Tuesday, July 1, 2025
Homeರಾಷ್ಟ್ರೀಯ | Nationalಬಿಎಸ್‌‍ಎಫ್‌ ಯೋಧನ ಪತ್ನಿ ಮೇಲೆ ಅತ್ಯಾಚಾರ

ಬಿಎಸ್‌‍ಎಫ್‌ ಯೋಧನ ಪತ್ನಿ ಮೇಲೆ ಅತ್ಯಾಚಾರ

BSF jawan's wife raped

ಪಿಲಿಭಿತ್‌,ಜು.1-ಬಿಎಸ್‌‍ಎಫ್‌ ಯೀಧನ ಪತ್ನಿಯ ಮೇಲೆ ಸಂಬಂಧಿಗಳೇ ಹಲವು ಬಾರಿ ಅತ್ಯಾಚಾರ ಎಸಗಿ, ಅಶ್ಲೀಲ ವೀಡಿಯೊಗಳನ್ನು ಬಳಸಿ ಬ್ಲಾಕ್‌ಮೇಲ್‌‍ ಮಾಡಿರುವ ಘಟನೆ ಉತ್ತರ ಪ್ರದೇಶ ಪಿಲಿಭಿತ್‌ ಜಿಲ್ಲೆಯಲ್ಲಿ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರ ಸಂತ್ರಸ್ತೆಯ ಅಳಿಯಂದಿರು ಸೇರಿದಂತೆ ಏಳು ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಸೋದರ ಮಾವಂದಿರಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ವಿವಾಹಿತಳಾದ ನಂತರ, ತನ್ನ ಅತ್ತೆಯೊಂದಿಗೆ ತನ್ನ ಗ್ರಾಮದ ಹೊರಗೆ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದಳು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆಕೆಯ ಪತಿ ಬಿಎಸ್‌‍ಎಫ್‌ಯೋಧರಾಗಿದ್ದು ಆಗಾಗ್ಗೆ ಕರ್ತವ್ಯದಿಂದ ಬೇರೆ ಕಡೆ ಇರುತ್ತಿದ್ದರು.

ಈ ವೇಳೆ ಇಬ್ಬರೂ ಅಳಿಯಂದಿರು ಆಕೆಯ ಮನೆಗೆ ನುಗ್ಗಿ ಅತ್ಯಾಚಾರ ಮಾಡುತ್ತಿದ್ದರು ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿತಿಳಿಸಿದ್ದಾರೆ. ಅವರು ಕೃತ್ಯದ ವೀಡಿಯೊಗಳನ್ನು ಚಿತ್ರೀಕರಿಸಿ, ಆಕೆಯನ್ನು ಬ್ಲಾಕ್‌ಮೇಲ್‌‍ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಪತಿ ರಜೆಯ ಮೇಲೆ ಮನೆಗೆ ಬಂದಾಗ, ವೀಡಿಯೊ ಗಳನ್ನು ತೋರಿಸಿದರು ಈ ವೇಳೆ ತನ್ನ ಅತ್ತೆ ಮಾವಂದಿರು ತನ್ನನ್ನು ಮತ್ತು ತನ್ನ ಪತಿಯನ್ನು ಹೊಡೆದಿದ್ದಾರೆ ತನ್ನನ್ನು ಕತ್ತು ಹಿಸುಕಿ ಕೊಲ್ಲಲು ಸಹ ಪ್ರಯತ್ನಿಸಿದರು ಎಂದು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಸಂತ್ರಸ್ತೆಯ ದೂರಿನ ಮೇರೆಗೆ, ಅತ್ತೆ ಮತ್ತು ಮಾವ ಸೇರಿದಂತೆ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಹಾನಾಬಾದ್‌ ಪೊಲೀಸ್‌‍ ಠಾಣೆಯ ಉಸ್ತುವಾರಿ ಮನೋಜ್‌ ಕುಮಾರ್‌ ಮಿಶ್ರಾ ತಿಳಿಸಿದ್ದಾರೆ.ಆರೋಪಿಗಳಲ್ಲಿ ಒಬ್ಬ ಸೋದರ ಮಾವ ಹರಿಯೋಮ್‌ನನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳು ಪರಾರಿಯಾಗಿದ್ದು ಅವರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

RELATED ARTICLES

Latest News