Thursday, September 19, 2024
Homeಬೆಂಗಳೂರುಬೆಂಗಳೂರಲ್ಲಿ ಶುರುವಾಗಿದೆ ಬೋರ್‌ವೆಲ್ ಮಾಫಿಯಾ

ಬೆಂಗಳೂರಲ್ಲಿ ಶುರುವಾಗಿದೆ ಬೋರ್‌ವೆಲ್ ಮಾಫಿಯಾ

ಬೆಂಗಳೂರು,ಮಾ.12- ಕುಡಿಯುವ ನೀರಿನ ಟ್ಯಾಂಕರ್ ಮಾಫಿಯಾಗೆ ಕಡಿವಾಣ ಬೀಳುತ್ತಿದ್ದಂತೆ ಇದೀಗ ಬೋರ್ವೆಲ್ ಮಾಫಿಯಾ ಶುರುವಾಗಿದೆ. ನೀರಿನ ಅಭಾವನ್ನೇ ಬಂಡವಾಳ ಮಾಡಿಕೊಂಡ ಬೋರ್ ವೆಲ್ ಲಾರಿ ಮಾಲೀಕರು ಸಾರ್ವಜನಿಕರ ಬಳಿ ಹಣ ಸುಲಿಗೆಗೆ ಇಳಿದಿದ್ದಾರೆ ಅದೇಗೆ ಅಂತೀರಾ ಹಾಗಾದರೆ ಈ ಸ್ಟೋರಿ ಓದಿ…. ಕೇವಲ ಒಂದು ತಿಂಗಳ ಹಿಂದೆ ಇದ್ದ ಬೋರ್ವೇಲ್ ಕೊರೆಸುವ ದರ ಇದೀಗ ದಿಢೀರ್ ದುಪ್ಪಟ್ಟಾಗಿದೆ. ಅಡಿಗೆ ಕೇವಲ 70 ರೂ. ಇದ್ದ ಬೆಲೆ ಈಗ 140 ರೂ.ಗಳಿಗೆ ಏರಿಕೆ ಮಾಡಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಅಭಾವ ಹೆಚ್ಚಾಗ್ತಿದ್ದಂಗೆ ಟ್ಯಾಂಕರ್ ಮಾಲೀಕರು ಅದನ್ನೇ ಬಂಡವಾಳ ಮಾಡಿಕೊಂಡು ಮನಸ್ಸೋಇಚ್ಚೆ ಹಣ ವಸೂಲಿ ಮಾಡಲು ಮುಂದಾಗಿದ್ದರು. ತಕ್ಷಣ ಎಚ್ಚೆತ್ತುಕೊಂಡ ಸರ್ಕಾರ ಟ್ಯಾಂಕರ್ ನೀರಿಗೆ ಬೆಲೆ ನಿಗದಿ ಮಾಡಿ ಅದೇಶ ಹೊರಡಿಸಿ ಟ್ಯಾಂಕರ್ ಮಾಫಿಯಾ ಗೆ ಬ್ರೇಕ್ ಹಾಕಿತ್ತು.

ಸದ್ಯ ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕ್ತಿದಂಗೆ ಇತ್ತ ಬೋರ್ ವೆಲ್ ಗಾಡಿ ಮಾಲೀಕರ ಮಾಫಿಯಾ ಶುರುವಾಗಿದೆ. ನಗರದಲ್ಲಿ ನೀರಿನ ಅಭಾವನ್ನೇ ಬಂಡವಾಳ ಮಾಡಿಕೊಂಡು ಬೋರ್ ವೆಲ್ ಗಾಡಿ ಮಾಲೀಕರು ಏಕಾಏಕಿ ದರ ಏರಿಕೆ ಮಾಡಿ ಮನೆ ಮಾಲೀಕರ ಬಳಿ ಹಣ ಸುಲಿಗೆ ಮಾಡ್ತಿದ್ದಾರೆ.

ಇನ್ನೂ ನಗರದಲ್ಲಿರೋ ಶೇ. 90 ರಷ್ಟು ಬೋರ್ ವೆಲ್ ಗಳು ಹೊರ ರಾಜ್ಯದ್ದು. ಹೊರ ರಾಜ್ಯದ ಬೋರ್ ವೆಲ್ ಮಾಲೀಕರು ನಗರದ ನೀರಿನ ಸಮಸ್ಯೆಯನ್ನೆ ಬಂಡವಾಳ ಮಾಡಿಕೊಂಡು ದರ ಹೆಚ್ಚಳ ಮಾಡಿದ್ದಾರೆ. ಇನ್ನೂ ಕಳೆದ ಒಂದು ತಿಂಗಳ ಹಿಂದೆ ಬೋರ್ ವೆಲ್ ಕೊರೆಸಬೇಕದ್ರೆ ಅಡಿಗೆ 70-75 ರೂ ಇತ್ತು. ಈಗ ಒಂದು ಅಡಿಗೆ 140-145 ರೂ ದರ ನಿಗದಿ ಮಾಡಿದ್ದಾರೆ. ಇನ್ನೂ ಬೋರ್ ವೆಲ್ ಕೊರೆಸೋದಕ್ಕೆ ಪೊನ್ ಮಾಡಿದರೆ ಒಂದು ಅಥವಾ ಎರಡು ವಾರ ಅಂತ ಟೈಮ್ ತಗೋತರೆ. ಈಗ್ಲೆ ಬೇಕು ಅಂತ ಕೇಳುದ್ರೆ 160-170 ಅಡಿಗೆ ಡಿಮಾಂಡ್ ಮಾಡ್ತಿದ್ದಾರೆ ಅಂತ ಜನ ಅರೋಪ ಮಾಡ್ತಿದ್ದಾರೆ.

ಸಾರ್ವಜನಿಕರ ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಜಲ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು ಶೀಘ್ರದಲ್ಲೇ ಟ್ಯಾಂಕರ್ಗೆ ನಿಗದಿಪಡಿಸಿದ್ದಂತೆ ಬೋರ್ವೇಲ್ ಕೊರೆಸಲು ದರ ನಿಗದಿ ಪಡಿಸುವುದಾಗಿ ಭರವಸೆ ನೀಡಿದ್ದಾರೆ.

RELATED ARTICLES

Latest News