Sunday, July 20, 2025
Homeರಾಷ್ಟ್ರೀಯ | Nationalಉದ್ಯಮಿಯನ್ನು ಕಟ್ಟಿ ಹಾಕಿ ಚಿನ್ನ,ಹಣ ಲೂಟಿ

ಉದ್ಯಮಿಯನ್ನು ಕಟ್ಟಿ ಹಾಕಿ ಚಿನ್ನ,ಹಣ ಲೂಟಿ

Businessman tied up, gold, cash looted

ಪುಣೆ, ಜು.20- ಬಂಗಲೆಯೊಂದಕ್ಕೆ ದರೋಡೆಕೋರರು ನುಗ್ಗಿ,ಉದ್ಯಮಿಯನ್ನು ಕಟ್ಟಿಹಾಕಿ ಚಿನ್ನಾಭರಣ ಸೇರಿ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

ಪಿಂಪ್ರಿ ಚಿಂಚ್‌ವಾಡ್‌ನ ನಿಗ್ಡಿ ಪ್ರಾಧಿಕಾರ್‌ ಪ್ರದೇಶದಲ್ಲಿ ಕಳೆದ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಾಥಮಿಕ ತನಿಖೆಯ ಪ್ರಕಾರ ಮೂರರಿಂದ ನಾಲ್ಕು ದುಷ್ಕರ್ಮಿಗಳು ಬಂಗಲೆಗೆ ನುಗ್ಗಿ, ವೃದ್ಧ ಉದ್ಯಮಿಯನ್ನು ಬೆದರಿಸಿ ಕೈಗಳನ್ನು ಕಟ್ಟಿಹಾಕಿ ಮನೆಯನ್ನೆಲಾ ಜಾಲಾಡಿ ವಸ್ತುಗಳನ್ನು ದೋಈಚಲಾಗಿದೆ ಎಂದು ಪಿಂಪ್ರಿ ಚಿಂಚ್‌ವಾಡ್‌ನ ಉಪ ಪೊಲೀಸ್‌‍ ಆಯುಕ್ತ ಶಿವಾಜಿ ಪವಾರ್‌ತಿಳಿಸಿದ್ದಾರೆ.

ಮನೆಯಿಂದ ಏನು ಕದ್ದಿದ್ದಾರೆ ಎಂದು ಇನ್ನೂ ಸರಿಯಾಗಿ ಗೊತ್ತಾಗಿಲ್ಲ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

RELATED ARTICLES

Latest News