Thursday, December 5, 2024
Homeರಾಷ್ಟ್ರೀಯ | Nationalಕಾರಿನಲ್ಲಿ ಸಾಗಿಸುತ್ತಿದ್ದ 5 ಕೋಟಿ ರೂ. ವಶ

ಕಾರಿನಲ್ಲಿ ಸಾಗಿಸುತ್ತಿದ್ದ 5 ಕೋಟಿ ರೂ. ವಶ

Rs-5-cr-seized-from-car-in-pune-raut-alleges-shinde-led-sena-link

ಪುಣೆ, ಅ.22– ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆಯ ನಡುವೆ ಪುಣೆ ಗ್ರಾಮಾಂತರ ಪೊಲೀಸರು ಕಾರಿನಲ್ಲಿ ಸಾಗಿಸುತ್ತಿದ್ದ 5 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ

ಮುಂಬೈ-ಬೆಂಗಳೂರು ಹೆದ್ದಾರಿಯ ಖೇಡ -ಶಿವಪುರ ಪ್ಲಾಜಾ ಬಳಿ ಕಳೆದ ರಾತ್ರಿ ಪೊಲೀಸ್ ನಾಕಾಬಂದಿ ಮಾಡಿ ವಾಹನಗಳ ತಪಾಸಣೆ ವೇಳೆ ಕಾರಿನಲ್ಲಿ ಭಾರಿ ಪ್ರಮಾಣದ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸತಾರಾ ಕಡೆಗೆ ಸಾಗುತ್ತಿದ್ದ ಕಾರನ್ನು ಅಡ್ಡಗಟ್ಟಿ, ತಪಾಸಣೆ ನಡೆಸಿದಾಗ ವಾಹನದಲ್ಲಿದ್ದ ನಾಲ್ವರು ಪ್ರಯಾಣಿದುತ್ತಿದ್ದು ಅವರನ್ನು ಪ್ರಶ್ನಿಸಿದ ವೇಳೆ ಅನುಮಾನ ಬಂದು ವಾಹನ ತಪಾಸಣೆ ವೇಳೆ ಸೀಟು ಹಾಗು ಬ್ಯಾಗ್‌ಗಳಲ್ಲಿ ಇದ್ದ ಸುಮಾರು 5 ಕೋಟಿ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಹಣವನ್ನು ಪೊಲೀಸರು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳು ಎಣಿಕೆ ಮಾಡುತ್ತಿದ್ದಾರೆ. ನಗದು ಯಾರಿಗೆ ಸೇರಿದ್ದು ಮತ್ತು ಇತರ ಮೂಲಗಳ ಬಗ್ಗೆ ತನಿಖೆ ಪ್ರಗತಿಯಲ್ಲಿವೆ ಎಂದು ಪುಣೆ ಗ್ರಾಮಾಂತರ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಏಕನಾಥ್ ಶಿಂಧೆ, ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಅವರು ರಾತ್ರಿ ಎಕ್ಸ್‌ನಲ್ಲಿ ಶಿವಸೇನೆಯ ಮುಖ್ಯಮಂತ್ರಿ ಏಕನಾಥ್ ಶಿಂಧೆ ಆಪ್ತ ಶಾಸಕರೊಬ್ಬರ ಕಾರಿನಿಂದ 15 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದುಹೇಳಿದ್ದರು.

RELATED ARTICLES

Latest News