Saturday, July 5, 2025
Homeಬೆಂಗಳೂರುಜು.7ರಿಂದ ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸೇವೆ, ಇಲ್ಲಿದೆ ಡೀಟೇಲ್ಸ್

ಜು.7ರಿಂದ ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸೇವೆ, ಇಲ್ಲಿದೆ ಡೀಟೇಲ್ಸ್

BMTC bus service on new routes from July 7, here are the details

ಬೆಂಗಳೂರು, ಜು.5– ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪ್ರಯಾಣಿಕರ ಅನುಕೂಲಕ್ಕಾಗಿ ಜು.7 ಸೋಮವಾರದಿಂದ ಹೊಸ ಮಾರ್ಗಗಳಲ್ಲಿ ಬಸ್ ಸೇವೆಗಳನ್ನು ಆರಂಭಿಸಲಿದೆ.

ಕೆಂಗೇರಿ ಟಿಟಿಎಂಸಿ ಬಸ್ ನಿಲ್ದಾಣದಿಂದ ಮಾಗಡಿ ಬಸ್ ನಿಲ್ದಾಣದವರೆಗೆ 221-ಕೆ ಮಾರ್ಗ ಸಂಖ್ಯೆಯ ಬಸ್ ಸೇವೆಯನ್ನು ಆರಂಭಿಸಲಿದೆ. ಈ ಬಸ್‌ಗಳು ಕೊಮ್ಮಘಟ್ಟ, ಸೂಲಿಕೆರೆ, ಗುಲಗಂಜನಹಳ್ಳಿ ಕ್ರಾಸ್, ತಾವರೆಕೆರೆ, ಚೋಳನಾಯಕನಹಳ್ಳಿ, ಶಾನು ಭೋಗನಹಳ್ಳಿ, ತಗಚಗುಪ್ಪೆ, ರಂಗನಾಥಪುರ ಮಾರ್ಗಗಳಲ್ಲಿ ಸಂಚರಿಸಲಿದೆ.

238-ವಿಬಿ ಮಾರ್ಗ ಸಂಖ್ಯೆಯ ಬಸ್ ಕೆಂಪೇಗೌಡ ಬಸ್ ನಿಲ್ದಾಣದಿಂದ ಉತ್ಕಾರ್ ನಿಲ್ದಾಣದವರೆಗೆ ಸಂಚರಿಸಲಿವೆ. ಈ ಬಸ್‌ಗಳು ಸುಜಾತ ಟಾಕೀಸ್, ವಿಜಯನಗರ, ಚಂದ್ರಾಲೇಔಟ್, ನಾಗರಭಾವಿ ವೃತ್ತ, ಐಟಿಐ ಲೇಔಟ್, ಮುದ್ದಯ್ಯನ ಪಾಳ್ಯ, ಆರ್‌ಟಿಓ ಆಫೀಸ್, ವಿಶ್ವೇಶ್ವರಯ್ಯ ಲೇ ಔಟ್, ಉಪ್ಯಾರ್ ಲೇಔಟ್‌ರೆಗೆ ಸಂಚರಿಸಲಿದೆ.

ಬೆಳಿಗ್ಗೆ 5.50ರಿಂದ ರಾತ್ರಿ 8 ಗಂಟೆಯವರೆಗೆ 221-ಕೆ ಮಾರ್ಗ ಸಂಖ್ಯೆಯ ಬಸ್‌ಗಳು ಸಂಚರಿಸಲಿವೆ. 238-ವಿಬಿ ಮಾರ್ಗ ಸಂಖ್ಯೆಯ ಬಸ್‌ಗಳು 5-55ರಿಂದ ರಾತ್ರಿ 10 ಗಂಟೆಯವರೆಗೆ ಸಂಚರಿಸಲಿವೆ.

RELATED ARTICLES

Latest News