ಬುಲಂದ್ ಶಹರ್ (ಯುಪಿ), ಅ.22- ಮನೆಯಲ್ಲಿರಿಸದ್ದ ಆಕ್ಸಿಜನ್ ಸಿಲಿಂಡರ್ ಸೋಟಗೊಂಡ ಪರಿಣಾಮ ಮನೆ ಭಾಗಶಃ ಕುಸಿದು ಆರು ಜನರು ಸಾವನ್ನಪ್ಪಿರು ಘಟನೆ ಬುಲಂದ್ ಶಹರ್ ಜಿಲ್ಲೆಯ ಸಿಕಂದರಾಬಾದ್ ಪ್ರದೇಶದಲ್ಲಿ ನಡೆದಿದೆ.
ಕಳೆದ ರಾತ್ರಿ ರಿಯಾಜುದ್ದೀನ್ ಎಂಬುವರ ಮನೆಯಲ್ಲಿ ಈ ಘಟನೆ ಸಂಭವಿಸಿದ್ದು, ಇದರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 19 ಜನರು ವಾಸಿಸುತ್ತಿದ್ದರು ಇದರಲ್ಲಿ ಐವರು ಮೃತಪಟ್ಟರೆ ಮೂವರು ಗಾಯಗೊಂಡಿದ್ದಾರೆ ಜಿಲ್ಲಾಧಿಕಾರಿ ಚಂದ್ರ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ.
ಮೃತರನ್ನು ರಿಯಾಜುದ್ದೀನ್ ಅಲಿಯಾಸ್ ರಾಜು (50), ಅವರ ಪತ್ನಿ ರುಖ್ಸಾನಾ (45), ಸಲ್ಮಾನ್ (16), ತಮನ್ನಾ (24), ಹಿವ್‌ಜಾ (3) ಮತ್ತು ಆಸ್ ಮೊಹಮ್ಮದ್ (26) ಎಂದು ಗುರುತಿಸಲಾಗಿದೆ. ಸಿಕಂದರಾಬಾದ್‌ನ ಆಶಾಪುರಿ ಕಾಲೋನಿಯಲ್ಲಿ ರಾತ್ರಿ 8.30 ರಿಂದ 9 ರ ನಡುವೆ ಸಿಲಿಂಡರ್ ಸೋಟ ಸಂಭವಿಸಿದ್ದು, ಇಡೀ ಮನೆ ಕುಸಿದು ಬಿದ್ದಿದೆ ಎಂದು ಡಿಎಂ ಸಿಂಗ್ ಹೇಳಿದ್ದಾರೆ. ಎಂಟು ನಿವಾಸಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಇತರರು ಸುರಕ್ಷಿತವಾಗಿದ್ದಾರೆ ಎಂದು ಅವರು ಹೇಳಿದರು.
ಘಟನೆ ಸಂಭವಿಸಿದ ತಕ್ಷಣವೇ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಮೀರತ್ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಧ್ರುವ ಕಾಂತ್ ಠಾಕೂರ್ ತಿಳಿಸಿದ್ದಾರೆ ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಪೊಲೀಸ್, ವೈದ್ಯಕೀಯ ಮತ್ತು ಸ್ಥಳೀಯ ಆಡಳಿತದ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆಯಲ್ಲಿ ಜೀವಹಾನಿಗೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲಾಗಿದೆ ಅವಶೇಷಗಳಡಿಯಲ್ಲಿ ಇನ್ನು ಯಾರೂ ಸಿಕ್ಕಿಹಾಕಿಕೊಂಡಿಲ್ಲ ಎಂದು ಬದುಕುಳಿದ ಕುಟುಂಬ ಸದಸ್ಯರು ಹೇಳಿದ್ದರೂ, ರಕ್ಷಣಾ ತಂಡಗಳು ತಮ್ಮ ಕೆಲಸವನ್ನು ನಿರ್ವಹಿಸುವಾಗ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿವೆ ಎಂದು ಅವರು ಹೇಳಿದರು.
ಸೋಟದಲ್ಲಿ ಒಟ್ಟು ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ, ಇದರಿಂದಾಗಿ ಎರಡು ಅಂತಸ್ತಿನ ಮನೆಯ ಮುಂಭಾಗದ ಭಾಗವು ಕುಸಿದಿದೆ ಎಂದು ಎಸ್‌ಎಸ್‌ಪಿ ಕುಮಾರ್ ಹೇಳಿದರು. ರಿಯಾಜುದ್ದೀನ್ ಅವರ ಪತ್ನಿ ಆಸ್ಪತ್ರೆಯಲ್ಲಿ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ಇತ್ತೀಚೆಗೆ ಮನೆಗೆ ಮರಳಿ ಕರೆತರಲಾಯಿತು, ನಂತರದ ಆರೈಕೆಯಲ್ಲಿ ಸಹಾಯ ಮಾಡಲು ಕುಟುಂಬವು ಅದರ ಪರಿಕರಗಳೊಂದಿಗೆ ಆಮ್ಲಜನಕ ಸಿಲಿಂಡರ್ ಅನ್ನು ತಂದಿದೆ ಎಂದು ಹೇಳಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಅವರುತಿಳಿಸಿದ್ದಾರೆ.