Friday, July 19, 2024
Homeರಾಜಕೀಯಕಾಂಗ್ರೆಸ್ ನಾಯಕರು ಸ್ಟಾಲಿನ್ ಗುಲಾಮರಾಗಿದ್ದಾರೆ : ಬಿಜೆಪಿ ಟೀಕೆ

ಕಾಂಗ್ರೆಸ್ ನಾಯಕರು ಸ್ಟಾಲಿನ್ ಗುಲಾಮರಾಗಿದ್ದಾರೆ : ಬಿಜೆಪಿ ಟೀಕೆ

ಬೆಂಗಳೂರು,ಸೆ.30- ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪರ ಪ್ರಚಾರ ಮಾಡಿದ್ದ ಸಿದ್ದರಾಮಯ್ಯನವರಿಗೆ ಹೈಕಮಾಂಡ್ ತಮ್ಮ ಬುಡ ಅಲುಗಾಡಿಸಬಹುದೆಂಬ ಭಯ..! ತಮಿಳುನಾಡಿನಲ್ಲಿ ಡಿಎಂಕೆ ಪರ ಪ್ರಚಾರ ಮಾಡಿದ್ದ ಡಿ.ಕೆ. ಶಿವಕುಮಾರ್ ತಮ್ಮ ಸ್ವಾರ್ಥ ಮಹತ್ವಾಕಾಂಕ್ಷೆಗಾಗಿ ಹೈಕಮಾಂಡ್ಗೆ ನಿಯತ್ತು ತೋರಿಸಲೇಬೇಕಿದೆ..! ರಾಹುಲ್ ಗಾಂಧಿ ಸ್ನೇಹಿತ ಸ್ಟಾಲಿನ್ ಎದುರು ನಿಂತರೆ ಸಂಪುಟದಲ್ಲಿ ತಮ್ಮ ತಮ್ಮ ಕುರ್ಚಿಗಳು ಉಳಿಯವುದಿಲ್ಲವೆಂದು ನಮ್ಮ ಸಚಿವರುಗಳಿಗೆ ಭಯ..! ಎಂದು ಬಿಜೆಪಿ ಟೀಕೆ ಮಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಇಂಡಿಯಾ ಮೈತ್ರಿಕೂಟದಲ್ಲಿ ಬಿರುಕು ಬಂದರೆ ತಮಿಳುನಾಡಿನಲ್ಲಿ ಎಂಪಿ ಸೀಟು ಸಿಗುವುದಿಲ್ಲವೆಂಬ ಆತಂಕ..! ಕರ್ನಾಟಕದ ಚುನಾವಣೆಗೆ ಕಾಂಗ್ರೆಸ್ ಸ್ಟಾಲಿನ್ ಸರ್ಕಾರದಿಂದ ದೊಡ್ಡ ಮಟ್ಟದ ಸಹಾಯಹಸ್ತ ಪಡೆದಿರುವುದು ಹಾಗೂ ಸ್ಟಾಲಿನ್ರಿಗೆ ನೀರು ಬಿಡದಿದ್ದರೂ ಕರ್ನಾಟಕದಲ್ಲಿ ಕಾಂಗ್ರೆಸ್ ಒಂದೇ ಒಂದು ಎಂಪಿ ಸ್ಥಾನ ಗೆಲ್ಲುವುದಿಲ್ಲವೆಂಬ ಗ್ಯಾರಂಟಿ.

ಬಿಜೆಪಿ ಬೆಂಕಿ ಇದ್ದಂತೆ, ಜೆಡಿಎಸ್ ಅದನ್ನು ತಬ್ಬಿಕೊಳ್ಳುತ್ತಿದೆ : ಸಿಎಂ ಸಿದ್ದರಾಮಯ್ಯ

ಅಧಿಕಾರ ಸಿಕ್ಕಿದೆ ನಮ್ಮನ್ನು ಯಾವ ಕನ್ನಡಿಗರು, ಕರ್ನಾಟಕ ಇನ್ನೈದು ವರ್ಷ ಏನು ಮಾಡಿಕೊಳ್ಳಲು ಸಾಧ್ಯವಿಲ್ಲವೆಂಬ ಅಹಂ, ಭ್ರಮೆ..! ಎಂದು ಕಾಂಗ್ರೆಸ್ ವಿರುದ್ದ ಸ್ಟಾಲಿನ್ ಗುಲಾಮರು ಎಂದು ಕಿಡಿಕಾರಿದೆ.

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಉಪಕಾರ ಮಾಡಿದ ಕೇಂದ್ರ ಸರ್ಕಾರವನ್ನೇ ದೂಷಿಸುವ ಸಿದ್ದರಾಮಯ್ಯ ಅವರು ಮೇಕೆದಾಟು ಯೋಜನೆಗೆ ತಮ್ಮ ಆಪ್ತರಾದ ಸ್ಟಾಲಿನ್ ಜತೆ ಮಾತನಾಡಿ ಅವರಿಂದ ಅನುಮತಿ ಪಡೆಯುವ ಪ್ರಯತ್ನವನ್ನೂ ಮಾಡುತ್ತಿಲ್ಲ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

RELATED ARTICLES

Latest News