Wednesday, September 10, 2025
Homeರಾಜ್ಯಮದ್ದೂರಿನಲ್ಲಿ ಧರ್ಮಾಂಧರ ಕಲ್ಲುತೂರಾಟಕ್ಕೆ ಪ್ರತಿಯಾಗಿ ಘರ್ಜನೆ ಮೂಲಕ ಗಣಪತಿ ವಿಸರ್ಜನೆ ಮಾಡಿದ ಹಿಂದೂಗಳು, ಸಾಥ್ ಕೊಟ್ಟ...

ಮದ್ದೂರಿನಲ್ಲಿ ಧರ್ಮಾಂಧರ ಕಲ್ಲುತೂರಾಟಕ್ಕೆ ಪ್ರತಿಯಾಗಿ ಘರ್ಜನೆ ಮೂಲಕ ಗಣಪತಿ ವಿಸರ್ಜನೆ ಮಾಡಿದ ಹಿಂದೂಗಳು, ಸಾಥ್ ಕೊಟ್ಟ ಬಿಜೆಪಿ

Saffron-stained Maddur, BJP supports Ganpati immersion in response to stone-pelting

ಮದ್ದೂರು,ಸೆ.10– ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲುತೂರಾಟ ಪ್ರಕರಣ ಸಂಬಂಧ ಪ್ರಕ್ಷುಬ್ಧಗೊಂಡಿದ್ದ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನಲ್ಲಿ ಸೇರಿಗೆ ಸವ್ವಾ ಸೇರು ಎಂಬಂತೆ ಗಣಪತಿಗಳನ್ನು ಭಾರೀ ಬಿಗಿ ಭದ್ರತೆ ನಡುವೆ ವಿಸರ್ಜನೆ ಮಾಡಿ ಹಿಂದೂಪರ ಸಂಘಟನೆಗಳು ಶಕ್ತಿ ಪ್ರದರ್ಶನ ನಡೆಸಿದವು.

ಮದ್ದೂರಿನ ಹತ್ತು ಹಾಗೂ ಸುತ್ತಮುತ್ತಲಿನ ಗ್ರಾಮಗಳ 18 ಗಣಪತಿ ಸೇರಿದಂತೆ ಒಟ್ಟು 28 ಗಣಪತಿ ಮೂರ್ತಿಗಳನ್ನು ಪೊಲೀಸರ ಸರ್ಪಗಾವಲಿನ ನಡುವೆ ಹಿಂದೂ ಯುವಕರ ಮುಗಿಲು ಮುಟ್ಟಿದ ಜೈಕಾರ, ಹರ್ಷೋದ್ಘಾರದ ನಡುವೆ ಶಿಂಷಾ ನದಿಯಲ್ಲಿ ವಿಸರ್ಜನೆ ಮಾಡಿದರು.
ಹಿಂದೂ ಸಂಘಟನೆಗಳ ಶಕ್ತಿ ಪ್ರದರ್ಶನವೆಂದೇ ಬಿಂಬಿತವಾಗಿದ್ದ ಮೆರವಣಿಗೆಗೆ ನಿರೀಕ್ಷೆಗೂ ಮೀರಿದ ಹಿಂದೂ ಯುವಕರು ಆಗಮಿಸಿ ಹಿಂದೂ ನಾವೆಲ್ಲಾ ಒಂದು ಎಂಬ ಸಂದೇಶವನ್ನು ರವಾನಿಸಿದರು.

ಬೂದಿ ಮುಚ್ಚಿದ ಕೆಂಡದಂತಿದ್ದ ಮದ್ದೂರು ಪಟ್ಟಣದಲ್ಲಿ ನಡೆದ ಗಣಪತಿ ವಿಸರ್ಜನೆಗೆ ಬಿಜೆಪಿ-ಜೆಡಿಎಸ್‌‍ ನಾಯಕರು ಬೆಂಬಲ ಕೊಟ್ಟಿದ್ದರು. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಮಂಡಲದ ಉಭಯಸದನಗಳ ಪ್ರತಿಪಕ್ಷದ ನಾಯಕರಾದ ಆರ್‌.ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಮೈಸೂರು-ಕೊಡಗು ಸಂಸದ ಯದುವೀರ್‌ ಒಡೆಯರ್‌, ಶಾಸಕ ಚನ್ನಬಸಪ್ಪ, ಮಾಜಿ ಸಚಿವರಾದ ಸಿ.ಟಿ.ರವಿ, ಪುಟ್ಟರಾಜು, ಡಾ.ಅಶ್ವತ್ಥ ನಾರಾಯಣ, ನಟಿ ಸುಮಲತಾ ಅಂಬರೀಶ್‌, ಮಾಜಿ ಶಾಸಕರಾದ ಪ್ರೀತಂಗೌಡ, ಸುರೇಶ್‌ಗೌಡ, ತಮಣ್ಣ ಸೇರಿದಂತೆ ಎರಡೂ ಪಕ್ಷಗಳ ಪ್ರಮುಖರು ಭಾಗಿಯಾಗಿದ್ದರು.

