ಥಾಣೆ, ಏ.22– ಮಹಾರಾಷ್ಟ್ರದ ಥಾಣೆ ನಗರದ ನುಲ್ಲಾ ಬಳಿ ಕೊಳಚೆ ನೀರಿನಲ್ಲಿ ಐದು ತಿಂಗಳ ಗಂಡು ಮಗುವ ಶವ ಪತ್ತೆಯಾಗಿದೆ. ಕಲ್ವಾ ವಾಫೋಬಾ ನಗರ ಪ್ರದೇಶದಲ್ಲಿ ತ್ಯಾಜ್ಯ ನೀರನ್ನು ಸಾಗಿಸುತ್ತಿದ್ದನುಲ್ಲಾ ಬಳಿ ಶಿಶುವಿನ ಶವವನ್ನು ದಾರಿಹೋಕರು ನೋಡಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಮತ್ತು ತನಿಖೆ ಆರಂಭಿಸಲಾಗಿದೆ ಎಂದು ಅವರು ಹೇಳಿದರು. ಮೃತ ದೇಹವನ್ನು ರಹಸ್ಯವಾಗಿ ವಿಲೇವಾರಿ ಮಾಡುವ ಮೂಲಕ ಜನನವನ್ನು ಮರೆಮಾಚುವುದು ಅಡಿಯಲ್ಲಿ ಪೊಲೀಸರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.