Monday, May 19, 2025
Homeರಾಷ್ಟ್ರೀಯ | Nationalವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದ ಬಾಂಬ್‌‍ ಎಂದು ಬರೆದ ಟಿಶ್ಯೂ ಪೇಪರ್‌

ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದ ಬಾಂಬ್‌‍ ಎಂದು ಬರೆದ ಟಿಶ್ಯೂ ಪೇಪರ್‌

ನವದೆಹಲಿ, ಮೇ 16 (ಪಿಟಿಐ) ಇಲ್ಲಿನ ಐಜಿಐ ವಿಮಾನ ನಿಲ್ದಾಣದಲ್ಲಿ ದೆಹಲಿ-ವಡೋದರಾ ಏರ್‌ ಇಂಡಿಯಾ ವಿಮಾನದ ವಾಶ್‌ರೂಮ್‌ನಲ್ಲಿ ಸಿಬ್ಬಂದಿಯೊಬ್ಬರು ಬಾಂಬ್‌‍ ಎಂದು ಬರೆದಿರುವ ಟಿಶ್ಯೂ ಪೇಪರ್‌ ಕಂಡ ನಂತರ ಆತಂಕ ಎದುರಾಗಿತ್ತು.

ತಕ್ಷಣ ವಿಮಾನವನ್ನು ಹುಡುಕಲಾಯಿತು ಆದರೆ ಅನುಮಾನಾಸ್ಪದ ವಸ್ತು ಯಾವುದು ಕಂಡುಬಂದಿಲ್ಲ ಎಂದು ತಿಳಿದ ನಂತರ ನೆಮದಿಯ ನಿಟ್ಟುಸಿರು ಬಿಡುವಂತಾಗಿದೆ. ಸಂಜೆ 7 ಗಂಟೆಗೆ ಟಿಶ್ಯೂ ಪೇಪರ್‌ ಅನ್ನು ಸಿಬ್ಬಂದಿ ಗುರುತಿಸಿದಾಗ ವಿಮಾನವು ಟೇಕ್‌-ಆಫ್‌ಗೆ ಸಿದ್ಧವಾಗಿತ್ತು ಎಂದು ತಿಳಿದುಬಂದಿದೆ.

ಸೆಂಟ್ರಲ್‌ ಇಂಡಸ್ಟ್ರಿಯಲ್‌ ಸೆಕ್ಯುರಿಟಿ ಫೋರ್ಸ್‌ ಮತ್ತು ದೆಹಲಿ ಪೊಲೀಸರಿಗೆ ಮಾಹಿತಿ ನೀಡಲಾಯಿತು ಮತ್ತು ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ ವಿಮಾನವನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ ಆದರೆ ಏನೂ ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಯಾಣಿಕರು ನಂತರ ಮತ್ತೊಂದು ವಿಮಾನದಲ್ಲಿ ತಮ ಗಮ್ಯಸ್ಥಾನಕ್ಕೆ ತೆರಳಿದರು.

RELATED ARTICLES

Latest News