Sunday, April 28, 2024
Homeರಾಷ್ಟ್ರೀಯಬೆಂಗಳೂರು : ಚರ್ಚ್ ಸ್ಪೋಟದ ಆರೋಪಿಗೆ ಪೆರೋಲ್ ಮಂಜೂರು

ಬೆಂಗಳೂರು : ಚರ್ಚ್ ಸ್ಪೋಟದ ಆರೋಪಿಗೆ ಪೆರೋಲ್ ಮಂಜೂರು

ಬೆಂಗಳೂರು, ಡಿ 15 (ಪಿಟಿಐ) : ಚರ್ಚ್ ಸ್ಪೋಟ ಪ್ರಕರಣದಲ್ಲಿ ಜೀವಾವ ಶಿಕ್ಷೆ ಅನುಭವಿಸುತ್ತಿರುವ ಅಪರಾಗೆ ಕರ್ನಾಟಕ ಹೈಕೋರ್ಟ್ ಎರಡು ವಾರಗಳ ಪೆರೋಲ್ ಮಂಜೂರು ಮಾಡಿದೆ. ಬಂತ ಮೊಹಮ್ಮದ್ ಅಖಿಲ್ ಜುಲೈ 2000 ರಲ್ಲಿ ಬೆಂಗಳೂರಿನಲ್ಲಿ ನಡೆದ ಚರ್ಚ್ ಸ್ಪೋಟ ಪ್ರಕರಣದ ಅಪರಾಗಳಲ್ಲಿ ಒಬ್ಬರಾಗಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಗೋವಾದಲ್ಲಿ ಉಂಟಾದ ಸ್ಪೋಟಗಳಲ್ಲಿ ದೀನದರ್ ಅಂಜುಮನ್ ಪಂಥಕ್ಕೆ ಸೇರಿದ 24 ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗಿದೆ. ಜೀವಾವ ಶಿಕ್ಷೆಗೆ ಗುರಿಯಾದ 13 ಮಂದಿಯಲ್ಲಿ ಅಖಿಲ್ ಕೂಡ ಒಬ್ಬ.

ಅಖಿಲ್ ಅವರ ಪತ್ನಿ ಮುಬೀನ್ ಉನ್ನಿಸ್ಸಾ ಬೇಗಂ ಅವರು ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ವಿಚಾರಣೆ ನಡೆಸಿದರು.ಅಪರಾಯು ಇಂದಿನವರೆಗೆ 23 ವರ್ಷಗಳ ಜೈಲುವಾಸವನ್ನು ವಿನಾಯಿತಿ ಇಲ್ಲದೆ ಅನುಭವಿಸಿದ್ದಾರೆ ಮತ್ತು 23 ವರ್ಷಗಳವರೆಗೆ ಪೆರೋಲ್ ನೀಡಲಾಗಿಲ್ಲ.

ಅಪರಾಯ ಪತ್ನಿ ಈಗ ನ್ಯಾಯಾಲಯದ ಮುಂದೆ ತಾನು ಅನುಭವಿಸುತ್ತಿರುವ ನೋವು ಹಾಗೂ ಇತರ ಕುಟುಂಬ ಸದಸ್ಯರು ಸಹ ವಯಸ್ಸಾದವರು ಮತ್ತು ಕಾಯಿಲೆಗಳಿಂದ ಬಳಲುತ್ತಿರುವ ಕಾರಣ ಕುಟುಂಬದಲ್ಲಿ ತನ್ನ ಗಂಡನ ಉಪಸ್ಥಿತಿಯು ತುಂಬಾ ಅವಶ್ಯಕವಾಗಿದೆ ಎಂದು ಮಾಡಿಕೊಂಡ ಮನವಿ ಪರಿಗಣಿಸಿ ಪೆರೋಲ್ ಮಂಜೂರು ಮಾಡಲಾಗಿದೆ ಎಂದು ನ್ಯಾಯಾಲಯವು ತನ್ನ ಇತ್ತೀಚಿನ ತೀರ್ಪಿನಲ್ಲಿ ತಿಳಿಸಿದೆ.

ಶಿಮ್ಲಾಗಿಂತಲೂ ತಂಪಾದ ದೆಹಲಿ

ಪೆರೋಲ್ ಅವಯಲ್ಲಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು ಮತ್ತು ಪೊಲೀಸ್ ಮಹಾನಿರ್ದೇಶಕರು, ಕಾರಾಗೃಹಗಳು ಮತ್ತು ಸುಧಾರಣಾ ಸೇವೆಗಳು, ಸಾಮಾನ್ಯವಾಗಿ ನಿಗದಿಪಡಿಸಿದಂತೆ ಕಟ್ಟುನಿಟ್ಟಾದ ಷರತ್ತುಗಳನ್ನು ವಿಸಲು, ಬಂತ ಮತ್ತೆ ಜೈಲಿಗೆ ಹಿಂದಿರುಗಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರು ಯಾವುದೇ ಇತರ ಅಪರಾಧವನ್ನು ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಆದೇಶಿಸಲಾಗಿದೆ.

ಮುಬೀನ್ ಉನ್ನಿಸ್ಸಾ ಬೇಗಂ ಅವರು ತಮ್ಮ ಪತಿಗೆ 90 ದಿನಗಳ ಪೆರೋಲ್ ನೀಡುವಂತೆ ಕೋರಿದ್ದರು. ಅರ್ಜಿದಾರರ ಪತ್ನಿ ಪೆರೋಲ್‍ನ ವಿಸ್ತರಣೆಯನ್ನು ಕೋರಬಹುದು ಎಂದು ನ್ಯಾಯಾಲಯವು ಅರ್ಜಿದಾರನ ಪತಿ – ಅಪರಾ ಪೆರೋಲ್‍ನಲ್ಲಿ ಹೊರಗಿರುವಾಗ ಅವರ ನಡವಳಿಕೆಯನ್ನು ಪರಿಗಣಿಸುತ್ತದೆ ಎಂದು ಹೇಳಿದೆ.

RELATED ARTICLES

Latest News