ಬೆಂಗಳೂರು,ಡಿ.15- ಇತ್ತಿಚೆಗೆ ಹೃದಯ ಸಂಬಂ ಕಾಯಿಲೆಗಳು ಹೆಚ್ಚಾಗುತ್ತಿರುವುದು ವೈದ್ಯರ ಆತಂಕಕ್ಕೆ ಕಾರಣವಾಗಿದೆ.ದೇಶದಲ್ಲೇ ನಂಬರ್ ಒನ್ ಹೃದಯ ರೋಗ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜಯದೇವ ಹೃದ್ರೋಗ ಆಸ್ಪತ್ರೆ ವೈದ್ಯರಿಗೂ ಇದು ತಲೆನೋವಾಗಿ ಪರಿಣಮಿಸಿದೆ.
ಇತ್ತಿಚೆಗೆ ಹೃದಯ ಸಂಬಂ ಕಾಯಿಲೆಯಲ್ಲಿ ಬಳತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ನಮ್ಮ ಆಸ್ಪತ್ರೆಗೆ ಹೃದಯದ ಪರೀಕ್ಷೆಗೆ ಬರುವವರ ಸಂಖ್ಯೆ ಯೂ ಹೆಚ್ಚಳವಾಗಿರುವುದು ಆತಂಕಕ್ಕೆ ಕಾರಣವಾಗಿದೆ ಎನ್ನುತ್ತಾರೆ ಜಯದೇವ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಮಂಜುನಾಥ್ ಅವರು. ನಮ್ಮ ಆಸ್ಪತ್ರೆಯ ಉಪವಿಭಾಗಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಚಿಕಿತ್ಸೆ ನೀಡುತ್ತಿದ್ದೇವೆ. ತುರ್ತು ಚಿಕಿತ್ಸೆಗಳು ಬಂದಾಗ ಮತ್ತೆ ಮುಖ್ಯ ಆಸ್ಪತ್ರೆಗೆ ಬರಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಸಂಸದ ಧೀರಜ್ ಸಾಹು ಬಚ್ಚಿಟ್ಟಿ ಚಿನ್ನ ಪತ್ತೆಗೆ ಹೈಟೆಕ್ ತಂತ್ರ
ನಮ್ಮ ಆಸ್ಪತ್ರೆಯಲ್ಲಿ 2100 ಬೆಡ್ ಸಾಮಥ್ರ್ಯದ ವಾರ್ಡ್‍ಗಳಿದ್ದರೂ ನಾಲ್ಕು ಉಪ ವಿಭಾಗದಿಂದಲೂ ಬರುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನಮ್ಮಲ್ಲಿ 2100 ಬೆಡ್ ವ್ಯವಸ್ಥೆ ಇದ್ದು ಯಾವುದೇ ತುರ್ತು ಸೇವೆ ನಾವು ಸಿದ್ದರಾಗಿದ್ದೇವೆ ಆದರೆ, ಮಕ್ಕಳ ವಿಭಾಗದಲ್ಲಿ ಹೆಚ್ಚಾದ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ವೈದ್ಯರಲ್ಲಿ ಒತ್ತಡ ಹೆಚ್ಚಿಸುತ್ತಿದೆ ಎಂದು ಅವರು ಹೇಳಿದ್ದಾರೆ.