ಬೆಂಗಳೂರು, ಸೆ.19- ಸಿನಿಮಾ ಹೆಸರಿನಲ್ಲಿ ಯುವತಿಯೊಬ್ಬಳು ತನ್ನ ಗ್ಯಾಂಗ್‌ನೊಂದಿಗೆ ಉದ್ಯಮಿಯೊಬ್ಬರಿಗೆ ಹನಿಟ್ರ್ಯಾಪ್ ಮೂಲಕ ಬ್ಲಾಕ್‌ಮೇಲ್ ಮಾಡಿ 40 ಲಕ್ಷ ರೂ. ಸುಲಿಗೆ ಮಾಡಿರುವ ಬಗ್ಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದ್ಯಮಿಯೊಬ್ಬರು ಎಂ.ಜಿ.ರಸ್ತೆಯ ಖಾಸಗಿ ಕಂಪನಿಯನ್ನು ನಡೆಸುತ್ತಿದ್ದು, ನಾಲ್ಕು ವರ್ಷದ ಹಿಂದೆ ಕುಟುಂಬ ಎಂಬ ಆ್ಯಪ್ ಮೂಲಕ ಯುವತಿಯ ಪರಿಚಯವಾಗಿದೆ.
ಆಕೆ ತಾನು ಸಿನಿಮಾ ಮಾಡುತ್ತಿರುವುದಾಗಿ ಹೇಳಿ, ಹಣದ ಅವಶ್ಯಕತೆ ಇದೆ ಎಂದು ಹೇಳಿ 4.25 ಲಕ್ಷ ರೂ.ಗಳನ್ನು ನಿರ್ದೇಶಕರೊಬ್ಬರ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.ತದನಂತರದಲ್ಲಿ ಉದ್ಯಮಿ ತಾನು ನೀಡಿದ ಹಣವನ್ನು ವಾಪಸ್ ಕೊಡುವಂತೆ ಕೇಳಿದಾಗ ಯುವತಿ ವಾಟ್‌್ಸಆ್ಯಪ್ ಮೂಲಕ ಕರೆ ಮಾಡಿ, ಮನೆಗೆ ಬಂದರೆ ಹಣ ಕೊಡುವುದಾಗಿ ಆಹ್ವಾನ ನೀಡಿದ್ದಾಳೆ.
ಈಕೆಯ ಮಾತನ್ನು ನಂಬಿದ ಉದ್ಯಮಿ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆಯಲ್ಲಿ ವಾಸವಿದ್ದ ಯುವತಿ ಮನೆಗೆ ಹೋಗಿದ್ದಾರೆ. ಅಲ್ಲಿ ಹಣ ಕೇಳಿದಾಗ ಆಕೆ ಅನುಚಿತವಾಗಿ ವರ್ತಿಸಿದ್ದು, ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿಕೊಂಡು ಅದನ್ನು ವಿಡಿಯೋ ಮಾಡಿಕೊಂಡಿದ್ದಾಳೆ ಎಂದು ದೂರು ನೀಡಲಾಗಿದೆ.
ನಂತರದ ದಿನಗಳಲ್ಲಿ ನಾನು ನಿನಗೆ ಹಣ ಕೊಡುವುದಿಲ್ಲ. ನೀನೇ ನನಗೆ ಹಣ ಕೊಡಬೇಕು. ಇಲ್ಲದಿದ್ದರೆ ಈ ವಿಡಿಯೋವನ್ನು ಮೀಡಿಯಾಗೆ ಕೊಡುತ್ತೇನೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತೇನೆ ಎಂದು ಹೆದರಿಸಿದ್ದಾಳೆ.ಮುಂದುವರೆದು ಹೊಸ ದ್ವಿಚಕ್ರ ವಾಹನವನ್ನೂ ಖರೀದಿಸಿ ಅದರ ಇಎಮ್‌ಐ ಹಣವನ್ನು ಪಾವತಿಸುವಂತೆ ಉದ್ಯಮಿಗೆ ಹೇಳಿದ್ದಾಳೆ.
ಇಷ್ಟಕ್ಕೇ ಸುಮನಾಗದ ಆಕೆ ಮತ್ತೆ ಉದ್ಯಮಿಗೆ ಕರೆ ಮಾಡಿ ನನಗೆ ಬ್ರ್ಯಾಸ್‌ಲೈಟ್ ಕೊಡಿಸುವಂತೆ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಹಣವನ್ನು ನಗದು ರೂಪದಲ್ಲಿ ಬ್ಯಾಂಕ್ ಖಾತೆಯ ಮೂಲಕ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ಪಡೆದುಕೊಂಡು ದಿಲೀಪ್ ಹಾಗೂ ರವಿಕುಮಾರ್ ಎಂಬುವರೊಂದಿಗೆ ವಾಟ್‌್ಸಆ್ಯಪ್ ಕರೆ ಮೂಲಕ ಮಾತನಾಡಿಸಿ ಕೇಳಿದಷ್ಟು ಹಣ ಕೊಡದಿದ್ದರೆ ಖಾಸಗಿ ವಿಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಹಂತಹಂತವಾಗಿ 40 ಲಕ್ಷ ರೂ. ಹಣವನ್ನು ಪಡೆದುಕೊಂಡು, ಹೆಚ್ಚುವರಿಯಾಗಿ ಕಾರು ಕೊಡಿಸಬೇಕು. ಇಲ್ಲದಿದ್ದರೆ. ಕಾರು ತೆಗೆದುಕೊಳ್ಳಲು 20 ಲಕ್ಷ ರೂ. ಹಣ ನೀಡಬೇಕೆಂದು ಬ್ಲಾಕ್‌ಮೇಲ್ ಮಾಡಿದ್ದಾಳೆ.ಇದರಿಂದ ಕಂಗಾಲಾದ ಉದ್ಯಮಿ ಪೊಲೀಸರ ಮೊರೆ ಹೋಗಿದ್ದಾರೆ. ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ.