Sunday, April 28, 2024
Homeರಾಷ್ಟ್ರೀಯಗ್ಯಾನವ್ಯಾಪಿ ಮಸೀದಿಯಲ್ಲಿ ಹಿಂದೂಗಳ ಪೂಜೆ ಪ್ರಶ್ನಿಸಿ ಮುಸ್ಲಿಮರು 5 ಅರ್ಜಿಗಳು ವಜಾ

ಗ್ಯಾನವ್ಯಾಪಿ ಮಸೀದಿಯಲ್ಲಿ ಹಿಂದೂಗಳ ಪೂಜೆ ಪ್ರಶ್ನಿಸಿ ಮುಸ್ಲಿಮರು 5 ಅರ್ಜಿಗಳು ವಜಾ

ಅಲಹಾಬಾದ್,ಡಿ.19-ಉತ್ತರಪ್ರದೇಶದ ವಾರಣಾಸಿಯಲ್ಲಿರುವ ಗ್ಯಾನವ್ಯಾಪಿ ಮಸೀದಿಯಲ್ಲಿ ಹಿಂದೂಗಳು ಸಲ್ಲಿಸುವ ಪೂಜೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಐದು ಅರ್ಜಿಗಳನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ಇದರಿಂದ ಕಾನೂನು ಹೋರಾಟದಲ್ಲಿ ಹಿಂದೂಗಳ ಹೋರಾಟಕ್ಕೆ ಮತ್ತೊಂದು ಜಯ ಸಿಕ್ಕಿದ್ದರೆ, ಮುಸ್ಲಿಂ ವಕ್‍ಬೋರ್ಡ್ ಮಂಡಳಿಗಳಿಗೆ ಭಾರೀ ಹಿನ್ನಡೆಯಾಗಿದೆ. ಭಾರತೀಯ ಪುರತತ್ವ ಇಲಾಖೆ ನಡೆಸಿದ ವೈಜ್ಞಾನಿಕ ಸಮೀಕ್ಷೆ ಆಧಾರದ ಮೇಲೆ ಗ್ಯಾನವ್ಯಾಪಿ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ತೀರ್ಮಾನಿಸಲಾಗಿತ್ತು. ಇದಕ್ಕೆ ಅವಕಾಶ ಕೊಡಬಾರದೆಂದು ಅಲಹಾಬಾದ್‍ನ ಹೈಕೋರ್ಟ್ ಒಟ್ಟು 5 ಅರ್ಜಿಗಳನ್ನು ಸಲ್ಲಿಸಲಾಗಿತ್ತು.

ಮಸೀದಿ ಇರುವ ಸ್ಥಳದಲ್ಲಿ ದೇವಾಲಯವನ್ನು ಮರುಸ್ಥಾಪಿಸುವ ಬಗ್ಗೆ ಹಿಂದೂ ಸಮುದಾಯ ಸಲ್ಲಿಸಿದ ಅರ್ಜಿಯನ್ನು ಹಾಗೂ ಬಾಕಿ ಉಳಿದಿರುವ ಸಿವಿಲ್ ಮೊಕದ್ದಮೆಯ ನಿರ್ವಹಣೆಯನ್ನು ಪ್ರಶ್ನಿಸಿ ಅಂಜುಮಾನ್ ಇಂತೆ ಜಾಮೀಯ ಮಸೀದಿ, ಉತ್ತರಪ್ರದೇಶ ಸುನ್ನಿ ಸೆಂಟ್ರಲ್ ವಕ್‍ಬೋರ್ಡ್ ಸೇರಿ ಒಟ್ಟು ಐದು ಅರ್ಜಿಗಳನ್ನು ಸಲ್ಲಿಸಲಾಗಿತ್ತು.

ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ಈ ಎಲ್ಲ ಅರ್ಜಿಗಳನ್ನು ವಜಾಗೊಳಿಸಿದೆ. ನ್ಯಾಯಮೂರ್ತಿ ರೋಹಿತ್ ರಂಜನ್ ಅಗ್ರವಾಲ್ ಅವರಿದ್ದ ಏಕಸದಸ್ಯ ಪೀಠ, ಸಲ್ಲಿಕೆ ಮಾಡಿರುವ ಐದು ಅರ್ಜಿಗಳ ಪೈಕಿ ಮೂರು ಅರ್ಜಿಗಳು 1991ರಲ್ಲಿ ವಾರಣಾಸಿ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣದ ನಿರ್ವಹಣೆಗೆ ಸಂಬಂಧಿಸಿದೆ. ಉಳಿದ ಎರಡು ಅರ್ಜಿಗಳು ಭಾರತೀಯ ಪುರತತ್ವ ಇಲಾಖೆ ಸಮೀಕ್ಷೆ ಆದೇಶದ ವಿರುದ್ಧವಾಗಿದೆ ಎಂದು ತೀರ್ಪು ನೀಡಿತು.

ರಾಷ್ಟ್ರೀಯ ಪ್ರಾಮುಖ್ಯತೆ ಹಾಗೂ 1991 ಕಾಯಿದೆ ಅನುಸಾರವಾಗಿ ಧಾರ್ಮಿಕ ಆರಾಧನೆಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಈಗಾಗಲೇ ಈ ಬಗ್ಗೆ ಕಾನೂನಾತ್ಮಕವಾಗಿ ತನಿಖೆ ಹಾಗೂ ವಿಚಾರಣೆಗಳು ನಡೆಯುತ್ತಿದೆ. ಗ್ಯಾನವ್ಯಾಪಿ ಮಸೀದಿಯ ಸಮಗ್ರ ಸಮೀಕ್ಷೆಯನ್ನು ನಡೆಸಲು ಏಪ್ರಿಲ್ 8, 2021ರ ವಾರಣಾಸಿ ನ್ಯಾಯಾಲಯದ ಆದೇಶ ನೀಡಿತ್ತು. ಇದನ್ನು ಅಂಜುಮನ್ ಇಂತೇಜಾಮಿಯಾ ಮಸಾಜಿದ್ ಸಮಿತಿ (ಎಐಎಂಸಿ) ಮತ್ತು ಉತ್ತರಪ್ರದೇಶ ಸುನ್ನಿ ಸೆಂಟ್ರಲ್ ವಕ್ ಬೋರ್ಡ್ ಪ್ರಶ್ನಿಸಿತ್ತು.

ಡಿಸೆಂಬರ್ 8ರಂದು ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರು ಎರಡು ಕಡೆಯ ವಾದವನ್ನು ಆಲಿಸಿದ ನಂತರ ಈ ತೀರ್ಪು ನೀಡಿದ್ದಾರೆ. ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಗ್ಯಾನವ್ಯಾಪಿ ಮಸೀದಿಯ ನಿರ್ವಹಣೆಯನ್ನು ನೋಡಿಕೊಳ್ಳುವ ಎಐಎಂಸಿ, ವಾರಣಾಸಿ ನ್ಯಾಯಾಲಯದಲ್ಲಿ ದಾಖಲಾದ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿದೆ, ಇದರಲ್ಲಿ ಹಿಂದೂ ಅರ್ಜಿದಾರರು ಗ್ಯಾನವ್ಯಾಪಿ ಮಸೀದಿ ಇರುವ ಸ್ಥಳದಲ್ಲಿ ದೇವಾಲಯವನ್ನು ಮರುಸ್ಥಾಪಿಸಲು ಕೋರಿದ್ದಾರೆ.

1991ರಲ್ಲಿ ಆದಿ ವಿಶ್ವೇಶ್ವರ ದೇಗುಲವನ್ನು ಪುನರ್ ನಿರ್ಮಿಸುವಂತೆ ವಾರಣಾಸಿ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣದಲ್ಲಿ ವಿವಾದಿತ ಜಾಗವನ್ನು ಹಿಂದೂಗಳಿಗೆ ಹಸ್ತಾಂತರಿಸುವಂತೆ ಹಾಗೂ ಅಲ್ಲಿ ಪೂಜೆಗೆ ಅವಕಾಶ ನೀಡುವಂತೆ ಆಗ್ರಹ ಮಾಡಲಾಗಿತ್ತು. ಸೋಮನಾಥ ವ್ಯಾಸ್-ರಾಮನಾರಾಯಣ ಶರ್ಮಾ ಮತ್ತು ಹರಿಹರ ಪಾಂಡೆ ಅವರು ವಾರಣಾಸಿ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸಿದ್ದರು.

