ಬೆಂಗಳೂರು, ಜ.14- ಅಯೋಧ್ಯಯೆಯಲ್ಲಿ ಶ್ರೀರಾಮಮಂದಿರಲ್ಲಿ ಮೂರ್ತಿ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ದೇಶಾದ್ಯಂತ ದೇವಾಲಗಳ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆಗೆ ವ್ಯಾಪಕ ಬೆಂಬಲ ದೊರೆತಿದೆ.
ರಾಜ್ಯದಲ್ಲಿ ಬಿಜೆಪಿ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ ಶಿಕಾರಿಪುರದ ಶ್ರೀ ಹುಚ್ಚುರಾಯ ಸ್ವಾಮಿ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿದ್ದಾರೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಜಯನಗರದ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ, ಮಾಜಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಮಲ್ಲೆಶ್ವರಂನ ಕೋದಂಡರಾಮ ದೇವಸ್ಥಾನದಲ್ಲಿ, ಮೈಸೂರಿನ ಪ್ರತಾಪ್ ಸಿಂಹ ಕೋದಂಡರಾಮ ದೇವಸ್ಥಾನದಲ್ಲಿ, ಮಾಜಿ ಸಚಿವ ಗೋಪಾಲಯ್ಯ ದೊಡ್ಡಮ್ಮ ದೇವಿ ದೇವಾಲಯವನ್ನು ಸ್ವಚ್ಚ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ.
ರಾಮ ಮಂದಿರದ ಭವ್ಯ ಸ್ವಾಗತಕ್ಕಾಗಿ ಜನವರಿ 14ರಿಂದ 22ರವರೆಗೆ ಸ್ವಚ್ಛ ತೀರ್ಥ ಅಭಿಯಾನದ ವೈಯಕ್ತಿಕ ಶ್ರಮದಾನದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಲ್ಲದೆ, ಮಹಾರಾಷ್ಟ್ರದ ನಾಸಿಕ್‍ನಲ್ಲಿರುವ ಕಲಾರಾಮ್ ಮಂದಿರದಲ್ಲಿ ಖುದ್ದು ಸ್ವಚ್ಚತಾ ಶ್ರಮದಾನದಲ್ಲಿ ಭಾಗಿಯಾಗಿದ್ದರು.
ದೇಶದಾದ್ಯಂತ ಇರುವ ಎಲ್ಲಾ ದೇಗುಲ ಮತ್ತು ತೀರ್ಥಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ.
ಪಕ್ಷಬೇಧ ಮರೆತು ತೀರ್ಥ ಕ್ಷೇತ್ರಗಳ ಸ್ವಚ್ಚತಾ ಅಭಿಯಾನದ ಶ್ರಮದಾನದಲ್ಲಿ ಜನ ಭಾಗವಹಿಸುತ್ತಿದ್ದಾರೆ. ಶ್ರೀರಾಮ ಮೂರ್ತಿ ಪ್ರಾಣಪ್ರತಿಷ್ಠಾಪನೆಯನ್ನು ರಾಷ್ಟ್ರೀಯ ಸಂಭ್ರಮವನ್ನಾಗಿ ಪರಿವರ್ತಿಸಲಾಗಿದೆ. ದೇಶದ ಪ್ರತಿಯೊಂದು ಮನೆಗೂ ಅಕ್ಷತೆಯೊಂದಿಗೆ ಶ್ರೀರಾಮ ಮಂದಿರದ ಕರಪತ್ರಗಳನ್ನು ತಲುಪಿಸಲಾಗಿದೆ.
ಜನವರಿ 22ರಂದು ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ವೇಳೆಗೆ ಎಲ್ಲಾ ಭಕ್ತರು ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆಯಲ್ಲಿ ಭಾಗವಹಿಸುವಂತೆ ಕರೆ ನೀಡಲಾಗಿದೆ. ಅದೇ ದಿನ ಸಂಜೆ ತಮ್ಮ ಮನೆಯಲ್ಲಿ ಐದು ದೀಪಗಳನ್ನು ಉತ್ತರಾಭಿಮುಖವಾಗಿ ಹಚ್ಚಿ ಪ್ರಾರ್ಥಿಸುವಂತೆ ಮನವಿ ಮಾಡಲಾಗಿದೆ.
ಜೊತೆಯಲ್ಲಿ ದೇವಸ್ಥಾನಗಳ ಸ್ವಚ್ಚತೆಯಲ್ಲಿ ಶ್ರಮದಾನ ಮಾಡುವಂತೆ ನೀಡಿರುವ ಕರೆಗೆ ವ್ಯಾಪಕ ಸ್ಪಂದನೆ ದೊರೆಯುತ್ತಿದೆ.