಮಾರಿಗೆ ಅಸೀಮ್ ರೈ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪಾಖಂಜೂರು ನಗರ ಪಂಚಾಯತ್ ಮಾಜಿ ಅಧ್ಯಕ್ಷ ರಾಯ್ (50) ಹಾಲಿ ಕಾಪೆರ್ರೇಟರ್ ಮತ್ತು ಆಡಳಿತಾರೂಢ ಬಿಜೆಪಿಯ ಕಂಕೇರ್ ಜಿಲ್ಲೆ ಘಟಕದ ಉಪಾಧ್ಯಕ್ಷರಾಗಿದ್ದರು. ಪ್ರತ್ಯಕ್ಷದರ್ಶಿಗಳ ಪ್ರಕಾರ ರಾಯ್ ಇದ್ದಕ್ಕಿದ್ದಂತೆ ವಾಹನದಿಂದ ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಮೂಲದ ಸಚಿವರ ವಿರುದ್ಧದ ಭ್ರಷ್ಟಾಚಾರ ಆರೋಪ ಆತಂಕಕಾರಿ: ಲೀ

ಮೃತದೇಹದ ಪ್ರಾಥಮಿಕ ಪರೀಕ್ಷೆಯಲ್ಲಿ ರೈ ಅವರ ತಲೆಗೆ ಗುಂಡು ಬಿದ್ದಿರುವುದನ್ನು ವೈದ್ಯರು ದೃಢಪಡಿಸಿದ್ದು, ಶವಪರೀಕ್ಷೆಯ ನಂತರ ಈ ಬಗ್ಗೆ ವಿವರವಾದ ವರದಿ ಲಭ್ಯವಾಗಲಿದೆ ಎಂದು ಅವರು ಹೇಳಿದರು.

ಪ್ರಾಥಮಿಕವಾಗಿ, ಸಾಂದರ್ಭಿಕ ಪುರಾವೆಗಳು ಬಲಿಪಶುವನ್ನು ಪೈಪೋಟಿ ಅಥವಾ ವೈಯಕ್ತಿಕ ಸೇಡಿನ ಮೇಲೆ ಗುಂಡು ಹಾರಿಸಿರಬಹುದು ಎಂದು ಸೂಚಿಸುತ್ತದೆ. ನಾವು ಎಲ್ಲಾ ಸಂಭಾವ್ಯ ಕೋನಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಮಹಾನಿರೀಕ್ಷಕ (ಬಸ್ತರ್ ರೇಂಜ) ಸುಂದರರಾಜ್ ಪಿ ಪಿಟಿಐಗೆ ತಿಳಿಸಿದರು.

2014 ರಲ್ಲಿ, ರಾಯ್ ಅವರ ಮೇಲೆ ಇಬ್ಬರು ವ್ಯಕ್ತಿಗಳು ಇದೇ ರೀತಿಯ ದಾಳಿ ನಡೆಸಿದ್ದರು ಆಗ ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದರು, ನಂತರ ಅರೋಪಿಗಳನ್ನು ಬಂಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News