Sunday, April 28, 2024
Homeರಾಷ್ಟ್ರೀಯಲೋಕಸಭೆ ಚುನಾವಣೆ ಘೋಷಣೆ ಮುನ್ನವೇ ಅಭ್ಯರ್ಥಿಗಳ ಲಿಸ್ಟ್ ಪ್ರಕಟಿಸಲು ಮುಂದಾದ ಬಿಜೆಪಿ

ಲೋಕಸಭೆ ಚುನಾವಣೆ ಘೋಷಣೆ ಮುನ್ನವೇ ಅಭ್ಯರ್ಥಿಗಳ ಲಿಸ್ಟ್ ಪ್ರಕಟಿಸಲು ಮುಂದಾದ ಬಿಜೆಪಿ

ನವದೆಹಲಿ,ಡಿ.27- ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ನಡೆಸಿದ ಕಾರ್ಯತಂತ್ರಗಳು ಫಲ ಕೊಟ್ಟ ಹಿನ್ನೆಲೆಯಲ್ಲಿ ಆಡಳಿತ ಬಿಜೆಪಿ ಈ ಬಾರಿ ಚುನಾವಣಾ ದಿನಾಂಕ ಘೋಷಣೆಯಾಗುವ ಮುನ್ನವೇ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಲು ಮುಂದಾಗಿದೆ. ಮೂಲಗಳ ಪ್ರಕಾರ, ಜನವರಿ ತಿಂಗಳ ಅಂತ್ಯಕ್ಕೆ ಬಿಜೆಪಿ ಸುಮಾರು ಗೆದ್ದೇ ಗೆಲ್ಲುವ 300 ಕ್ಕೂ ಹೆಚ್ಚು ಲೋಕಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಲು ತೀರ್ಮಾನಿಸಿದೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯಸಭಾ ಸದಸ್ಯರೂ ಕೂಡ ಸ್ಪರ್ಧೆ ಮಾಡುವ ಸಾಧ್ಯತೆಯಿದ್ದು, ಗೆದ್ದೇ ಗೆಲ್ಲುವ ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲೇ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳಲಿದೆ.

ಇತ್ತೀಚೆಗೆ ನಡೆದ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಚುನಾವಣಾ ದಿನಾಂಕ ಘೋಷಣೆಯಾಗುವ ಮುನ್ನವೇ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು. ಪರಿಣಾಮ ಆಡಳಿತ ವಿರೋಧಿ ಅಲೆಯ ನಡುವೆಯೂ ಮಧ್ಯಪ್ರದೇಶದಲ್ಲಿ ಮರಳಿ ಅಧಿಕಾರಕ್ಕೆ ಬಂದರೆ ಸೋಲಬಹುದು ಎಂದು ಊಹಿಸಲಾಗಿದ್ದ ರಾಜಸ್ಥಾನ ಮತ್ತು ಛತ್ರೀಸ್‍ಗಡದಲ್ಲಿ ಗೆಲುವು ಸಾಧಿಸಿತು.

ತೆಲಂಗಾಣದಲ್ಲಿ ಗೆದ್ದಿದ್ದು 8 ಕ್ಷೇತ್ರಗಳಾದರೂ ಮತಗಳಿಕೆ ಪ್ರಮಾಣ ಹೆಚ್ಚಾಗಿರುವುದು ಬಿಜೆಪಿಯ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಹೀಗಾಗಿ ಈ ಬಾರಿ ಚುನಾವಣಾ ಆಯೋಗ ಮಾರ್ಚ್ ತಿಂಗಳ ಅಂತ್ಯಕ್ಕೆ ಲೋಕಸಭೆ ಚುನಾವಣೆಗೆ ದಿನಾಂಕವನ್ನು ಘೋಷಣೆ ಮಾಡುವ ಸಂಭವವಿದೆ.

ಮಂಜಿನ ನಗರಿಯಾದ ದೆಹಲಿ, ಆರೆಂಜ್ ಅಲರ್ಟ್ ಘೋಷಣೆ

ಇವೆಲ್ಲವನ್ನೂ ಅರಿತಿರುವ ಬಿಜೆಪಿ ವರಿಷ್ಠರು ಟಿಕೆಟ್ ಕೈ ತಪ್ಪುವವರಿಗೆ ಮೊದಲೇ ಮಾಹಿತಿಯನ್ನು ನೀಡಲಿದ್ದಾರೆ. ಅಭ್ಯರ್ಥಿಗಳ ಹೆಸರನ್ನು ಮುಂಚಿತವಾಗಿ ಘೋಷಿಸಿದರೆ ಕನಿಷ್ಠ ಪಕ್ಷ 3 ತಿಂಗಳು ಕ್ಷೇತ್ರದಾದ್ಯಂತ ಪ್ರವಾಸ ಸಂಘಟನೆ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ಕೇಳಿಬಂದಿದೆ.

ಕೊನೆಕ್ಷಣದಲ್ಲಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದರೆ ಭಿನ್ನಮತ ಎದುರಾಗುತ್ತದೆ. ಇದನ್ನು ತಪ್ಪಿಸಲು ಮುಂಚಿತವಾಗಿಯೇ ಪಟ್ಟಿಯನ್ನು ಪ್ರಕಟಿಸುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ.

RELATED ARTICLES

Latest News