11.45ಕ್ಕೆ ಮದ್ದೂರು ಪಟ್ಟಣದ ಕಾಶಿ ವಿಶ್ವನಾಥ ದೇವಸ್ಥಾನದಿಂದ ಮೆರವಣಿಗೆ ಆರಂಭವಾಗಿ ಹೊಳೆಬೀದಿ,ಪೇಟೆ ಬೀದಿ, ಟಿಬಿ ಸರ್ಕಲ್‌, ಹಳೆ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಮೂರು ಕಿಲೋ ಮೀಟರ್‌ ಸಂಚರಿಸಿ ಕೊಲ್ಲಿ ಸರ್ಕಲ್‌ ಮೂಲಕ ಆಗಮಿಸಿ ಶಿಂಷಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.

ಪೂಜೆ, ಪುನಸ್ಕಾರ, ಹೋಮ, ಹವನದಂತಹ ಸಂಪ್ರದಾಯಗಳ ನಡುವೆ ಶಿಂಷಾದಲ್ಲಿ ವಿಧಿವತ್ತಾಗಿ ವಿಸರ್ಜನೆ ಮಾಡಲಾಯಿತು.ಸುಮಾರು 3 ಕಿ.ಮೀ.ವರೆಗೂ ಸಾಗಿಬಂದ ಗಣೇಶ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಂಡವು. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಯುವಕರು ಜೈ ಗಣೇಶ, ಜೈ ವಿನಾಯಕ ಘೋಷಣೆಗಳನ್ನು ಕೂಗಿ ಭಕ್ತಿಯನ್ನು ಮೆರೆದರು.

ಹಿಂದೂ ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ಇಡೀ ಮದ್ದೂರು ಪಟ್ಟಣ ಎಲ್ಲೆಲ್ಲೂ ಕೇಸರಿಮಯವಾಗಿತ್ತು. ಮಂಡ್ಯ, ಶ್ರೀರಂಗಪಟ್ಟಣ, ಮಳವಳ್ಳಿ ಸೇರಿದಂತೆ ತಾಲ್ಲೂಕಿನ ಸುತ್ತಮುತ್ತಲ ವಿನಾಯಕನ ಭಕ್ತರು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದರು. ಬೆಳಿಗ್ಗೆಯಿಂದಲೇ ಪಟ್ಟಣಕ್ಕೆ ತಂಡೋಪತಂಡವಾಗಿ ಆಗಮಿಸಿದ ಯುವಕರು ಹಣೆಗೆ ತಿಲಕ, ತಲೆಗೆ ರುಮಾಲು, ಕೇಸರಿ ಶಾಲು ಧರಿಸಿ ಜೈಕಾರದ ಘೋಷಣೆಗಳನ್ನು ಕೂಗುತ್ತಿದ್ದರು.

ಐಬಿ ವೃತ್ತದಲ್ಲಿ ವಿಜಯೇಂದ್ರ, ಅಶೋಕ್‌ ಮತ್ತಿತರ ಗಣ್ಯರು ಮೆರವಣಿಗೆಗೆ ಪೂಜೆ ಸಲ್ಲಿಸಿ ಚಾಲನೆ ಕೊಟ್ಟರು. ಮೆರವಣಿಗೆಯಲ್ಲಿ ಸಾಗಿ ಬಂದ ತಮ ತಮ ನಾಯಕರನ್ನು ಹಿಂದೂ ಯುವಕರು ಹೊತ್ತು ಕುಣಿದ ದೃಶ್ಯವೂ ಕಂಡುಬಂದಿತು. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಮೆರವಣಿಗೆ ಸಾಗಿ ಬರುತ್ತಿದ್ದಂತೆ ಕೆಲವರು ಇದ್ದಕ್ಕಿದ್ದಂತೆ ಪಟಾಕಿಯನ್ನು ಸಿಡಿಸಿ ಸಂಭ್ರಮಿಸಿದರು.

