Friday, November 22, 2024
Homeರಾಜ್ಯಅನಿಲ್ ಶೆಟ್ಟಿ ಮೇಲೆ ಹಲ್ಲೆ : ಶಿಸ್ತುಕ್ರಮಕ್ಕೆ ಒತ್ತಾಯಿಸಿ ವಿಜಯೇಂದ್ರಗೆ ಪತ್ರ

ಅನಿಲ್ ಶೆಟ್ಟಿ ಮೇಲೆ ಹಲ್ಲೆ : ಶಿಸ್ತುಕ್ರಮಕ್ಕೆ ಒತ್ತಾಯಿಸಿ ವಿಜಯೇಂದ್ರಗೆ ಪತ್ರ


ಬೆಂಗಳೂರು,ಡಿ.19-ಸಂಸದ ತೇಜಸ್ವಿ ಸೂರ್ಯ ಹುಟ್ಟುಹಬ್ಬದ ಆಚರಣೆ ಸಂದರ್ಭದಲ್ಲಿ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಮುಖಂಡರಾದ ಅನಿಲ್ ಶೆಟ್ಟಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಿಷ್ಠಾವಂತ ಬಿಜೆಪಿ ಕಾರ್ಯಕರ್ತರು, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಪತ್ರ ಬರೆದಿದ್ದಾರೆ. ಬಿಜೆಪಿ ನಿಷ್ಠಾವಂತ ಕಾರ್ಯಕರ್ತರ ಬಳಗ ಬಿಟಿಎಂ ವಿಧಾನಸಭಾ ಕ್ಷೇತ್ರ ಎರಡು ಪುಟಗಳ ಪತ್ರವನ್ನು ಬಿ.ವೈ.ವಿಜಯೇಂದ್ರ ಮತ್ತು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದಿರುವ ಬಿಜೆಪಿಯ ನಿಷ್ಠಾವಂತ ಕಾರ್ಯಕರು ಅನಿಲ್ ಶೆಟ್ಟಿ ಮೇಲೆ ಹಲ್ಲೆ ಮಾಡಿರುವ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ.

ನ.16ರಂದು ರಾಜೇಂದ್ರನಗರದ ಪಳನಿ ಮನೆ ಹತ್ತಿರ ಇರುವ ತೇಜಸ್ವಿ ಸೂರ್ಯ ಅವರ ಹುಟ್ಟುಹಬ್ಬದ ಪ್ರಯುಕ್ತ ವಿಶ್ವಕರ್ಮ ಮತ್ತು ಸುಹಾನಿ ಯೋಜನೆಗೆ ಚಾಲನೆ ನೀಡಲು ಆಗಮಿಸುತ್ತಿದ್ದರು. ಅದೇ ದಿನ ಸಂಜೆ ಸುದರ್ಶನ್ ಅವರು ರಾಜೇಂದ್ರನಗರದ ಕಾರ್ಯಕ್ರಮಕ್ಕೆ ತೇಜಸ್ವಿ ಸೂರ್ಯ ಬರುತ್ತಾರೆ. ಹೀಗಾಗಿ ಸ್ಥಳೀಯ ನಿವಾಸಿಗಳಿಗೆ ಬೆಡ್‍ಶೀಟ್‍ಗಳನ್ನು ಮುಖಂಡರಾದ ಶ್ರೀಧರ್ ರೆಡ್ಡಿ ಅವರು ಕೊಡಿಸುತ್ತಾರೆ ಎಂದು ಹೇಳಿದ್ದರು.

ರಾಜೇಂದ್ರ ನಗರದ 6ನೇ ಕ್ರಾಸ್‍ನ ಪುನೀತ್ ಸರ್ಕಲ್‍ನಲ್ಲಿ ಶಾಮೀನ ಹಾಕಿಸಿ ಬೆಡ್‍ಶೀಟ್ ಬದಲು ಸೀರೆ ವಿತರಿಸುವ ತೀರ್ಮಾನಕ್ಕೆ ಬರಲಾಯಿತು. ಅನಿಲ್ ಶೆಟ್ಟಿ ಬಳಗದವರು ಪಳನಿ ಮನೆಯ ಹತ್ತಿರ ಹೋಗೋಣವೆಂದರೆ ಶ್ರೀಧರ್ ರೆಡ್ಡಿ ಮತ್ತು ಸುದರ್ಶನ್ ಅವರು 6ನೇ ಕ್ರಾಸ್‍ನಲ್ಲಿ ಸೀರೆ ಹಂಚೋಣ ಎಂದು ಹೇಳಿದ್ದರು.

ಗ್ಯಾನವ್ಯಾಪಿ ಮಸೀದಿಯಲ್ಲಿ ಹಿಂದೂಗಳ ಪೂಜೆ ಪ್ರಶ್ನಿಸಿ ಮುಸ್ಲಿಮರು 5 ಅರ್ಜಿಗಳು ವಜಾ

ಆ ವೇಳೆಗೆ ವಿಷಯ ತಿಳಿದ ಅನಿಲ್ ಶೆಟ್ಟಿ, ಸೀರೆ ಹಂಚುವ ಜಾಗಕ್ಕೆ ಬಂದು ನಿಮಗೆ ಇಲ್ಲಿ ಕಾರ್ಯಕ್ರಮ ನಡೆಸಲು ಹೇಳಿದವರು ಯಾರು? ನಮಗೆ ಮಾಹಿತಿ ನೀಡಬೇಕಲ್ಲವೇ ಎಂದು ಕೇಳಿದಾಗ, ಸುದರ್ಶನ್ ಬೆಂಬಲಿಗರು ಗಲಾಟೆ ಎಬ್ಬಿಸಿ ಒಂದು ಗತಿ ಕಾಣಿಸುತ್ತೇನೆ ಎಂದು ಧಮ್ಕಿ ಹಾಕಿದರು ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. ಸುಮಾರು 15 ಜನರು ಕೋರಮಂಗಲದ ಅನಿಲ್ ಶೆಟ್ಟಿ ಮನೆಗೆ ಹೋಗಿ ಕೆಟ್ಟ ಶಬ್ದಗಳಿಂದ ನಿಂದಿಸಿದಲ್ಲದೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.

ಬಳಿಕ ಅನಿಲ್ ಶೆಟ್ಟಿ ಅವರು ಕೋರಮಂಗಲ ಪೊಲೀಸ್ ಠಾಣೆಗೆ ಬಂದು ದೂರು ನೀಡಲು ಮುಂದಾಗುತ್ತಿದ್ದಂತೆ ತೇಜಸ್ವಿ ಸೂರ್ಯ ಮೂಲಕ ಸಮಸ್ಯೆ ಪರಿಹರಿಸುವ ಆಶ್ವಾಸನೆಯನ್ನು ನೀಡಲಾಗಿತ್ತು. ಆದರೆ ಇದುವರೆಗೂ ಯಾವುದೇ ಕ್ರಮವನ್ನು ಜರುಗಿಸಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಕೂಡಲೇ ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ ಸಾಕಷ್ಟು ಒಳಜಗಳಗಳಿದ್ದು, ಇದು ಪಕ್ಷ ಸಂಘಟನೆಗೆ ಹಿನ್ನಡೆಯಾಗಿದೆ. ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಬೇಕೆಂದು ನಿಷ್ಠಾವಂತ ಪಕ್ಷದ ಕಾರ್ಯಕರ್ತರು ಮನವಿ ಮಾಡಿದ್ದಾರೆ.

RELATED ARTICLES

Latest News