Thursday, September 19, 2024
Homeಬೆಂಗಳೂರುನೀರಿನ ಬಾಕಿ ಬಿಲ್ ವಸೂಲಿಗೆ ಜಲಮಂಡಳಿ ಹೊಸ ಆಫರ್

ನೀರಿನ ಬಾಕಿ ಬಿಲ್ ವಸೂಲಿಗೆ ಜಲಮಂಡಳಿ ಹೊಸ ಆಫರ್

ಬೆಂಗಳೂರು,ಆ.8- ಬರಬೇಕಿರುವ ಕೋಟಿ ಕೋಟಿ ರೂ.ಗಳ ನೀರಿನ ಬಿಲ್ ವಸೂಲಿಗೆ ಜಲಮಂಡಳಿ ಬಂಪರ್ ಆಫರ್ ನೀಡಿದೆ.
ಈ ಹಿಂದೆ ಬೆಂಗಳೂರು ನಗರ ಸಂಚಾರಿ ಪೊಲೀಸರು ಹಾಗೂ ಬಿಬಿಎಂಪಿಯವರು ದಂಡ ವಸೂಲಿಗಾಗಿ ಮಾಡಿದ್ದ ಒನ್ ಟೈಮ್ ಸೆಟಲ್‍ಮೆಂಟ್ ಯೋಜನೆ ಮಾದರಿಯಲ್ಲೇ ಬಾಕಿ ವಸೂಲಿಗೆ ಜಲಮಂಡಳಿ ಮುಂದಾಗಿದೆ.

