Sunday, April 28, 2024
Homeರಾಷ್ಟ್ರೀಯ2024-25ನೇ ಸಾಲಿನ ಕೇಂದ್ರ ಬಜೆಟ್‌ನ ಮುಖ್ಯಾಂಶಗಳು

2024-25ನೇ ಸಾಲಿನ ಕೇಂದ್ರ ಬಜೆಟ್‌ನ ಮುಖ್ಯಾಂಶಗಳು

* ಭಾರತವು ಕೋವಿಡ್ -19 ರ ಸವಾಲುಗಳನ್ನು ಜಯಿಸಿದೆ,
* ಸ್ವಾವಲಂಬಿ ಭಾರತಕ್ಕಾಗಿ ಅಡಿಪಾಯ ಹಾಕಲಾಗಿದೆ.
* 80 ಕೋಟಿ ಜನರಿಗೆ ಉಚಿತ ಪಡಿತರ ನೀಡಿಕೆ

* ಆದಾಯ ತೆರಿಗೆ ಸೇರಿದಂತೆ ತೆರಿಗೆ ಪದ್ಧತಿಗಳಲ್ಲಿ ಬದಲಾವಣೆ ಇಲ್ಲ
* ಅನ್ನದಾತರಿಗೆ ಕನಿಷ್ಠ ಬೆಂಬಲ ಬೆಲೆಗಳ ಹೆಚ್ಚಳ ಮಾಡಲಾಗಿದೆ.
* 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಶ್ರಮ
* ಬಡವರು, ಮಹಿಳೆಯರು, ಯುವಕರು ಮತ್ತು ರೈತರೇ ನಮ್ಮ ನಾಲ್ಕು ಜಾತಿಗಳು

* 2030ರ ವೇಳೆಗೆ 100 ಮೆಟ್ರಿಕ್ ಟನ್ ಕಲ್ಲಿದ್ದಲು ಅನಿಲೀಕರಣ
* ವಿಕಸಿತ ಭಾರತ ನಿರ್ಮಿಸುವತ್ತ ಗಮನ ಹರಿಸಿದ್ದೇವೆ : ನಿರ್ಮಲಾ


* ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರು ಬಹು ಆಯಾಮದ ಬಡತನದಿಂದ ಮುಕ್ತಿ ಪಡೆದಿದ್ದಾರೆ
* ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ 11.8 ಕೋಟಿ ರೈತರು ಆರ್ಥಿಕ ನೆರವು ನೀಡಲಾಗಿದೆ.

* 11.8 ಕೋಟಿ ರೈತರಿಗೆ ಪಿಎಂ ಕಿಸಾನ್ ಯೋಜನೆ ನೆರವು

* ಎಲ್ಲ ಅರ್ಹ ಜನರನ್ನು ಒಳಗೊಳ್ಳುವ ಶುದ್ಧತ್ವ ವಿಧಾನವು ಸಾಮಾಜಿಕ ನ್ಯಾಯದ ನಿಜವಾದ ಮತ್ತು ಸಮಗ್ರ ಸಾಧನೆಯಾಗಿದೆ
* ಪ್ರಧಾನಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ, 43 ಕೋಟಿ ಸಾಲವನ್ನು ಒಟ್ಟು 22.5 ಲಕ್ಷ ಕೋಟಿ ರೂ.ಗೆ ವಿಸ್ತರಿಸಲಾಗಿದೆ

* ಬಜೆಟ್‍ನಲ್ಲಿ ಬಡವರು, ಮಹಿಳೆಯರು, ಯುವಕರು ಹಾಗೂ ಅನ್ನದಾತ ಆದ್ಯತೆ
* 40 ಸಾವಿರ ಸಾಮಾನ್ಯ ರೈಲು ಬೋಗಿಗಳನ್ನು ವಂದೇ ಭಾರತ್ ಮಾನದಂಡಕ್ಕೆ ಪರಿವರ್ತನೆ


* ಜನ್ ಧನ್ ಖಾತೆಗಳ ಮೂಲಕ 34 ಲಕ್ಷ ಕೋಟಿ ನೇರ ಲಾಭ ವರ್ಗಾವಣೆಯಿಂದ 2.7 ಲಕ್ಷ ಕೋಟಿ ಉಳಿತಾಯವಾಗಿದೆ
* 10 ವರ್ಷಗಳಲ್ಲಿ ಮಹಿಳೆಯರಿಗೆ 30 ಕೋಟಿ ಮುದ್ರಾ ಯೋಜನೆ ಸಾಲ ನೀಡಲಾಗಿದೆ

* 25 ಕೋಟಿಗೂ ಹೆಚ್ಚು ಜನ ಬಡತನದಿಂದ ಹೊರಬಂದಿದ್ದಾರೆ : ನಿರ್ಮಲಾ
* ಬಜೆಟ್‍ನಲ್ಲಿ ನಾರಿಶಕ್ತಿಗೆ ಹೆಚ್ಚಿನ ಒತ್ತು


* ಸ್ಕಿಲ್ ಇಂಡಿಯಾ ಮಿಷನ್ ದೇಶದಲ್ಲಿ 1.4 ಕೋಟಿ ಯುವಕರಿಗೆ ತರಬೇತಿ ಮತ್ತು ಕೌಶಲ್ಯ ನೀಡಲಾಗಿದೆ
* ತ್ರಿವಳಿ ತಲಾಖ್‍ಗೆ ಕೊಕ್ ನೀಡಲಾಗಿದೆ.
* ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಶಾಸಕಾಂಗ ಸ್ಥಾನಗಳನ್ನು ಮೀಸಲಿಡಲಾಗಿದೆ.
* ಹಣದುಬ್ಬರ ಕಡಿಮೆಯಾಗಿದೆ

* ಮಾಲ್ಡೀವ್ಸ್ ಗೆ ತಿರುಗೇಟು : ಬಜೆಟ್‍ನಲ್ಲಿ ಲಕ್ಷದ್ವೀಪ ಅಭಿವೃದ್ಧಿ ಘೋಷಣೆ

* ಮುಂದಿನ 5 ವರ್ಷಗಳಲ್ಲಿ 2 ಕೋಟಿ ಮನೆ ನಿರ್ಮಾಣ

* ಅಶಾ, ಅಂಗನವಾಡಿ ಕಾರ್ಯಕರ್ತೆಯರಿಗೂ ಆಯುಷ್ಮಾನ್ ಕಾರ್ಡ್

* ಹೆಚ್ಚಿನ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ನಿರ್ಧಾರ
* ನಮ್ಮ ಸರ್ಕಾರಕ್ಕೆ ಸಾಮಾಜಿಕ ನ್ಯಾಯ ಪರಿಣಾಮಕಾರಿ ಮತ್ತು ಅಗತ್ಯ ಮಾದರಿ
* ನಾವು ಫಲಿತಾಂಶಗಳ ಮೇಲೆ ಕೇಂದ್ರೀಕರಿಸುತ್ತೇವೆ ಹೊರತು ವೆಚ್ಚಗಳಲ್ಲ

RELATED ARTICLES

Latest News