Wednesday, January 8, 2025
Homeರಾಷ್ಟ್ರೀಯ | Nationalಬಿಪಿಎಸ್‌‍ಸಿ ಪರೀಕ್ಷೆ ರದ್ದತಿಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್‌ ಕಿಶೋರ್‌ ಬಂಧನ

ಬಿಪಿಎಸ್‌‍ಸಿ ಪರೀಕ್ಷೆ ರದ್ದತಿಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್‌ ಕಿಶೋರ್‌ ಬಂಧನ

BPSC Exam row: Prashant Kishor, who was sitting on indefinite hunger strike, arrested

ಪಾಟ್ನಾ, ಜ 6 (ಪಿಟಿಐ) ಬಿಹಾರ ಪಿಎಸ್‌‍ಸಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಇಲ್ಲಿನ ಗಾಂಧಿ ಮೈದಾನದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಜನ್‌ ಸೂರಾಜ್‌ ಸಂಸ್ಥಾಪಕ ಪ್ರಶಾಂತ್‌ ಕಿಶೋರ್‌ ಅವರನ್ನು ಇಂದು ಮುಂಜಾನೆ ಬಂಧಿಸಲಾಗಿದೆ.

ಪೊಲೀಸ್‌‍ ಸಿಬ್ಬಂದಿ ಅವರನ್ನು ಮತ್ತು ಅವರ ಬೆಂಬಲಿಗರನ್ನು ಪ್ರತಿಭಟನಾ ಸ್ಥಳದಿಂದ ವೈದ್ಯಕೀಯ ಪರೀಕ್ಷೆಗಾಗಿ ಪಾಟ್ನಾ ಏಮ್ಸೌಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ.
ಮಾಧ್ಯಮದ ಜೊತೆ ಮಾತನಾಡಿದ ಪಾಟ್ನಾ, ಜಿಲ್ಲಾ ಮ್ಯಾಜಿಸ್ಟ್ರೇಟ್‌ (ಡಿಎಂ), ಚಂದ್ರಶೇಖರ್‌ ಸಿಂಗ್‌, ಗಾಂಧಿ ಮೈದಾನದಲ್ಲಿ ಧರಣಿ ಕುಳಿತಿದ್ದ ಕಿಶೋರ್‌ ಮತ್ತು ಅವರ ಬೆಂಬಲಿಗರನ್ನು ಇಂದು ಬೆಳಿಗ್ಗೆ ಪೊಲೀಸರು ಬಂಧಿಸಿದ್ದಾರೆ.

ಈಗ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಅವರ ಧರಣಿ ಕಾನೂನುಬಾಹಿರ ಎಂದು ಅವರು ಹೇಳಿದರು. ಕಳೆದ ವರ್ಷ ಡಿ.13 ರಂದು ನಡೆದ ಬಿಹಾರ ಪಬ್ಲಿಕ್‌ ಸರ್ವಿಸ್‌‍ ಕಮಿಷನ್‌ (ಬಿಪಿಎಸ್‌‍ಸಿ) ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸುತ್ತಿರುವ ನಾಗರಿಕ ಸೇವಾ ಆಕಾಂಕ್ಷಿಗಳಿಗೆ ಬೆಂಬಲವಾಗಿ ಕಿಶೋರ್‌ ಜ.2 ರಂದು ಆಮರಣಾಂತ ಉಪವಾಸವನ್ನು ಪ್ರಾರಂಭಿಸಿದರು.

ಆದರೆ, ಡಿಸೆಂಬರ್‌ 13ರಂದು ನಡೆದ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದಲ್ಲಿ ಸಿಲುಕಿದ್ದ ಆಯ್ದ ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸುವಂತೆ ಬಿಪಿಎಸ್‌‍ಸಿ ಆದೇಶಿಸಿತ್ತು.ಅದರಂತೆ 22 ಕೇಂದ್ರಗಳಲ್ಲಿ ಶನಿವಾರ ಮರುಪರೀಕ್ಷೆ ನಡೆಯಿತು.

12,012 ಅಭ್ಯರ್ಥಿಗಳಲ್ಲಿ, ಸುಮಾರು 8,111 ಆಕಾಂಕ್ಷಿಗಳು ಮರು ಪರೀಕ್ಷೆಗಾಗಿ ತಮ ಪ್ರವೇಶ ಕಾರ್ಡ್‌ಗಳನ್ನು ಡೌನ್‌ಲೋಡ್‌‍ ಮಾಡಿಕೊಂಡಿದ್ದಾರೆ. ಆದರೆ, ಜನವರಿ 4ರಂದು ನಡೆದ ಮರುಪರೀಕ್ಷೆಗೆ 5,943 ಅಭ್ಯರ್ಥಿಗಳು ಹಾಜರಾಗಿದ್ದರು. ಮರುಪರೀಕ್ಷೆಯು ಯಾವುದೇ ಅವ್ಯವಹಾರ ವರದಿಯಿಲ್ಲದೆ ಎಲ್ಲಾ ಕೇಂದ್ರಗಳಲ್ಲಿ ಶಾಂತಿಯುತವಾಗಿ ನಡೆಯಿತು ಎಂದು ಬಿಪಿಎಸ್‌‍ಸಿ ತಿಳಿಸಿದೆ.

RELATED ARTICLES

Latest News