ಜಲಮಂಡಳಿ ಈಗಾಗಲೇ ಸಾಲದ ಹೊರೆಯಿಂದ ತತ್ತರಿಸಿ ಹೋಗಿದೆ ಇದರ ಜೊತೆಗೆ ನೀರಿನ ಬಾಕಿ ಬಿಲ್ ಹನುಮಂತನ ಬಾಲದಂತೆ ಬೆಳೆಯು ತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಈ ತೀರ್ಮಾನ ಕೈಗೊಳ್ಳಲಾಗುತ್ತಿದೆ ಎಂದು ಮಂಡಳಿ ಅಧ್ಯಕ್ಷ ರಾಮ್‍ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಈ ಹಿಂದೆ ಪೊಲೀಸ್ ಇಲಾಖೆ ಹಾಗೂ ಪಾಲಿಕೆಯ ಅನುಸರಿಸಿದ್ದ ಮಾರ್ಗವನ್ನ ಅನುಸರಿಸಲು ಜಲಮಂಡಳಿ ಪ್ಲ್ಯಾನ್ ಮಾಡಿದೆ. ಟ್ರಾಫಿಕ್ ಫೈನ್ ಪಾವತಿಗಾಗಿ ಪೊಲೀಸ್ ಇಲಾಖೆ ನೀಡಿದ್ದ ಶೇ.50 ರ ಆಫರ್ ಮತ್ತು ಪಾಲಿಕೆ ತೆರಿಗೆದಾರರಿಗೆ ನೀಡಿದ್ದ ಒನ್ ಟೈಂ ಸೆಟಲ್ಮೆಂಟ್ ಆಫರ್ ಗಳಂತೆ ನಾವು ಕೂಡ ಜನರಿಗೆ ಬಿಲ್ ಪಾವತಿಸಲು ಆಫರ್ ನೀಡಲು ತೀರ್ಮಾನಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸರ್ಕಾರಿ, ಖಾಸಗಿ ಸಂಸ್ಥೆಗಳು ಹಾಗೂ ನಾಗರೀಕರಿಂದ ಸುಮಾರು 600 ಕೋಟಿಯಷ್ಟು ಬಾಕಿ ಬಿಲ್ ಪಾವತಿಯಾಗಬೇಕಿದೆ ಈಗಾಗಲೇ ಬಿಲ್ ಬಾಕಿ ಇರುವವರಿಗೆ ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಶೇ. 50ರ ಆಫರ್ ಅಥವಾ ದಂಡ, ಬಡ್ಡಿ ಇಲ್ಲದಂತೆ ಓನ್ ಟೈಂ ಸೆಂಟಲ್ ಮೆಂಟ್ ಆಫರ್ ಕೊಡುವ ನಿಟ್ಟಿನಲ್ಲಿ ಯೋಜನೆಗಾಗಿ ಪ್ಲ್ಯಾನ್ ಸಿದ್ದಪಡಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಬಾಕಿ ಎಷ್ಟಿದೆ
ಬಿಬಿಎಂಪಿ: 23 ಕೋಟಿ.
ಕೇಂದ್ತ ಸರ್ಕಾರ ಸಂಸ್ಥೆಗಳಿಂದ: 60 ಕೋಟಿಗೂ ಅ„ಕ.
ರಾಜ್ಯ ಸರ್ಕಾರದ ಸಂಸ್ಥೆಗಳಿಂದ: 87 ಕೋಟಿ.
ಶಾಸನಬದ್ದ ಸಂಸ್ಥೆಗಳಿಂದ : 10 ಕೋಟಿ.
ಖಾಸಗಿ ಅಪಾರ್ಟ್‍ಮೆಂಟ್, ಮನೆಗಳಿಂದ ಸುಮಾರು 100 ಕೋಟಿಗೂ ಅ„ಕ ಬಾಕಿ ಬರಬೇಕಿದೆ.
ಇನ್ನೂ.. ಕೇಂದ್ರ, ರಾಜ್ಯ ಹಾಗೂ ಬಿಬಿಎಂಪಿ ವ್ಯಾಪ್ತಿಯಿಂದಲೇ ಸುಮಾರು 180 ಕೋಟಿಗೂ ಅ„ಕ ನೀರಿನ ಬಿಲ್ ಬಾಕಿ ಬರಬೇಕಿದೆ. ಇದನ್ನ ಹೊರತುಪಡಿಸಿ ಡೊಮೆಸ್ಟಿಕ್, ಇಂಡಸ್ಟ್ರೀಸ್, ಭಾಗಗಳಿಂದ ಸುಮಾರು 220 ಕೋಟಿ ಬಾಕಿ ಸಂದಾಯ ಆಗಬೇಕಿದೆ. ಅಲ್ಲದೆ ಇವುಗಳಿಗೆ ಹಾಕಿರುವ ಬಡ್ಡಿ ದಂಡ ಸೇರಿದಂತೆ ಒಟ್ಟಾರೆ ಹಣ 600 ಕೋಟಿ ಅ„ಕ ಹಣ ವಸೂಲಿಯಾಗಬೇಕಿದೆ.

ಸದ್ಯ ಕಳೆದ ಹತ್ತು ಹನ್ನೆರಡು ವರ್ಷಗಳಿಂದ ದರ ಕೂಡ ಏರಿಕೆಯಾಗಿಲ್ಲ. ಇತ್ತ ಇಲಾಖೆ ನಷ್ಟದಲ್ಲಿರುವ ಕಾರಣ ಪ್ರತಿ ತಿಂಗಳು ಖರ್ಚು ವೆಚ್ಚಕ್ಕಾಗಿ ಸರ್ಕಾರದ ಮೇಲೆ 18 ಕೋಟಿ ಹಣಕ್ಕೆ ಅವಲಂಬನೆಯಾಗಿದೆ. ಈ ಎಲ್ಲಾ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ಈ ಆಫರ್ ಮೂಲಕವಾದರೂ ಬೊಕ್ಕಸಕ್ಕೆ ತುಂಬಿಸಲು ಈ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮನೋಹರ್ ಮಾಹಿತಿ ನೀಡಿದ್ದಾರೆ.

RELATED ARTICLES

Latest News