Sunday, October 13, 2024
Homeರಾಷ್ಟ್ರೀಯ | Nationalಮಹಿಳೆ ಮೇಲೆ ರಿಯಲ್ ಎಸ್ಟೇಟ್ ಏಜೆಂಟರಿಂದ ಲೈಂಗಿಕ ದೌರ್ಜನ್ಯ

ಮಹಿಳೆ ಮೇಲೆ ರಿಯಲ್ ಎಸ್ಟೇಟ್ ಏಜೆಂಟರಿಂದ ಲೈಂಗಿಕ ದೌರ್ಜನ್ಯ

ಹೈದರಾಬಾದ್,ಜೂ.4- ರಿಯಲ್ ಎಸ್ಟೇಟ್ ಮಾರಾಟಗಾರ ಮತ್ತು ಆತನ ಸಹಾಯಕರು ಮಹಿಳೆಯೊಬ್ಬರಿಗೆ ತಂಪು ಪಾನೀಯ ಕುಡಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಹೈದರಾಬಾದ್ನಲ್ಲಿನಡೆದಿದೆ.

ಜನಾರ್ದನ್ ಮತ್ತು ಸಂಗ ರೆಡ್ಡಿ ಆರೋಪಿಗಳಾಗಿದ್ದು, ಮಹಿಳೆ ನೀಡಿದ ದೂರಿನ ಮೇರೆಗೆ ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಮಿಯಾಪುರಕ್ಕೆ ಭೇಟಿ ನೀಡಿದ್ದು, ಯಾದಗಿರಿಗುಟ್ಟಕ್ಕೆ ಭೇಟಿ ನೀಡಲು ಇಬ್ಬರು ವ್ಯಕ್ತಿಗಳು ತನ್ನನ್ನು ಕರೆದುಕೊಂಡು ಹೋಗಿದ್ದರು ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ರಾತ್ರಿ ಹಿಂತಿರುಗುವಾಗ, ಅವರು ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ನಿಲ್ಲಿಸಿ, ಕಾರು ಕೆಟ್ಟುಹೋಗಿದೆ ಎಂದರು. ನಂತರ ಇಬ್ಬರು ಪುರುಷರು ಅವಳಿಗೆ ಆಹಾರ ನೀಡಿದರು, ಅವಳು ನಿರಾಕರಿಸಿದ್ದರಿಂದ ಅಂತಿಮವಾಗಿ ಆಕೆಗೆ ತಂಪು ಪಾನೀಯವನ್ನು ಕುಡಿಯಲು ಮನವೊಲಿಸಿದ್ದಾರೆ. ಅದನ್ನು ಕುಡಿದು ಅವಳಿಗೆ ತಲೆತಿರುದಂತಾಗಿದೆ.

ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡ ಅರೋಪಿಗಳು ಕಾರಿನಲ್ಲಿಯೇ ಆಕೆಯನ್ನು ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ ಆಕೆಗೆ ಥಳಿಸಿ ಮಿಯಾಪುರದ ಹಾಸ್ಟೆಲ್ನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.ಪೊಲೀಸರು ಅತ್ಯಾಚಾರ ಮತ್ತು ಇತರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

RELATED ARTICLES

Latest News