Monday, May 6, 2024
Homeರಾಷ್ಟ್ರೀಯದೆಹಲಿಯಲ್ಲಿ ಪ್ರತಿಕೂಲ ಹವಾಮಾನ : 34 ವಿಮಾನಗಳ ಹಾರಾಟ ವಿಳಂಬ

ದೆಹಲಿಯಲ್ಲಿ ಪ್ರತಿಕೂಲ ಹವಾಮಾನ : 34 ವಿಮಾನಗಳ ಹಾರಾಟ ವಿಳಂಬ

ನವದೆಹಲಿ, ಜ.14-ಪ್ರತಿಕೂಲ ಹವಾಮಾನದಿಂದಾಗಿ ದೆಹಲಿ, ಬೆಂಗಳೂರು ಸೇರಿದಂತೆ ಹಲವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ಬಹಳಷ್ಟು ವಿಮಾನಗಳ ವಿಳಂಬ ಹಾರಾಟ ಹಾಗೂ ಮಾರ್ಗ ಬದಲಾವಣೆ ಮಾಡಬೇಕಾಯಿತು. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ದಟ್ಟ ಮಂಜು ಆವರಿಸಿದ ಹಿನ್ನೆಲೆಯಲ್ಲಿ 34 ವಿಮಾನಗಳ ಹಾರಾಟ ವಿಳಂಬವಾಯಿತು. ದಟ್ಟ ಮಂಜಿನಿಂದ ಮಾರ್ಗ ಅಗೋಚರವಾಗಿತ್ತು, ಹಾಗಾಗಿ ಎರಡು ಗಂಟೆಗೂ ಹೆಚ್ಚು ಕಾಲ ವಿಮಾನಗಳು ಟೇಕಾಫ್ ಆಗಿಲ್ಲ. ಹವಾಮಾನ ವೈಪರಿತ್ಯದಿಂದಾಗಿ ಪ್ರಯಾಣಿಕರು ಪರದಾಡುವಂತಾಯಿತು.

ದಟ್ಟ ಮಂಜಿನಿಂದ ರನ್ ವೇ ಕೂಡ ಕಾಣದಾಗಿತ್ತು. ಪ್ರಯಾಣಿಕರು ವಿಮಾನಗಳಲ್ಲೆ ಕುಳಿತ ಕಾಲಹರಣ ಮಾಡಬೇಕಾಯಿತು. ಬಿಸಿಲು ಕಾವೇರಿದ ಬಳಿಕ ಸುಮಾರು 9 ಗಂಟೆ ವೇಳೆಗೆ ಮಂಜು ಮರೆಯಾಯಿತು. ನಂತರ ಹಂತ ಹಂತವಾಗಿ ಒಂದೊಂದೆ ವಿಮಾನಗಳು ಟೇಕ್ ಆಫ್ ಆದವು. ಪ್ರತಿ ವರ್ಷ ಚಳಿಗಾಲದಲ್ಲಿ ಮುಂಜಾನೆ ಈ ಸಮಸ್ಯೆ ತಲೆದೂರುತ್ತದೆ. ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿ ಪ್ರಯಾಣಿಕರು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಚಳಿಗಾಲ ಮುಗಿಯುವವರೆಗೂ ಕನಿಷ್ಠ ಮೂರು ತಿಂಗಳು ಆಗಾಗ ಈ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ.

ಪಕ್ಷಿ ಪ್ರಭೇದ ರಕ್ಷಣೆಗಾಗಿ ಜಾರ್ಖಾಂಡ್‍ನಲ್ಲಿ ವಲ್ಚರ್ ರೆಸ್ಟೋರೆಂಟ್ ಆರಂಭ

ಇತ್ತ ದೆಹಲಿಯಲ್ಲೂ ದಟ್ಟ ಮಂಜಿನ ವಾತಾವರಣದಿಂದ ಬೆಳಗ್ಗೆ 4.30ರಿಂದ 7.30ರ ನಡುವೆ ಆರು ವಿಮಾನಗಳನ್ನು ಜೈಪುರಕ್ಕೆ ಮತ್ತು ಒಂದು ವಿಮಾನವನ್ನು ಮುಂಬೈಗೆ ಮಾರ್ಗ ಬದಲಾವನೆ ಮಾಡಲಾಯಿತು.
ಭಾನುವಾರದಂದು ದೆಹಲಿ ಮತ್ತು ಉತ್ತರ ಭಾರತದ ಇತರ ಭಾಗಗಳಲ್ಲಿ ಮಂಜಿನ ಕುರುಡು ಪದರವು ಆವರಿಸಿದೆ, ಗೋಚರತೆಯ ಮಟ್ಟವು ಹಲವಾರು ಸ್ಥಳಗಳಲ್ಲಿ ಶೂನ್ಯ ಮೀಟರ್‍ಗೆ ಇಳಿದಿತ್ತು.

ಭಾರತೀಯ ಹವಾಮಾನ ಇಲಾಖೆ ಜನರು ಅನಗತ್ಯ ಪ್ರಯಾಣದಿಂದ ದೂರವಿರಲು ಮತ್ತು ಚಾಲನೆ ಮಾಡುವಾಗ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದೆ. ದೆಹಲಿಯ ಇಂದಿರಾಗಾಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಪಾಲಂ ವೀಕ್ಷಣಾಲಯವು ದಟ್ಟವಾದ ಮಂಜು ಮುಂಜಾನೆ 5 ಗಂಟೆಯ ವೇಳೆಗೆ ಶೂನ್ಯ ಮೀಟರ್ ಮಟ್ಟಕ್ಕೆ ಇಳಿದಿತ್ತು ಎಂದು ವರದಿ ಮಾಡಿದೆ.

RELATED ARTICLES

Latest News