ಬೆಂಗಳೂರು, ಜ. 10- ಗೋವಾ ಹೋಟೆಲ್ನಲ್ಲಿ ತಾಯಿಯಿಂದಲೇ ಹತ್ಯೆಯಾಗಿದ್ದ 4 ವರ್ಷದ ಮಗುವಿನ ಮೃತದೇಹವನ್ನು ಚಿತ್ರದುರ್ಗದಿಂದ ನಗರಕ್ಕೆ ತರಲಾಗಿದ್ದು, ಶ್ರೀರಾಂಪುರದ ಹರಿಶ್ಚಂದ್ರ ಘಾಟ್ನಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಇಂಡೋನೇಷ್ಯಾದಲ್ಲಿ ನೆಲೆಸಿರುವ ಕೇರಳ ಮೂಲದ ವೆಂಕಟರಾಮನ್ ಅವರು ತಡರಾತ್ರಿ ಚಿತ್ರದುರ್ಗದ ಹಿರಿಯೂರಿಗೆ ಆಗಮಿಸಿ ಮರಣೋತ್ತರ ಪರೀಕ್ಷೆಯ ನಂತರ ಮಗನ ಮೃತದೇಹವನ್ನು ಪಡೆದುಕೊಂಡು ನಗರಕ್ಕೆ ವಾಪಸ್ಸಾಗಿದ್ದರು.
ಮಹಿಳಾ ಉದ್ಯಮಿ ಸುಚನಾ ಸೇಠ್ ವಾಸವಾಗಿದ್ದ ಸುಬ್ರಹ್ಮಣ್ಯನಗರದ ಬ್ರಿಗೇಡ್ಗೇಟ್ ಅಪಾರ್ಟ್ಮೆಂಟ್ಗೆ ತಂದಿದ್ದು, ಅಲ್ಲಿ ಪ್ರಾಥಮಿಕ ವಿವಿಧಾನಗಳು ನಡೆದ ನಂತರ ಹರಿಶ್ಚಂದ್ರಘಾಟ್ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್ಅಪ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಚನಾ ಸೇಠ್ ಅವರು ಸೋಮವಾರ ರಾತ್ರಿ ಗೋವಾದ ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಮೃತದೇಹವನ್ನು ಸೂಟ್ಕೇಸ್ನಲ್ಲಿ ಹಾಕಿಕೊಂಡು ಟ್ಯಾಕ್ಸಿಯಲ್ಲಿ ಬೆಂಗಳೂರಿಗೆ ಬರುತ್ತಿದ್ದರು.
ಮಾರ್ಗಮಧ್ಯೆ ಚಿತ್ರದುರ್ಗದ ಐಮಂಗಲ ಠಾಣೆ ಪೊಲೀಸರು ಮಹಿಳಾ ಉದ್ಯಮಿಯನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಸೂಟ್ಕೇಸ್ನಲ್ಲಿ ಅವರ ಮಗನ ಮೃತದೇಹ ಪತ್ತೆಯಾಗಿತ್ತು. ನಂತರ ಗೋವಾ ಪೊಲೀಸರಿಗೆ ಮಹಿಳೆಯನ್ನು ಹಸ್ತಾಂತರಿಸಿದ್ದಾರೆ. ಮಗುವಿನ ದೇಹದ ಮೇಲೆ ಯಾವುದೇ ರಕ್ತ ಸೋರಿಕೆಯಾಗಲೀ ಅಥವಾ ಹೋರಾಟ ನಡೆಸಿರುವ ಗುರುತುಗಳಿರಲಿಲ್ಲ ಎಂದು ಚಿತ್ರದುರ್ಗದ ವೈದ್ಯ ಡಾ. ನಾಯಕ್ ಮಾಹಿತಿ ನೀಡಿದ್ದಾರೆ.
