Sunday, September 15, 2024
Homeರಾಜ್ಯಬಿಎಂಟಿಸಿ ನಿರ್ವಾಹಕ ಹುದ್ದೆಗಳ ಪರೀಕ್ಷಾ ಕೀ ಉತ್ತರ ಪ್ರಕಟ

ಬಿಎಂಟಿಸಿ ನಿರ್ವಾಹಕ ಹುದ್ದೆಗಳ ಪರೀಕ್ಷಾ ಕೀ ಉತ್ತರ ಪ್ರಕಟ

BMTC conductor Posts Exam Key Answer Publish

ಬೆಂಗಳೂರು. ಸೆ.4-ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿನ ನಿರ್ವಾಹಕ(ಆರ್‌ಪಿಸಿ) ಹುದ್ದೆಗಳ ನೇಮಕಾತಿಗೆ ಸೆ.1ರಂದು ನಡೆದ ಸ್ಪರ್ಧಾತಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಒಂದು ಮತ್ತು ಎರಡರ ಕೀ-ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ವೆಬ್‌ಸೈಟಿನಲ್ಲಿ ಪ್ರಕಟಿಸಿದೆ.

ಪ್ರಕಟಿಸಿರುವ ಕೀ-ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ನಾಳೆ ಸಂಜೆ 5.30 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಆಕ್ಷೇಪಣೆಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಪೋರ್ಟಲ್‌ ಮೂಲಕ ಸಲ್ಲಿಸಬೇಕು ಎಂದು ಕೆಇಎ ಪ್ರಕಟಣೆ ತಿಳಿಸಿದೆ.

ಪ್ರತಿ ಆಕ್ಷೇಪಣೆಗೆ 50 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಈ ಶುಲ್ಕವನ್ನು ಮರು ಪಾವತಿಸುವುದಿಲ್ಲ. ಆಕ್ಷೇಪಣೆ ಸಲ್ಲಿಸುವಾಗ ಪತ್ರಿಕೆಯ ವಿವರ, ಪರೀಕ್ಷಾ ದಿನಾಂಕ, ವರ್ಷನ್‌ ಕೋಡ್‌, ಪ್ರಶ್ನೆ ಸಂಖ್ಯೆಗಳ ವಿವರ ಹಾಗೂ ಪೂರಕ ದಾಖಲೆಗಳನ್ನು ಪಿಡಿಎಫ್‌ ರೂಪದಲ್ಲಿ ಸಲ್ಲಿಸಬೇಕು. ಆಕ್ಷೇಪಣೆಗೆ ಸಂಬಂಧಿಸಿದಂತೆ ವಿಷಯ ತಜ್ಞರ ಸಮಿತಿ ನಿರ್ಧರಿಸಿ ತೀರ್ಮಾನಿಸುವ ಕೀ-ಉತ್ತರವು ಅಂತಿಮವಾಗಿರುತ್ತದೆ ಎಂದು ಕೆಇಎ ಹೇಳಿದೆ.

RELATED ARTICLES

Latest News