ಭಾರೀ ಭದ್ರತೆ :
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟದಿಂದ ಪ್ರಕ್ಷುಬ್ಧಗೊಂಡಿದ್ದ ಮದ್ದೂರು ಪಟ್ಟಣದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸರ್ಪಗಾವಲು ಹಾಕಿದ್ದರು.
ಸಾಮೂಹಿಕ ಗಣೇಶ ವಿಸರ್ಜನೆ ನಡೆಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆ ಹೆಚ್ಚಿಸಲಾಗಿತ್ತು.

ಮುನ್ನೆಚ್ಚರಿಕಾ ಕ್ರಮವಾಗಿ ಕೆಎಸ್‌‍ಆರ್‌ಪಿ, ಡಿಎಆರ್‌ ತುಕಡಿಗಳು, ಆರ್‌ಎಎಫ್‌ ಅನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.ಮೆರವಣಿಗೆಗೂ ಮುನ್ನ ಐಬಿಯಲ್ಲಿ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ್‌ ಬಾಲದಂಡಿ ಅವರ ನೇತೃತ್ವದಲ್ಲಿ ಐದು ಮಂದಿ ಎಸ್‌‍ಪಿ, ನಾಲ್ಕು ಮಂದಿ ಎಎಸ್‌‍ಪಿ ಸೇರಿದಂತೆ ಭದ್ರತೆಗೆ ಎರಡು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.

ಸರ್ಕಾರದ ವಿರುದ್ಧ ವಾಗ್ದಾಳಿ :
ಪ್ರತಿಭಟನಾ ಸಂದರ್ಭದಲ್ಲಿ ಮಾತನಾಡಿದ ವಿಜಯೇಂದ್ರ, ಅಶೋಕ್‌, ಸಿ.ಟಿ.ರವಿ ಸೇರಿದಂತೆ ಅನೇಕರು ರಾಜ್ಯಸರ್ಕಾರದ ವಿರುದ್ಧ ಬೆಂಕಿಯುಗುಳಿದರು.ಸರ್ಕಾರದ ತುಷ್ಟೀಕರಣದಿಂದಲೇ ಇಂದು ಹಿಂದೂಗಳ ಆರಾಧ್ಯದೈವ ಗಣೇಶನ ಮೆರವಣಿಗೆ ನಡೆಸದಂತಹ ಪರಿಸ್ಥಿತಿಯನ್ನು ಸರ್ಕಾರ ನಿರ್ಮಾಣ ಮಾಡಿದೆ. ಇದೇನು ಪ್ರಜಾಪ್ರಭುತ್ವ ವ್ಯವಸ್ಥೆಯೋ ಇಲ್ಲ ತಾಲಿಬಾನ್‌ ಸರ್ಕಾರವೋ ಎಂದು ಕಿಡಿಕಾರಿದರು.

ಕೆಲವರು ವೋಟ್‌ಬ್ಯಾಂಕ್‌ಗಾಗಿ ಈ ಮತಾಂಧರನ್ನು ನಮ ಬ್ರದರ್‌ರ‍ಸಗಳು ಎಂದು ಕರೆಯುತ್ತಾರೆ. ನಾವು ಏನೇ ಮಾಡಿದರೂ ಸರ್ಕಾರ ಕಾಪಾಡುತ್ತದೆ ಎಂಬ ಮಾನಸಿಕ ಸ್ಥಿತಿಯಲ್ಲಿರುವ ಜಿಹಾದಿಗಳು ಗಣೇಶನ ಮೆರವಣಿಗೆ ಮೇಲೆ ಕಲ್ಲು ಎಸೆಯುತ್ತಾರೆ. ಇದಕ್ಕೆ ಸರ್ಕಾರದ ಕುಮಕ್ಕು ಇದೆ ಎಂದು ಪ್ರಮುಖರು ಆರೋಪಿಸಿದರು.

RELATED ARTICLES

Latest News