Friday, October 11, 2024
Homeರಾಜ್ಯಪ್ರತಿಭಟನೆಯತ್ತ ಸುಳಿಯದ ಬಿಜೆಪಿ ಭಿನ್ನಮತೀಯರು

ಪ್ರತಿಭಟನೆಯತ್ತ ಸುಳಿಯದ ಬಿಜೆಪಿ ಭಿನ್ನಮತೀಯರು

ಬೆಂಗಳೂರು,ಸೆ.26- ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಬಿಜೆಪಿ ಕರೆ ಕೊಟ್ಟಿದ್ದ ಪ್ರತಿಭಟನೆಯಲ್ಲೂ ಭಿನ್ನಮತ ಸ್ಪೋಟಗೊಂಡಿದೆ. ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಗುರುವಾರ ಬೆಳಗ್ಗೆ 10.30ಕ್ಕೆ ನಡೆಯಲಿರುವ ಪ್ರತಿಭಟನೆಗೆ ಸಂಸದರು, ಶಾಸಕರು, ವಿಧಾನಪರಿಷತ್‌ ಸದಸ್ಯರು, ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಪದಾಧಿಕಾರಿಗಳು ಕಡ್ಡಾಯವಾಗಿ ಬರಬೇಕೆಂದು ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸೂಚನೆ ಕೊಟ್ಟಿದ್ದರು.

ಅದರಂತೆ ಪ್ರತಿಭಟನೆಗೆ ಶಾಸಕರು ಆಗಮಿಸಿದ್ದರಾದರೂ ವಿಜಯೇಂದ್ರ ವಿರೋಧಿ ಬಣದವರು ಅಪ್ಪಿತಪ್ಪಿಯೂ ಪ್ರತಿಭಟನೆ ಕಡೆ ತಲೆ ಹಾಕಲಿಲ್ಲ. ಬಿಜೆಪಿಯ ಖಾಯಂ ಭಿನ್ನಮತೀಯ ನಾಯಕರೆಂದೇ ಗುರುತಿಸಿಕೊಂಡಿರುವ ಬಸನಗೌಡ ಪಾಟೀಲ್‌ ಯತ್ನಾಳ್‌, ರಮೇಶ್‌ ಜಾರಕಿಹೊಳಿ, ಕುಮಾರ್‌ ಬಂಗಾರಪ್ಪ, ಪ್ರತಾಪ್‌ ಸಿಂಹ, ಅರವಿಂದ್‌ ಲಿಂಬಾವಳಿ ಸೇರಿದಂತೆ ಮತ್ತಿತರರು ಗೈರು ಹಾಜರಾಗಿದ್ದರು.
ವಿಜಯೇಂದ್ರ ಮತ್ತು ವಿಧಾನಸಭೆಯ ಪ್ರತಿಪಕ್ಷದ ನಾಯಕ ಅಶೋಕ್‌ ಕರೆಕೊಟ್ಟ ಪ್ರತಿಭಟನೆಗೆ ನಾವೇಕೆ? ಹೋಗಬೇಕೆಂದು ಇವರೆಲ್ಲರೂ ದೂರ ಉಳಿದಿದ್ದರು.

ಕೆಲ ದಿನಗಳ ಹಿಂದೆ ಭಿನ್ನಮತೀಯರು ಮತ್ತು ವಿಜಯೇಂದ್ರ ನಡುವೆ ಆರ್‌ಎಸ್‌‍ಎಸ್‌‍ ನಾಯಕ ಸಂಧಾನ ಸಭೆ ನಡೆಸಿ ಬರುವ ದಿನಗಳಲ್ಲಿ ಭಿನ್ನಮತಕ್ಕೆ ಅವಕಾಶ ಇಲ್ಲದಂತೆ ಪಕ್ಷ ಮುನ್ನಡೆಸಬೇಕೆಂದು ಸೂಚನೆ ಕೊಟ್ಟಿದ್ದರು. ಸಭೆಯಲ್ಲಿ ಭಾಗಿಯಾಗಿದ್ದ ಬಹುತೇಕರು ಭಿನ್ನಮತಕ್ಕೆ ಅವಕಾಶವಿಲ್ಲದಂತೆ ಪಕ್ಷದ ನಿರ್ದೇಶನವನ್ನು ಪಾಲನೆ ಮಾಡುವುದಾಗಿ ಹೇಳಿದ್ದರು. ಆದರೆ ಕೆಲವೇ ದಿನಗಳಲ್ಲಿ ವಿಜಯೇಂದ್ರ ಟೀಂಗೆ ತಾವು ಬೆಂಬಲಿಸುವುದಿಲ್ಲ ಎಂಬುದನ್ನು ಮತ್ತೊಮೆ ಸಾಬೀತು ಮಾಡಿದಂತಾಗಿದೆ.

RELATED ARTICLES

Latest News