ಸಲಿಂಗ ದಂಪತಿಗಳನ್ನು ಆಶೀರ್ವದಿಸಲು ಪೋಪ್ ಅನಮೋದನೆ

1991ರ ಪೂಜಾ ಸ್ಥಳಗಳ ಕಾಯಿದೆಯಡಿ ಆದಿ ವಿಶ್ವೇಶ್ವರ ದೇಗುಲ ಪ್ರಕರಣವನ್ನು ವಿಚಾರಣೆ ನಡೆಸುವಂತಿಲ್ಲ ಎಂದು ಮುಸ್ಲಿಮರ ಕಡೆಯವರು ವಾದಿಸಿದ್ದರು. ಈ ವಿವಾದವು ಸ್ವಾತಂತ್ರ್ಯ ಪೂರ್ವದಲ್ಲಿತ್ತು ಮತ್ತು ಗ್ಯಾನವ್ಯಾಪಿ ವಿವಾದದಲ್ಲಿ ಪೂಜಾ ಸ್ಥಳಗಳ ಕಾಯಿದೆಯು ಅನ್ವಯಿಸುವುದಿಲ್ಲ ಎಂದು ಹಿಂದೂಗಳ ಕಡೆಯಿಂದ ವಾದಿಸಲಾಗಿತ್ತು.

ಕಾಶೀ ವಿಶ್ವನಾಥ ಮಂದಿರಕ್ಕೆ ತಾಗಿಕೊಂಡಿದ್ದ ಆದಿ ವಿಶ್ವೇಶ್ವರ ದೇವಸ್ಥಾನ ಒಡೆದೇ ಗ್ಯಾನವ್ಯಾಪಿ ಮಂದಿರ ಕಟ್ಟಲಾಗಿದೆ. ಲಕ್ಷಕ್ಕೂ ಅಧಿಕ ಮಂದಿರಗಳು ಒಡೆಯಲಾಗಿದೆ, ಕೆಲ ಮಂದಿರವನ್ನೇ ಮಸೀದಿಯಾಗಿ ಪರಿವರ್ತಿಸಲಾಗಿದೆ. ಆದರೆ ಹಿಂದೂಗಳ ಮುಖ್ಯ ಶ್ರದ್ಧಾ ಹಾಗೂ ಭಕ್ತಿಯ ಕೇಂದ್ರವಾಗಿರುವ ಹಾಗೂ ಹಿಂದೂಗಳ ಮೂಲ ಆಗಿರುವ ಈ ಧಾರ್ಮಿಕ ಕೇಂದ್ರದಲ್ಲಿ ಮಸೀದಿ ತೆರವು ಮಾಡಿ, ದೇವಸ್ಥಾನ ಪುನರ್ ನಿರ್ಮಾಣ ಮಾಡಬೇಕು ಎಂದು ಕೋರಿ 1991ರಲ್ಲಿ ಕಾನೂನು ಹೋರಾಟ ಆರಂಭಗೊಂಡಿತ್ತು.

ಕಾಶ್ಮೀರದಲ್ಲಿ ರೋಹಿಂಗ್ಯಾಗಳಿಗೆ ಆಶ್ರಯ ನೀಡಿದವರ ವಿರುದ್ಧ ಎಫ್‍ಐಆರ್

1991ರ ಪ್ರಕರಣದ ವಿಚಾರಣೆಯನ್ನು ಸಹ ಅನುಮೋದಿಸಿರುವ ನ್ಯಾಯಾಲಯ, ಆರು ತಿಂಗಳೊಳಗೆ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಈ ಹಿಂದೆ ಹೈಕೋರ್ಟ್ ಆದೇಶ ನೀಡಿತ್ತು.

RELATED ARTICLES

Latest News