ನವದೆಹಲಿ, ಡಿ 27 (ಪಿಟಿಐ) ಇಲ್ಲಿನ ಇಸ್ರೇಲ್ ರಾಯಭಾರ ಕಚೇರಿ ಬಳಿ ಸಂಭವಿಸಿದ ಕಡಿಮೆ ತೀವ್ರತೆಯ ಸ್ಪೋಟದ ಬಗ್ಗೆ ದೆಹಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ ಮತ್ತು ಸ್ಪೋಟಕ್ಕೆ ಸ್ವಲ್ಪ ಮೊದಲು ಇಬ್ಬರು ಯುವಕರು ಸ್ಥಳಕ್ಕೆ ಸಮೀಪವಿರುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಚಾಣಕ್ಯಪುರಿ ರಾಜತಾಂತ್ರಿಕ ಎನ್‍ಕ್ಲೇವ್‍ನಲ್ಲಿರುವ ರಾಯಭಾರ ಕಚೇರಿ ಬಳಿ ನಿನ್ನೆ ನಡೆದ ಸೋಟದ ನಂತರ ಪೊಲೀಸರು ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಸ್ರೇಲ್ ರಾಯಭಾರಿ ಕಚೇರಿ ಮತ್ತು ದೆಹಲಿಯಲ್ಲಿರುವ ಯಹೂದಿ ಸಂಸ್ಥೆಗಳ ಸುತ್ತಮುತ್ತಲಿನ ಪ್ರದೇಶಗಳನ್ನು ಭದ್ರತಾ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಕಟ್ಟೆಚ್ಚರವನ್ನು ಹೆಚ್ಚಿಸಲು ಸ್ಥಳೀಯ ಪೊಲೀಸರನ್ನು ಕೇಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಸ್ಪೋಟಕ್ಕೆ ಸ್ವಲ್ಪ ಮೊದಲು ಇಬ್ಬರು ಯುವಕರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸ್ಥಳದ ಸಮೀಪದಿಂದ ಸಿಸಿಟಿವಿ ದೃಶ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರು ಶಂಕಿತರೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಅಧಿಕಾರಿ ಹೇಳಿದರು.
ಭದ್ರತಾ ಸಂಸ್ಥೆಗಳು ಅಬ್ದುಲ್ ಕಲಾಂ ರಸ್ತೆ ಮತ್ತು ಪೃಥ್ವಿರಾಜ್ ರಸ್ತೆಯ ಲೇನ್‍ಗಳಿಂದ ಅನೇಕ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿವೆ. ಘಟನಾ ಸ್ಥಳದಲ್ಲಿ ಸ್ಪೋಟಕಗಳ ಅವಶೇಷಗಳು ಪತ್ತೆಯಾಗದ ಕಾರಣ, ರಾಸಾಯನಿಕ ಸ್ಪೋಟದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎಗೆ ಬಹುಮತ ಗ್ಯಾರಂಟಿ : ಸಮೀಕ್ಷೆ
ಸ್ಪೋಟದಲ್ಲಿ ಯಾರೂ ಗಾಯಗೊಂಡಿಲ್ಲ ಆದರೆ ಇಸ್ರೇಲಿ ರಾಯಭಾರಿಯನ್ನು ಉದ್ದೇಶಿಸಿ ನಿಂದನೀಯ ಪತ್ರವು ಸೈಟ್ ಬಳಿ ಕಂಡುಬಂದಿದೆ ಎಂದು ಅಕಾರಿಗಳು ತಿಳಿಸಿದ್ದಾರೆ. ಪತ್ರವು ನಿಂದನೀಯ ಸ್ವಭಾವವನ್ನು ಹೊಂದಿದೆ. ಬೆರಳಚ್ಚು ಪರೀಕ್ಷಿಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ಇದು ಇಂಗ್ಲಿಷ್‍ನಲ್ಲಿ ಬರೆಯಲಾದ ಒಂದು ಪುಟದ ಪತ್ರವಾಗಿದೆ. ಇದು ಸರ್ ಅಲ್ಲಾ ರೆಸಿಸ್ಟೆನ್ಸ್ ಹೆಸರಿನ ಕೆಲವು ಸಂಘಟನೆಗೆ ಸಂಬಂಧಿಸಿದೆ ಎಂದು ಶಂಕಿಸಲಾಗಿದೆ ಮತ್ತು ಪತ್ರದಲ್ಲಿ ಜಿಯೋನಿಸ್ಟ್‍ಗಳು, ಪ್ಯಾಲೆಸ್ಟೈನ್ ಮತ್ತು ಗಾಜಾ ಮುಂತಾದ ಪದಗಳನ್ನು ಉಲ್ಲೇಖಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