ಸೇಠ್ ಅವರು ದಿ ಮೈಂಡ್ಫುಲ್ ಎಐ ಲ್ಯಾಬïನ ಸಿಇಒ ಆಗಿದ್ದಾರೆ ಮತ್ತು ಅವರ ಲಿಂಕ್ಡ್ಇನ್ ಪೊ್ರಫೈಲ್ನ ಪ್ರಕಾರ, ಅವರು ಎಐ ನೀತಿಶಾಸ್ತ್ರ ತಜ್ಞ ಮತ್ತು ಡೇಟಾ ವಿಜ್ಞಾನಿಯಾಗಿದ್ದು, ಡೇಟಾ ಸೈನ್ಸ್ ತಂಡಗಳಿಗೆ ಮಾರ್ಗದರ್ಶನ ನೀಡುವಲ್ಲಿ ಮತ್ತು ಸ್ಟಾರ್ಟ್ಅಪ್ಗಳು ಮತ್ತು ಉದ್ಯಮ ಸಂಶೋಧನೆಗಳಲ್ಲಿ ಯಂತ್ರ ಕಲಿಕೆಯ ಪರಿಹಾರಗಳನ್ನು ಸ್ಕೇಲಿಂಗ್ ಮಾಡುವಲ್ಲಿ 12 ವರ್ಷಗಳ ಅನುಭವವನ್ನು ಹೊಂದಿದ್ದಾರೆ.
ಅವರು ಕೃತಕ ಬುದ್ಧಿಮತ್ತೆ ಎಥಿಕ್ಸ್ ಪಟ್ಟಿಯಲ್ಲಿ 100 ಬ್ರಿಲಿಯಂಟ್ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ಅವರು ಡೇಟಾ ಸೊಸೈಟಿಯಲ್ಲಿ ಮೊಜಿಲ್ಲಾ ಫೆಲೋ ಆಗಿದ್ದಾರೆ, ಹಾರ್ವರ್ಡ್ ವಿಶ್ವವಿದ್ಯಾಲಯದ ಬರ್ಕ್ಮನ್ ಕ್ಲೈನ್ ಸೆಂಟರ್ನಲ್ಲಿ ಫೆಲೋ ಆಗಿದ್ದಾರೆ ಮತ್ತು ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಸಂಶೋಧನಾ ಸಹವರ್ತಿಯಾಗಿದ್ದಾರೆ. ಅವರು ಸಹಜ ಭಾಷಾ ಸಂಸ್ಕರಣೆಯಲ್ಲಿ ಪೇಟೆಂಟ್ಗಳನ್ನು ಹೊಂದಿದ್ದಾರೆ ಎಂದು ಅವರ ಪೊ್ರಫೈಲ್ ತಿಳಿಸಿದೆ. ಸೇಠ್ ಅವರು ಎಐ ಎಥಿಕ್ಸ್ ಅಡ್ವೈಸರಿ ಆಡಿಟ್ಸ್ ಮತ್ತು ಜವಾಬ್ದಾರಿಯುತ ಎಐ ಸ್ಟ್ರಾಟಜಿಯಲ್ಲಿ ಪರಿಣತರಾಗಿದ್ದಾರೆ.
ಕೋಲ್ಕತ್ತಾ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವೀಧರರು ಮತ್ತು ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ನಿಂದ ಸಂಶೋಧನಾ ಸಹೋದ್ಯೋಗಿ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಇಂಟರ್ನೆಟ್ ಮತ್ತು ಸೊಸೈಟಿಗಾಗಿ ಬರ್ಕ್ಮನ್ ಕ್ಲೈನ್ ಸೆಂಟರ್ನಲ್ಲಿ ಎರಡು ವರ್ಷಗಳನ್ನು ಕಳೆದಿದ್ದರು ಎಂದು ತಿಳಿದುಬಂದಿದೆ. ಒಟ್ಟಾರೆ ಈ ಪ್ರಕರಣದಲ್ಲಿ ಪತಿ ಮೇಲಿನ ಕೋಪಕ್ಕೆ ತನ್ನ ಮುದ್ದಾದ ಮಗುವನ್ನು ಕೊಲೆ ಮಾಡಿರುವುದು ಎಷ್ಟು ಸರಿ ಎಂಬುವುದು ನಾಗರಿಕರ ಪ್ರಶ್ನೆಯಾಗಿದೆ.