Saturday, April 27, 2024
Homeಬೆಂಗಳೂರುಪ್ರಯಾಣಿಕರಿಂದ 7.37 ಲಕ್ಷ ರೂ. ದಂಡ ವಸೂಲಿ ಮಾಡಿದ ಬಿಎಂಟಿಸಿ

ಪ್ರಯಾಣಿಕರಿಂದ 7.37 ಲಕ್ಷ ರೂ. ದಂಡ ವಸೂಲಿ ಮಾಡಿದ ಬಿಎಂಟಿಸಿ

ಬೆಂಗಳೂರು,ಜ.17- ಮಹಿಳಾ ಪ್ರಯಾಣಿಕರಿಗೆ ಮೀಸಲಿಟ್ಟ ಆಸನಗಳಲ್ಲಿ ಕುಳಿತು ಪ್ರಯಾಣಿಸಿದ 347 ಪುರುಷರು ಸೇರಿದಂತೆ ಟಿಕೆಟ್ ಪಡೆಯದೆ ಪ್ರಯಾಣ ಮಾಡಿದ ಪ್ರಯಾಣಿಕರಿಂದ 7,37,040 ರೂ. ದಂಡವನ್ನು ಡಿಸೆಂಬರ್ ತಿಂಗಳಿನಲ್ಲಿ ಬಿಎಂಟಿಸಿ ವಸೂಲು ಮಾಡಿದೆ.

ಡಿಸೆಂಬರ್ ತಿಂಗಳಿನಲ್ಲಿ 3,849 ಪ್ರಯಾಣಿಕರಿಂದ ಈ ಪ್ರಮಾಣದ ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ. ಡಿಸೆಂಬರ್ ತಿಂಗಳಿನಲ್ಲಿ ಬಿಎಂಟಿಸಿಯ ತನಿಖಾ ತಂಡಗಳು 16,785 ಟ್ರಿಪ್‍ಗಳನ್ನು ತಪಾಸಣೆ ನಡೆಸಿ 3,502 ಟಿಕೆಟ್‍ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿದ್ದು, ಅವರಿಂದ 7,02,340 ರೂ. ದಂಡ ವಸೂಲು ಮಾಡಲಾಗಿದೆ. ಅಲ್ಲದೆ, ಬಿಎಂಟಿಸಿಯ ನಿರ್ವಾಹಕರ ವಿರುದ್ಧ 1,085 ಪ್ರಕರಣಗಳನ್ನು ದಾಖಲಿಸಲಾಗಿದೆ.

ಅಗಲಿದ ಪತ್ನಿಯನ್ನು ಸುಂದರ ಆತ್ಮಕ್ಕೆ ಹೊಲಿಸಿದ ತರೂರ್

ಮಹಿಳಾ ಪ್ರಯಾಣಿಕರಿಗೆ ಮೀಸಲಿಟ್ಟ ಆಸನಗಳಲ್ಲಿ ಕುಳಿತು ಪ್ರಯಾಣಿಸಿದ 347 ಪುರುಷ ಪ್ರಯಾಣಿಕರಿಗೆ 34,700 ರೂ. ದಂಡ ವಿಧಿಸಲಾಗಿದೆ ಎಂದು ಹೇಳಿದೆ. ಬಿಎಂಟಿಸಿ ಬಸ್‍ಗಳಲ್ಲಿ ಅಧಿಕೃತ ಟಿಕೆಟ್, ದಿನದ ಪಾಸ್, ಮಾಸಿಕ ಪಾಸ್‍ಗಳನ್ನು ಪಡೆದು ಪ್ರಯಾಣಿಸುವುದರಿಂದ ಅನಗತ್ಯವಾಗಿ ದಂಡ ಕಟ್ಟುವುದನ್ನು ತಪ್ಪಿಸಬಹುದಾಗಿದೆ. ಇದರಿಂದ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ. ಮಹಿಳಾ ಪ್ರಯಾಣಿಕರಿಗೆ ಮೀಸಲಿಟ್ಟ ಆಸನಗಳನ್ನು ಪುರುಷ ಪ್ರಯಾಣಿಕರು ಬಿಟ್ಟುಕೊಡಬೇಕೆಂದು ಬಿಎಂಟಿಸಿ ಕೋರಿದೆ.

RELATED ARTICLES

Latest News