Saturday, April 27, 2024
Homeರಾಜ್ಯಕರ್ನಾಟಕಕ್ಕೆ ಕೇಂದ್ರ ಹಣಕಾಸು ಸಚಿವರ ಕೊಡುಗೆ ಏನು..? : ಸಚಿವ ಖರ್ಗೆ ಪ್ರಶ್ನೆ

ಕರ್ನಾಟಕಕ್ಕೆ ಕೇಂದ್ರ ಹಣಕಾಸು ಸಚಿವರ ಕೊಡುಗೆ ಏನು..? : ಸಚಿವ ಖರ್ಗೆ ಪ್ರಶ್ನೆ

ಬೆಂಗಳೂರು, ಫೆ.1- ಕೇಂದ್ರ ಹಣಕಾಸು ಸಚಿವರು ಕರ್ನಾಟಕದಿಂದ ಆಯ್ಕೆ ಯಾಗಿದ್ದಾರೆ. ಕರ್ನಾಟಕಕ್ಕೆ ಅವರು ನೀಡಿರುವ ಕೊಡುಗೆಯೇನು? ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಭರವಸೆ ಕೊಟ್ಟಂತೆ ಉದ್ಯೋಗ ಸೃಷ್ಟಿಯಾಗಿದೆಯೇ? ಹಾಗಾದರೆ, 10 ಸಾವಿರ ಜನ ಇಸ್ರೇಲ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ ಏಕೆ? ರೈತರ ಆದಾಯ ದುಪ್ಪಟ್ಟು ಮಾಡಿದ್ದಾರೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವದ ಬಡತನ ರೇಖೆಯಲ್ಲಿ ರಾಷ್ಟ್ರ 111 ಸ್ಥಾನದಲ್ಲಿದ್ದರೆ, ಹಸಿವಿನಲ್ಲಿ 113 ನೇ ಸ್ಥಾನದಲ್ಲಿದೆ. ಭ್ರಷ್ಟಾಚಾರದಲ್ಲಿ 98 ನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರದ ಬಜೆಟ್‍ನಲ್ಲಿ ನಮ್ಮ ನಿರೀಕ್ಷೆ ಶೂನ್ಯ ಎಂದು ಅವರು ಹೇಳಿದರು. ಕನ್ನಡಿಗರಿಗೆ ಅನ್ಯಾಯ ವಾಗುತ್ತಲೇ ಇದೆ. ಜಿಎಸ್‍ಟಿ ಮರುಪಾವತಿಯಲ್ಲಿ ಅನ್ಯಾಯ ವಾಗಿದೆ. ಕಲಬುರಗಿಯಲ್ಲಿ ಕೈಗಾರಿಕೆ ಸ್ಥಾಪಿಸುವುದಾಗಿ ನೀಡಿದ ಭರವಸೆ ಈಡೇರಿದೆಯೇ? ಪ್ರಧಾನಿ ನರೇಂದ್ರ ಮೋದಿ ಗ್ಯಾರೆಂಟಿಯಲ್ಲಿ ಶೇ.50ರಷ್ಟು ಕನ್ನಡಿಗರ ಶ್ರಮವಿದೆ.

ಮಾಲ್ಡೀವ್ಸ್ ಗೆ ತಿರುಗೇಟು : ಬಜೆಟ್‍ನಲ್ಲಿ ಲಕ್ಷದ್ವೀಪ ಅಭಿವೃದ್ಧಿ ಘೋಷಣೆ

ಜಲಜೀವನ್ ಮಿಷನ್‍ನಲ್ಲಿ ಶೇ.50 ರಷ್ಟು ಬೆವರಿದೆ. ದೊಡ್ಡ ದೊಡ್ಡ ಮಾತು ಹೇಳುವುದಷ್ಟೇ ಹೊರತು ಬಡವರ ಅನುಕೂಲಕ್ಕಾಗಿ ಯಾವ ಯೋಜನೆ ತಂದಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

RELATED ARTICLES

Latest News