Sunday, July 7, 2024
Homeರಾಷ್ಟ್ರೀಯಅಡ್ವಾಣಿಯವರಿಗೆ ಐಸಿಯುನಲ್ಲಿ ಮುಂದುವರಿದ ಚಿಕಿತ್ಸೆ

ಅಡ್ವಾಣಿಯವರಿಗೆ ಐಸಿಯುನಲ್ಲಿ ಮುಂದುವರಿದ ಚಿಕಿತ್ಸೆ

ನವದೆಹಲಿ, ಜು.4- ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಉಪಪ್ರಧಾನಿ ಲಾಲ್ಕೃಷ್ಣ ಅಡ್ವಾಣಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಪ್ರಸ್ತುತ ಅವರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

96 ವರ್ಷದ ಅಡ್ವಾಣಿ ಅವರಿಗೆ ಕಳೆದ ರಾತ್ರಿ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಅವರನ್ನು ದೆಹಲಿಯ ಏಮ್ಸೌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಸ್ತುತ ಅಡ್ವಾಣಿಯವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರು ಪ್ರಸ್ತುತ ನರವಿಜ್ಞಾನ ವಿಭಾಗದ ವೈದ್ಯರ ತಂಡದಿಂದ ನಿಗಾದಲ್ಲಿದ್ದಾರೆ ಎಂದು ಏಮ್ಸೌ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಲಾಗಿದೆ.

ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಅಡ್ವಾಣಿ ಅವರನ್ನು ಆಸ್ಪತ್ರೆಗೆ ಕರೆತರಲಾಗಿದೆ. ಅವರ ಜೊತೆ ಪ್ರತಿಭಾ ಅಡ್ವಾಣಿಯವರು ಆಸ್ಪತ್ರೆಗೆ ಬಂದಿದ್ದರು. ಡ್ವಾಣಿ ಅವರನ್ನು ನರರೋಗ ವಿಭಾಗದ ಹಿರಿಯ ಸಲಹೆಗಾರ ಡಾ.ವಿನಿತ್ ಸೂರಿ ನೇತೃತ್ವದಲ್ಲಿ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

RELATED ARTICLES

Latest News