Friday, November 22, 2024
Homeಇದೀಗ ಬಂದ ಸುದ್ದಿಸಿಬಿಐಗೆ 928 ಕೋಟಿ ನಿಗದಿ

ಸಿಬಿಐಗೆ 928 ಕೋಟಿ ನಿಗದಿ

ನವದೆಹಲಿ, ಫೆ 1 (ಪಿಟಿಐ) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಕೇಂದ್ರ ಬಜೆಟ್ 2024-25 ರಲ್ಲಿ ಕೇಂದ್ರ ತನಿಖಾ ದಳಕ್ಕೆ ಕೇಂದ್ರವು 928.46 ಕೋಟಿ ರೂಪಾಯಿಗಳನ್ನು ನಿಗದಿಪಡಿಸಿದೆ ಎಂದು ತಿಳಿಸಿದ್ದಾರೆ. 2023-24ರ ಬಜೆಟ್ ಅಂದಾಜುಗಳಲ್ಲಿ ತನ್ನ ವ್ಯವಹಾರಗಳನ್ನು ನಿರ್ವಹಿಸಲು ಏಜೆನ್ಸಿಯು 946.51 ಕೋಟಿ ರೂಪಾಯಿಗಳನ್ನು ಪಡೆದಿತ್ತು, ನಂತರ ಅದನ್ನು ಪರಿಷ್ಕøತ ಅಂದಾಜುಗಳಲ್ಲಿ 968.86 ಕೋಟಿಗೆ ಹೆಚ್ಚಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.

ಈ ನಿಬಂಧನೆಯು ಸಾರ್ವಜನಿಕ ಸೇವಕರು, ಖಾಸಗಿ ವ್ಯಕ್ತಿಗಳು, ಸಂಸ್ಥೆಗಳು ಮತ್ತು ಇತರ ಗಂಭೀರ ಅಪರಾಧಗಳ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳಲ್ಲಿ ತನಿಖೆ ಮತ್ತು ಕಾನೂನು ಕ್ರಮವನ್ನು ವಹಿಸಿಕೊಡುವ ಕೇಂದ್ರೀಯ ತನಿಖಾ ದಳದ ಸ್ಥಾಪನೆ-ಸಂಬಂಧಿತ ವೆಚ್ಚಕ್ಕಾಗಿ ಎಂದು ಅದು ಹೇಳಿದೆ.

ಭಾರತದ ಭವಿಷ್ಯ ರೂಪಿಸುವ ಬಜೆಟ್ : ಪ್ರಧಾನಿ ಮೋದಿ

ಸಿಬಿಐನ ತರಬೇತಿ ಕೇಂದ್ರಗಳ ಆಧುನೀಕರಣ, ತಾಂತ್ರಿಕ ಮತ್ತು ಫೋರೆನ್ಸಿಕ್ ಬೆಂಬಲ ಘಟಕಗಳ ಸ್ಥಾಪನೆ, ಸಮಗ್ರ ಆಧುನೀಕರಣ ಮತ್ತು ಭೂಮಿ ಖರೀದಿ ಮತ್ತು ಏಜೆನ್ಸಿಗೆ ಕಚೇರಿ ಮತ್ತು ನಿವಾಸ ಕಟ್ಟಡಗಳ ನಿರ್ಮಾಣದಂತಹ ವಿವಿಧ ಯೋಜನೆಗಳಿಗೆ ನಿಬಂಧನೆಯನ್ನು ಹಂಚಿಕೆ ಒಳಗೊಂಡಿದೆ ಎಂದು ದಾಖಲೆ ಹೇಳಿದೆ.

ದೇಶದ ಪ್ರಧಾನ ತನಿಖಾ ಸಂಸ್ಥೆಯು ಬ್ಯಾಂಕ್ ಸಾಲ ವಂಚನೆಗಳು ಮತ್ತು ವಿದೇಶದಲ್ಲಿ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಉನ್ನತ ಮಟ್ಟದ ಹಸ್ತಾಂತರ ಪ್ರಕರಣಗಳಂತಹ ಸಾಂಪ್ರದಾಯಿಕ ಅಪರಾಧಗಳ ಜೊತೆಗೆ ಕೃತಕ ಬುದ್ಧಿಮತ್ತೆ, ಕ್ರಿಪ್ರೋಕರೆನ್ಸಿ ಮತ್ತು ಡಾಕ್ರ್ನೆಟ್ ಪ್ರಾಬಲ್ಯ ಹೊಂದಿರುವ ಉದಯೋನ್ಮುಖ ಅಪರಾಧ ದೃಶ್ಯಗಳನ್ನು ನಿಭಾಯಿಸಲು ತೊಡಗಿದೆ ಎಂದು ಅವರು ವಿವರಿಸಿದ್ದಾರೆ.

RELATED ARTICLES

Latest News