Saturday, April 27, 2024
Homeರಾಜ್ಯಗಿಮಿಕ್ ಇಲ್ಲದ ಕೇಂದ್ರ ಬಜೆಟ್ : ಅಶೋಕ್

ಗಿಮಿಕ್ ಇಲ್ಲದ ಕೇಂದ್ರ ಬಜೆಟ್ : ಅಶೋಕ್

ಬೆಂಗಳೂರು, ಫೆ.1- ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತರಾಮನ್ ಅವರು ಇಂದು ಮಂಡಿಸಿದ ಕೇಂದ್ರ ಸರ್ಕಾರದ ಬಜೆಟ್ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸಹಾಯವಾಗಲಿದ್ದು, ಯಾವುದೇ ಗಿಮಿಕ್ ಇಲ್ಲದ ಮುಂದಿನ ಜನಾಂಗಕ್ಕೆ ಉಪಯೋಗವಾಗಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಮನೆ ಕೊಡುವುದು ಒಳ್ಳೆಯ ಕೆಲಸ.

ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಘೋಷಣೆಗೆ ಪೂರಕವಾದ ಬಜೆಟಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದರೂ ಮತಕ್ಕಾಗಿ ರಾಜಕಾರಣ ಮಾಡಿಲ್ಲ. ಯಾವುದೇ ಉಚಿತ ಗ್ಯಾರೆಂಟಿಗಳನ್ನು ಘೋಷಣೆ ಮಾಡಿಲ್ಲ. ಬಡವರನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದ್ದಾರೆ.

7 ಲಕ್ಷ ರೂ.ವರೆಗೂ ಆದಾಯ ತೆರಿಗೆ ಪಾವತಿ ಇಲ್ಲ. ಆಶಾ ಕಾರ್ಯಕರ್ತೆಯರಿಗೆ ಉಚಿತ ಆಯುಷ್ಮಾನ್ ಯೋಜನೆ ಉಪಯೋಗವಾಗಲಿದೆ. ಮೈಕ್ರೋ ಫುಡ್ ಪ್ರೋಸೆಸಿಂಗ್‍ಗೆ ಸಹಾಯ, ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಹಾಗೂ ಎಲ್ಲಾ ಬೋಗಿಗಳು ವಂದೇ ಭಾರತ್ ಮಾದರಿಯ ರೈಲು ಬೋಗಿಗಳು, ಹೊಸ ವಿಮಾನ ನಿರ್ಮಾಣಕ್ಕೆ ಹಣಕಾಸಿನ ಸೌಲಭ್ಯ ಒದಗಿಸಲಾಗಿದ್ದು, ಪ್ರವಾಸೋದ್ಯಮಕ್ಕೆ ವಿಶೇಷ ಅವಕಾಶ ಹಾಗೂ 1000 ವಿಮಾನ ಖರೀದಿಗೂ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು.

ಮಾಲ್ಡೀವ್ಸ್ ಗೆ ತಿರುಗೇಟು : ಬಜೆಟ್‍ನಲ್ಲಿ ಲಕ್ಷದ್ವೀಪ ಅಭಿವೃದ್ಧಿ ಘೋಷಣೆ

2047ರ ವೇಳೆಗೆ ಭಾರತ ನಂಬರ್ ಒನ್ ಆಗಬೇಕು ಎಂದು ನರೇಂದ್ರ ಮೋದಿ ಹೇಳಿದ್ದಾರೆ. ನಮ್ಮ ಮೇಲೆ ದಬ್ಬಾಳಿಕೆ ಮಾಡಿದ ಬ್ರಿಟಿಷರನ್ನು ಹಿಂದಿಕ್ಕಿದ್ದೇವೆ. ಮುಂದೆ ನಾವು ನಂಬರ್ ಒನ್ ಆಗುತ್ತೇವೆ. ರಾಜ್ಯ ಸರ್ಕಾರ ರಾಜಕಾರಣ ಮಾಡುತ್ತಿದೆ. ರಾಜ್ಯಪಾಲರು ಕರ್ನಾಟಕ ಭಾಷಾ ತಿದ್ದುಪಡಿ ವಿಧೇಯಕ -2024 ಅನ್ನು ವಾಪಸ್ ಕಳುಹಿಸಿದ್ದಾರೆ. ಆದರೆ, ತಿರಸ್ಕರಿಸಿದ್ದಾರೆ ಎಂದು ಈ ವಿಚಾರದಲ್ಲಿ ರಾಜಭವನವನ್ನು ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ. ಸಂವಿಧಾನದಲ್ಲಿ ಇದಕ್ಕೆ ಅವಕಾಶವೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಮೇಕೆದಾಟು ಯೋಜನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಮ್ಮ ಸರ್ಕಾರ ಇದ್ದಾಗ ಪಾದಯಾತ್ರೆ ಮಾಡಿದ್ದರು. ಈಗ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಬೇಡ. ಇಲ್ಲಿರುವ ಬ್ರದರ್, ಪಕ್ಕದ ತಮಿಳುನಾಡಿನ ಬ್ರದರ್ ಜತೆ ಮಾತುಕತೆ ಮಾಡಬೇಕು. ತಮಿಳುನಾಡು ಮೇಕೆದಾಟು ಯೋಜನೆಗೆ ಕಲ್ಲು ಹಾಕಿದ್ದಾರೆ. ಈಗ ತಮಿಳನುನಾಡಿನೊಂದಿಗೆ ಮಾತನಾಡಿ ಆಕ್ಷೇಪ ಮಾಡುವುದನ್ನು ನಿಲ್ಲಿಸಲಿ ಎಂದರು.

ಕೇಂದ್ರ ಸರ್ಕಾರದ ಮೇಲೆ ಈ ಯೋಜನೆಗೆ ನಾವು ಒತ್ತಡ ಹಾಕುತ್ತೇವೆ. ಮೊದಲು ಕೃಷ್ಣೆಯ ಕಣ್ಣೀರು ಒರೆಸಲು ನಿಮ್ಮ ಬಜೆಟ್‍ನಲ್ಲಿ ಹಣ ಮೀಸಲಿಡಿ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ ಅವರು, ಬಳಿಕ ನಾವು ನಿಮ್ಮ ಜೊತೆಗೆ ಕೇಂದ್ರ ಸರ್ಕಾರದ ಬಳಿ ಬರುತ್ತೇವೆ ಎಂದು ತಿಳಿಸಿದರು.

RELATED ARTICLES

Latest News