Sunday, October 6, 2024
Homeರಾಷ್ಟ್ರೀಯ | Nationalಸೂಟ್‌ಕೇಸ್‌‍ನಲ್ಲಿತ್ತು ಮಹಿಳೆ ಶವ.!

ಸೂಟ್‌ಕೇಸ್‌‍ನಲ್ಲಿತ್ತು ಮಹಿಳೆ ಶವ.!

Chennai: Woman's Body Found In Suitcase At Thoraipakkam, Police Launch Probe

ಚೆನ್ನೈ,ಸೆ.19- ದುಷ್ಕರ್ಮಿಗಳು ಮಹಿಳೆಯನ್ನು ಕೊಲೆ ಮಾಡಿ ಆಕೆಯ ಶವವನ್ನು ಸೂಟ್‌ಕೇಸ್‌‍ನಲ್ಲಿಟ್ಟು ಅದನ್ನು ಜನವಸತಿ ಪ್ರದೇಶದಲ್ಲಿ ಇಟ್ಟು ಪರಾರಿಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಇಂದು ಬೆಳಗ್ಗೆ ಚೆನ್ನೈನಲ್ಲಿ ಎಸೆದಿದ್ದ ಸೂಟ್‌ಕೇಸ್‌‍ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ ಆಕೆಯನ್ನು ಬೇರೆಡೆ ಕೊಲೆ ಮಾಡಿ ಶವವನ್ನು ಸೂಟ್‌ಕೇಸ್‌‍ನಲ್ಲಿ ಇಟ್ಟು ಅದನ್ನು ತೊರೈಪಾಕ್ಕಂನ ಐಟಿ ಕಾರಿಡಾರ್‌ಗೆ ಹೊಂದಿಕೊಂಡಿರುವ ವಸತಿ ಪ್ರದೇಶದಲ್ಲಿ ಇಟ್ಟು ಕೊಲೆಗುಡುಕರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾವು ಮುಂಜಾನೆಯಿಂದಲೂ ಪ್ರದೇಶದಲ್ಲಿ ಬೀಟ್‌ ಮಾಡುತ್ತಿದ್ದೇವೂ ಆದರೆ, ಕೊಲೆಗುಡುಕರು ಮಹಿಳೆಯನ್ನು ಬೇರೆ ಕಡೆ ಕೊಲೆ ಮಾಡಿ ಶವವನ್ನು ಇಲ್ಲಿ ಎಸೆಯಲಾಗಿದೆ ಎಂದು ನಾವು ಶಂಕಿಸಿದ್ದೇವೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂತ್ರಸ್ತೆಯ ಗುರುತು ಇನ್ನೂ ತಿಳಿದುಬಂದಿಲ್ಲ ಮತ್ತು ಆರೋಪಿಗಳನ್ನು ಬಂಧಿಸಲು ಅಧಿಕಾರಿಗಳು ಕಾರ್ಯಪ್ರವತ್ತರಾಗಿದ್ದಾರೆ.ಹೆಚ್ಚುತ್ತಿರುವ ಅಪರಾಧಗಳ ಬಗ್ಗೆ ಪ್ರತಿಪಕ್ಷಗಳ ಟೀಕೆಗಳ ನಡುವೆ ಈ ಘಟನೆ ನಡೆದಿದೆ, ಆಡಳಿತಾರೂಢ ಡಿಎಂಕೆ ಆರೋಪವನ್ನು ನಿರಾಕರಿಸಿದೆ.

RELATED ARTICLES

Latest News