ಮೈಸೂರು,ಡಿ.28- ನಗರದ ಮೂರು ವಿದ್ಯಾಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಮೈಸೂರಿನ ಜಯಲಕ್ಷಿಪುರಂನಲ್ಲಿರುವ ವಿದ್ಯಾಶ್ರಮ, ಮೇಟಗಳ್ಳಿಯಲ್ಲಿರುವ ಫ್ಯೂಚರ್ ಫೌಂಡೇಶನ್ ಕಾಲೇಜು ಹಾಗೂ ಮೈಕಾ ಶಾಲೆಗೆ ವಾಟ್ಸಾಪ್ ಮೂಲಕ ಸಂದೇಶ ಬಂದಿದೆ.
ಹಾಗೆಯೇ ವಿದ್ಯಾಶ್ರಮಕ್ಕೆ ಫೋನ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ.
ಸುದ್ದಿ ತಿಳಿದು ಕೂಡಲೇ ಪೊಲೀಸರು, ಬೆರಳಚ್ಚು ತಜ್ಞರು, ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಭೇಟಿ ನೀಡಿ ಕೂಲಂಕುಷ ಪರಿಶೀಲನೆ ನಡೆಸಿದಾಗ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ಇದು ಹುಸಿ ಬೆದರಿಕೆ ಸಂದೇಶ ಎಂದು ಖಚಿತವಾಗಿದೆ.
ಕೆಲವು ದಿನಗಳ ಹಿಂದೆ ಬೆಂಗಳೂರಿನ ಕೆಲವು ಶಾಲೆಗಳಿಗೆ ಇದೇ ರೀತಿ ಕರೆ ಬಂದಿದ್ದು ಆತಂಕ ಸೃಷ್ಟಿಸಿತ್ತು.ಇದೀಗ ಮೈಸೂರಿನ ಶಾಲೆಗಳಿಗೂ ಇಂತಹ ಬೆದರಿಕೆಗಳು ಬಂದಿರುವುದು ಆತಂಕದ ವಿಚಾರವಾಗಿದೆ. ಇಂತಹ ಆತಂಕ ಸೃಷ್ಟಿಸುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕಿದೆ.